ETV Bharat / bharat

ಗೆಳತಿಯನ್ನು ಪೆಟ್ರೋಲ್‌ ಹಾಕಿ ಸಜೀವವಾಗಿ ಸುಟ್ಟು ಹಾಕಿದ ಪಾಗಲ್​ ಪ್ರೇಮಿ...! - ಕಾಸ್‌ಗಂಜ್‌ನ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ

ಕಾಸ್​ಗಂಜ್​ನಲ್ಲಿ ಗೆಳತಿಯ ಮದುವೆ ಬೇರೆಯವರೊಡನೆ ನಿಶ್ಚಯವಾಗಿದ್ದಕ್ಕೆ ಕೋಪಗೊಂಡ ಪಾಗಲ್​ ಪ್ರೇಮಿ, ತಮ್ಮ ಪ್ರೇಯಸಿಯನ್ನೇ ಪೆಟ್ರೋಲ್ ಸುರಿದು ಸುಟ್ಟು ಹಾಕಿರುವ ಅಮಾನವೀಯ ಘಟನೆ ನಡೆದಿದೆ.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡು ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.

teenager burnt alive in kasganj
ಕಾಸ್‌ಗಂಜ್‌ನ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ದುಬೆ
author img

By

Published : May 18, 2023, 8:02 PM IST

ಕಾಸ್‌ಗಂಜ್ (ಉತ್ತರ ಪ್ರದೇಶ): ಜಿಲ್ಲೆಯಲ್ಲಿ ಬುಧವಾರ ಹೃದಯ ವಿದ್ರಾವಕ ಘಟನೆಯೊಂದು ಬೆಳಕಿಗೆ ಬಂದಿದೆ. ಕೋತ್ವಾಲಿ ಪಟಿಯಾಲಿ ಪ್ರದೇಶದಲ್ಲಿ ಪ್ರೇಮಿಯೊಬ್ಬ ತನ್ನ ಪ್ರೇಯಸಿಯನ್ನೇ ಪೆಟ್ರೋಲ್ ಸುರಿದು ಸಜೀವ ದಹನ ಮಾಡಿರುವ ಘಟನೆ ನಡಿದಿದೆ. ಇದರಿಂದ ಯುವತಿ ತೀವ್ರವಾಗಿ ಗಾಯಗೊಂಡಿದ್ದು, ನೋವಿನಿಂದ ಒದ್ದಾಡಿದ್ದಾಳೆ. ಯುವತಿಯ ಪರಿಸ್ಥಿತಿಯನ್ನು ಕಂಡ ಸಂಬಂಧಿಕರು ತರಾತುರಿಯಲ್ಲಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಯುವತಿ ಸ್ಥಿತಿ ತೀರಾ ಚಿಂತಾಜನಕವಾಗಿದೆ. ಆರೋಪಿ ವಿರುದ್ಧ ಸಂಬಂಧಿಕರು ದೂರು ನೀಡಿದ್ದು, ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.

ಯುವತಿಯ ಸಂಬಂಧಿಕರು ಈ ಸಂಬಂಧ ನೀಡಿರುವ ದೂರಿನ ಆಧಾರದ ಮೇಲೆ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಹುಡುಕಾಟಕ್ಕೆ ಮುಂದಾಗಿದ್ದಾರೆ.

ಇದನ್ನೂ ಓದಿ: 12 ತುಂಡುಗಳಾಗಿ ಕತ್ತರಿಸಿದ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆ!

ಸಂತ್ರಸ್ತೆಯ ತಂದೆ ಹೇಳಿದ್ದೇನು?: ''ನೀರಜ್ ಎಂಬ ಯುವಕ ಇ-ರಿಕ್ಷಾ ಓಡಿಸುತ್ತಿದ್ದ. ತನ್ನ ಅಪ್ರಾಪ್ತ ಮಗಳಿಗೆ ಬಲವಂತವಾಗಿ ಮದುವೆ ಮಾಡುವಂತೆ ಒತ್ತಡ ಹೇರುತ್ತಿದ್ದ. ಪಾಗಲ್​ ಪ್ರೇಮಿಯ ಕಾಟ ತಾಳಲಾರದೇ ಮಗಳ ಮದುವೆಯನ್ನು ಬೇರೆ ಕಡೆ ನಿಶ್ಚಯಿಸಿದ್ದೆವು. ಈ ವಿಚಾರ ತಿಳಿದು ಕೋಪಗೊಂಡ ಈ ಹುಚ್ಚು ಪ್ರೇಮಿ, ತಮ್ಮ ಮಗಳ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸ್ಥಳದಿಂದ ಪರಾರಿಯಾಗಿದ್ದಾನೆ'' ಎಂದು ಸಂತ್ರಸ್ತೆಯ ತಂದೆ ದೂರಿನಲ್ಲಿ ವಿವರಣೆ ನೀಡಿದ್ದಾರೆ.

ಇದನ್ನೂ ಓದಿ: ಅಮೆರಿಕದ ಒಕ್ಲಹೋಮ್​ನಲ್ಲಿ ಭಾರತೀಯ ಸಂಜಾತೆ ನಿಗೂಢ ಸಾವು: ತನಿಖೆ ಚುರುಕು

ಸಂತ್ರಸ್ತೆಯ ತಂದೆಯಿಂದ ದೂರು ದಾಖಲು: ''ಬಾಲಕಿಯ ಕಿರುಚಾಟ ಕೇಳಿ ಸ್ಥಳದಲ್ಲಿದ್ದವರು ಓಡಿಹೋಗಿ ಬೆಂಕಿ ನಂದಿಸಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಮಗಳ ದೇಹ ತೀವ್ರವಾಗಿ ಸುಟ್ಟು ಹೋಗಿತ್ತು. ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಆಕೆ ಒದ್ದಾಡುತ್ತಿದ್ದಳು. ಕೂಡಲೇ ಪುತ್ರಿಯನ್ನು ಕಾಸ್‌ಗಂಜ್‌ನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಂದ ಅವರನ್ನು ಅಲಿಗಢ್ ವೈದ್ಯಕೀಯ ಕಾಲೇಜಿಗೆ ರವಾನಿಸಲಾಗಿದೆ. ಗಾಯಗೊಂಡಿರುವ ಪುತ್ರಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಸಂತ್ರಸ್ತೆಯ ತಂದೆ ಘಟನೆಯ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಪೆಟ್ರೋಲ್​ ಬಂಕ್​ ಮಾಲೀಕನಿಗೆ 15 ಬಾರಿ ಇರಿದು ಕೊಂದು, ಹಣ ದರೋಡೆ; ಅರ್ಧಗಂಟೆಯಲ್ಲಿ ಆರೋಪಿಗಳು ಸೆರೆ

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ: ನೀರಜ್ ಎಂಬ ಯುವಕ ತನ್ನ ಮಗಳ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ ಎಂದು ಯುವತಿಯ ತಂದೆ ತಿಳಿಸಿರುವುದಾಗಿ ಕಾಸ್‌ಗಂಜ್‌ನ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ದುಬೆ ತಿಳಿಸಿದ್ದಾರೆ. ಮೇಲ್ನೋಟಕ್ಕೆ ಇದು ಪ್ರೇಮ ಸಂಬಂಧ ಎಂದು ತೋರುತ್ತದೆ. ಬಾಲಕಿಯ ತಂದೆ ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಾಗಿದೆ. ಆರೋಪಿಯ ಹುಡುಕಾಟದಲ್ಲಿ ಪೊಲೀಸ್ ತಂಡಗಳು ನಿರತವಾಗಿವೆ. ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕೆಲಸ ಕೊಟ್ಟ ಮಾಲೀಕನ ಖಾತೆಯಲ್ಲಿದ್ದ ಹಣ ಮಂಗಮಾಯ; ಕೈಚಳಕದ ಹಿಂದಿದೆ ಸಹೋದರಿಯರ ಪ್ರೇಮ್ ಕಹಾನಿ

ಇದನ್ನೂ ಓದಿ: ತೆಲುಗು ರಾಜ್ಯದಲ್ಲಿ 46 ಡಿಗ್ರಿ ದಾಖಲೆಯ ತಾಪಮಾನ: ವಿವಿಧೆಡೆ ರಣಬಿಸಿಲಿಗೆ 7 ಮಂದಿ ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.