ಆಕಿವೀಡು (ಆಂಧ್ರಪ್ರದೇಶ): ಪ್ರೇಮಿಯೊಬ್ಬ ತಾನು ಪ್ರೀತಿಸುತ್ತಿದ್ದ ಯುವತಿಯ ತಾಯಿ ಮತ್ತು ಅಜ್ಜನ ಮೇಲೆ ಮನಬಂದಂತೆ ಹಲ್ಲೆ ನಡೆಸಿರುವ ಘಟನೆ ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಅಕಿವೀಡು ಮಂಡಲದ ಸಿದ್ದಾಪುರ ಗ್ರಾಮದಲ್ಲಿ ಜರುಗಿದೆ.
ಪೊಲೀಸರು ಮತ್ತು ಸ್ಥಳೀಯರ ಪ್ರಕಾರ, ಸಿದ್ದಾಪುರ ಗ್ರಾಮದಲ್ಲಿ ಮುಸ್ಲಿಂ ವೃದ್ಧ ದಂಪತಿ ವಾಸಿಸುತ್ತಿದ್ದಾರೆ. ವೃದ್ಧಯೊಬ್ಬರು ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಹಿನ್ನೆಲೆಯಲ್ಲಿ ಏಲೂರಿನಲ್ಲಿ ನೆಲೆಸಿರುವ ದಂಪತಿಯ ಮಗಳು ಮತ್ತು ಮೊಮ್ಮಗಳು (20) ಇತ್ತೀಚೆಗೆ ಸಿದ್ದಾಪುರಕ್ಕೆ ಬಂದಿದ್ದರು. ಪ್ರೀತಿಯ ಹೆಸರಲ್ಲಿ ಯುವತಿಯನ್ನು ಹಿಂಬಾಲಿಸಿದ ಅದೇ ಗ್ರಾಮದ ನಿವಾಸಿ ಶೇಖ್ ಇಮ್ರಾನ್ ಮಂಗಳವಾರ ಬೆಳಿಗ್ಗೆ ಅವರ ಮನೆಗೆ ತೆರಳಿ ಹೊರಗೆ ಟೇಬಲ್ ಮೇಲೆ ಮಲಗಿದ್ದ ಯುವತಿಯ ಅಜ್ಜನ ತಲೆಗೆ ಕಬ್ಬಿಣದ ರಾಡ್ನಿಂದ ಹೊಡೆದಿದ್ದಾನೆ.
ಆತನ ಕೂಗು ಕೇಳಿ ಮನೆಯಿಂದ ಹೊರಬಂದ ಯುವತಿಯ ತಾಯಿ ಮೇಲೂ ಮನಬಂದಂತೆ ಹಲ್ಲೆ ನಡೆಸಿದ್ದಾನೆ. ತನ್ನೊಂದಿಗೆ ಬರದಿದ್ದರೆ ನಿನ್ನ ಅಜ್ಜ ಮತ್ತು ತಾಯಿಯನ್ನು ಸಾಯಿಸುವುದಾಗಿ ಬೆದರಿಕೆ ಹಾಕಿ ಯವತಿಯನ್ನು ದ್ವಿಚಕ್ರ ವಾಹನದಲ್ಲಿ ಕರೆದುಕೊಂಡು ಹೋಗಿದ್ದಾನೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಯುವತಿಯ ಅಜ್ಜ ಹಾಗೂ ತಾಯಿ ಭೀಮಾವರಂನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವೃದ್ಧನ ಸ್ಥಿತಿ ಚಿಂತಾಜನಕವಾಗಿದ್ದು, ಯುವತಿಯ ತಾಯಿ ತಲೆಗೆ ಸುಮಾರು 50 ಹೊಲಿಗೆಗಳಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಪ್ರೀತಿ ನಿರಾಕರಿಸಿದ ಯುವತಿ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ ಯುವಕ: ಇತ್ತೀಚೆಗೆ ಮಹಾರಾಷ್ಟ್ರ ಪುಣೆಯ ಸದಾಶಿವ ಪೇಠದಲ್ಲಿ ಹಾಡುಹಗಲೇ ಯುವಕನೊಬ್ಬ ಬಾಲಕಿ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿರುವ ಘಟನೆ ಜರುಗಿತ್ತು. ಈ ವೇಳೆ, ಆ ಪ್ರದೇಶದಲ್ಲಿನ ಪೊಲೀಸರಿಗೆ ವಿಷಯ ತಿಳಿಸಿದರೂ ಕೂಡಾ ಬಾರದೇ ಇರುವುದಕ್ಕೆ ಕರ್ತವ್ಯ ಲೋಪದಡಿ ಮೂವರು ಪೊಲೀಸ್ ಪೇದೆಗಳನ್ನು ಅಮಾನತು ಮಾಡಲಾಗಿತ್ತು.
ಪೊಲೀಸರ ಕಾರ್ಯವೈಖರಿ ಕುರಿತು ಪ್ರಶ್ನೆಗಳು ಹುಟ್ಟುತ್ತವೆ. ವಿಶ್ರಂಬಾಗ್ ಪೊಲೀಸ್ ಠಾಣೆ ವ್ಯಾಪ್ತಿಯ ಪೆರುಗೇಟ್ ಔಟ್‌ಪೋಸ್ಟ್‌ನ ಪೊಲೀಸ್ ಪೇದೆ ಸೇರಿ ಮೂವರು ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಮೂವರು ಕರ್ತವ್ಯ ಲೋಪವೆಸಗಿದ್ದಾರೆ ಎಂದು ಆರೋಪಿಸಲಾಗಿತ್ತು. ಪೊಲೀಸ್ ಪೇದೆ ಸುನೀಲ್ ಶಾಂತಾರಾಮ್ ತಾಠೆ ಹಾಗೂ ಪ್ರಶಾಂತ್ ಪ್ರಕಾಶ್ ಜಗದಾಳೆ, ಸಾಗರ್ ನಾಮ್‌ದೇವ್ ರಾಣೆ ಅವರನ್ನು ಅಮಾನತು ಮಾಡಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ ಸಂದೀಪ್ ಸಿಂಗ್ ಗಿಲ್ ತಿಳಿಸಿದ್ದರು.
ಯುವತಿ ಪ್ರೀತಿಯನ್ನು ನಿರಾಕರಿಸಿದ್ದರಿಂದ ಯುವಕ ಆಕ್ರೋಶಗೊಂಡಿದ್ದನು. ಯುವತಿಯನ್ನು ಹಿಂಬಾಲಿಸಿ ಮಚ್ಚಿನಿಂದ ದಾಳಿ ನಡೆಸಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ವೈರಲ್ ಆಗಿತ್ತು. ಈ ಘಟನೆಯಲ್ಲಿ ಯುವತಿ ಪ್ರೀತಿ ರಾಮಚಂದ್ರ ಫಾಟಕ್ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಾಗಿತ್ತು.
ಇದನ್ನೂ ಓದಿ: 2 ವರ್ಷಗಳ ಹಿಂದೆ ನಡೆದ ಹಲ್ಲೆಯ ವಿಡಿಯೋ ಈಗ ವೈರಲ್.. ಸರಪಂಚ್ನ ಪತಿ ಸೇರಿ ಮೂವರ ಬಂಧನ