ಲಖನೌ (ಉತ್ತರಪ್ರದೇಶದ): ಇಂದಿನಿಂದ ಉತ್ತರಪ್ರದೇಶದಲ್ಲಿ ಬಜೆಟ್ ಅಧಿವೇಶನ ಪ್ರಾರಂಭವಾಗಿದೆ. ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡುತ್ತಿದ್ದ ಸಂದರ್ಭ ಸಮಾಜವಾದಿ ಪಕ್ಷ ಹೈಡ್ರಾಮಾ ನಡೆಸಿದೆ.
ಹೌದು, ರಾಜ್ಯಪಾಲ ಆನಂದಿಬೆನ್ ಪಟೇಲ್ ಭಾಷಣ ಮಾಡುತ್ತಿದ್ದ ವೇಳೆ ಆಡಳಿತಾರೂಢ BJP ಬಿಜೆಪಿ ವಿರುದ್ಧ ಸಮಾಜವಾದಿ ಪಕ್ಷದ ಶಾಸಕರು ವಿಧಾನಸಭೆಯೊಳಗೆ ಘೋಷಣೆಕೂಗಿದರು. ರಾಜ್ಯಪಾಲರ ಭಾಷಣಕ್ಕೆ ಅಡ್ಡಿ ಪಡಿಸಿದರು. ಅಷ್ಟೇ ಅಲ್ಲ ಬಳಿಕ ಅಧಿವೇಶನದಿಂದ ಹೊರ ನಡೆದು ಯೋಗಿ ಆದಿತ್ಯನಾಥ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.