ETV Bharat / bharat

ಶೀ-ಬಾಕ್ಸ್ ಮೂಲಕ 1,349 ದೂರುಗಳ ಸ್ವೀಕಾರ: ಸ್ಮೃತಿ ಇರಾನಿ.. ಏನಿದು ಶೀ ಬಾಕ್ಸ್​?

author img

By

Published : Jul 29, 2022, 4:58 PM IST

ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಶುಕ್ರವಾರ ಲೋಕಸಭೆಯಲ್ಲಿ ಲಿಖಿತ ಉತ್ತರದಲ್ಲಿ, ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಆನ್‌ಲೈನ್ ದೂರು ಪೋರ್ಟಲ್​ನಲ್ಲಿ ಸ್ವೀಕರಿಸಲಾದ ದೂರುಗಳ ಬಗ್ಗೆ ಮಾಹಿತಿ ನೀಡಿದರು.

Smriti Irani
ಸ್ಮೃತಿ ಇರಾನಿ

ನವದೆಹಲಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಆನ್‌ಲೈನ್ ದೂರು ಪೋರ್ಟಲ್‌ಗೆ, 2017 ರಲ್ಲಿ ಪ್ರಾರಂಭವಾದಾಗಿನಿಂದ ಜುಲೈ 27, 2022 ರವರೆಗೆ ಕೇವಲ 1,349 ದೂರುಗಳು ಬಂದಿವೆ. ಕೆಲಸದ ಸ್ಥಳದಲ್ಲಿ ಎಷ್ಟು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಲಾಗಿದೆ ಎಂಬುದರ ಅಂಕಿ- ಅಂಶವನ್ನು ಕೇಂದ್ರ ಸಚಿವೆ ಸ್ಮೃತಿ ಇರಾನಿ ಶುಕ್ರವಾರ ಲೋಕಸಭೆಗೆ ಲಿಖಿತವಾಗಿ ನೀಡಿದ್ದಾರೆ.

ಕೇಂದ್ರದ ಆನ್‌ಲೈನ್ ದೂರು ಪೋರ್ಟಲ್ 'ಲೈಂಗಿಕ ಕಿರುಕುಳ ಎಲೆಕ್ಟ್ರಾನಿಕ್ ಬಾಕ್ಸ್ (ಶೀ-ಬಾಕ್ಸ್)' ಎಂಬ ಶೀರ್ಷಿಕೆಯಡಿಯಲ್ಲಿ ಸ್ಥಾಪಿಸಲಾಗಿತ್ತು. ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳದ ದೂರುಗಳ ದಾಖಲಾತಿಯನ್ನು ಪಡೆಯಲು, ಕೆಲಸದ ಸ್ಥಳದಲ್ಲಿ ಮಹಿಳೆಯರ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಕಾಯಿದೆ 2013 ರ ಅಡಿ 2017 ರಲ್ಲಿ ಸ್ಥಾಪಿಸಲಾಯಿತು. ಶೀ-ಬಾಕ್ಸ್ ಮೂಲಕ ಸಲ್ಲಿಸಲಾದ ದೂರು ಸೂಕ್ತ ಕ್ರಮಕ್ಕಾಗಿ ನೇರವಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ತಲುಪುತ್ತದೆ ಎಂದು ಇರಾನಿ ಹೇಳಿದ್ದಾರೆ.

ಇದನ್ನೂ ಓದಿ: ಸ್ಮೃತಿ ಇರಾನಿ ಮಗಳ ಅಕ್ರಮ ಬಾರ್​ ಆರೋಪ: 'ಕೈ' ನಾಯಕರಿಗೆ ದೆಹಲಿ ಹೈಕೋರ್ಟ್​ ಸಮನ್ಸ್​, ಪೋಸ್ಟ್ ಡಿಲೀಟ್ ಮಾಡಲು ಸೂಚನೆ

ಶೀ-ಬಾಕ್ಸ್‌ನಲ್ಲಿ ದಾಖಲಾದ ದೂರಿನ ಸೂಕ್ತ ಕ್ರಮಕ್ಕಾಗಿ ಇದು ನೇರವಾಗಿ ಸಂಬಂಧಿಸಿದ ಅಧಿಕಾರಿಗಳಿಗೆ ತಲುಪುತ್ತದೆ. ಪರಿಹರಿಸಲಾದ ಪ್ರಕರಣಗಳ ಸಂಖ್ಯೆಯ ಅಂಕಿ- ಅಂಶಗಳ ಡೇಟಾವನ್ನು ಆಯಾ ಅಧಿಕಾರಿಗಳು ಕಾಯಿದೆಯಡಿ ನಿರ್ವಹಿಸುತ್ತಾರೆ. ಒಟ್ಟು ಪ್ರಕರಣಗಳ ಸಂಖ್ಯೆ ವೆಬ್‌ಸೈಟ್ 2017 ರಲ್ಲಿ ಪ್ರಾರಂಭವಾದಾಗಿನಿಂದ 27.07.2022 ರವರೆಗೆ 1,349 ಆಗಿದೆ ಎಂದು ಇರಾನಿ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.