ETV Bharat / bharat

ಪ್ರೇಮ ನಿವೇದನೆ ಒಪ್ಪದ ವಿದ್ಯಾರ್ಥಿನಿಗೆ ಚಾಕು ಇರಿದ ಯುವಕ - love proposal reject

ಶುಕ್ರವಾರ ಬೆಳಗ್ಗೆ ವಿದ್ಯಾರ್ಥಿನಿ ಬಳಿಗೆ ಹೋಗಿ ಯುವಕ ಪ್ರೇಮ ಪ್ರಸ್ತಾಪವನ್ನಿಟ್ಟಿದ್ದ. ಆದರೆ, ಇದನ್ನು ತಿರಸ್ಕರಿಸಿದ ಕಾರಣಕ್ಕೆ ಕೋಪಗೊಂಡ ಆಕೆಯ ಕುತ್ತಿಗೆ ಚಾಕುವಿನಿಂದ ಆರೋಪಿ ದಾಳಿ ಮಾಡಿದ್ದಾನೆ.

ವಿದ್ಯಾರ್ಥಿನಿಯ ಮೇಲೆ ಚಾಕುವಿನಿಂದ ದಾಳಿ
ವಿದ್ಯಾರ್ಥಿನಿಯ ಮೇಲೆ ಚಾಕುವಿನಿಂದ ದಾಳಿ
author img

By

Published : Apr 22, 2022, 4:17 PM IST

ವರಂಗಲ್​(ತೆಲಂಗಾಣ): ತನ್ನ ಪ್ರೇಮ ನಿವೇದನೆಯನ್ನು ಒಪ್ಪದ ಕಾರಣಕ್ಕೆ ಯುವಕನೋರ್ವ ಹಾಡಹಗಲೇ ವಿದ್ಯಾರ್ಥಿನಿಯ ಮೇಲೆ ಚಾಕುವಿನಿಂದ ದಾಳಿ ಮಾಡಿರುವ ಘಟನೆ ತೆಲಂಗಾಣದ ವರಂಗಲ್​ ಜಿಲ್ಲೆಯ ಹನುಮಕೊಂಡ ಸಮೀಪದ ಗಾಂಧಿ ನಗರದಲ್ಲಿ ಗುರುವಾರ ಬೆಳಗ್ಗೆ ನಡೆದಿದೆ. 23 ವರ್ಷದ ಅನುಷಾ ಎಂಬ ವಿದ್ಯಾರ್ಥಿನಿ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾಳೆ.

ಕೆಲ ದಿನಗಳಿಂದ ಅಜರ್​ ಎಂಬ ಯುವಕ ಅನುಷಾಳನ್ನು ಪ್ರೀತಿಸುತ್ತಿದ್ದ. ಆದರೆ, ಇದಕ್ಕೆ ಆಕೆ ಒಪ್ಪಿರಲಿಲ್ಲ. ಶುಕ್ರವಾರ ಬೆಳಗ್ಗೆ ಮತ್ತೆ ಆಕೆ ಬಳಿಗೆ ಹೋಗಿ ಪ್ರೇಮ ಪ್ರಸ್ತಾಪವನ್ನಿಟ್ಟಿದ್ದಾನೆ. ಆಗಲೂ ಸಹ ತಿರಸ್ಕರಿಸಿದ್ದಾಳೆ. ಇದರಿಂದ ಕೋಪಗೊಂಡು ಆಕೆಯ ಕುತ್ತಿಗೆ ಚಾಕುವಿನಿಂದ ಆರೋಪಿ ದಾಳಿ ಮಾಡಿದ್ದಾನೆ. ಪರಿಣಾಮ ಆಕೆ ಸ್ಥಳದಲ್ಲೇ ಕುಸಿದು ಬಿದ್ದು ತೀವ್ರ ರಕ್ತಸ್ರಾವವಾಗಿವೆ.

ಈ ಘಟನೆಯ ವಿಷಯ ತಿಳಿದ ಸ್ಥಳೀಯರು ತಕ್ಷಣವೇ ಗಾಯಾಳು ಅನುಷಾಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಸದ್ಯ ಆಕೆಯ ಪರಿಸ್ಥಿತಿ ಗಂಭೀರವಾಗಿದ್ದು, 48 ಗಂಟೆಗಳ ಕಾಲ ನಿಗಾದಲ್ಲಿ ಇರಿಸಲಾಗಿದೆ. ಇನ್ನು, ಭಗ್ನಪ್ರೇಮಿಯಿಂದ ದಾಳಿಗೊಳಗಾದ ಅನುಷಾ ಎಂಸಿಎ ವಿದ್ಯಾರ್ಥಿನಿ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಎನ್​ಟಿಆರ್​ ಜಿಲ್ಲೆಯಲ್ಲಿ ಘೋರ.. ತಂದೆ ಎದುರೇ ಬುದ್ಧಿಮಾಂದ್ಯ ಮಗಳ ಮೇಲೆ ಸಾಮೂಹಿಕ ಅತ್ಯಾಚಾರ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.