ETV Bharat / bharat

ಯಾವ ಸಿನಿಮಾ ಸ್ಕ್ರಿಪ್ಟ್​​ಗೂ ಕಮ್ಮಿ ಇಲ್ಲ ಕೆಎಲ್‌ಒ ಉಗ್ರಗಾಮಿ ಕೈಲಾಶ್​​​ ಪ್ರೇಮ ಕಹಾನಿ - ಈಟಿವಿ ಭಾರತ ಕರ್ನಾಟಕ

ಉಗ್ರ ಸಂಘಟನೆಯಲ್ಲಿ ಕೆಲಸ ಮಾಡ್ತಿದ್ದ ಇಬ್ಬರು ಸದಸ್ಯರು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಇದೀಗ ಪೊಲೀಸರ ಮುಂದೆ ಶರಣಾಗಿದ್ದಾರೆ. ಇಂಥದ್ದೊಂದು ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.

Etv Bharat
Etv Bharat
author img

By

Published : Aug 19, 2022, 3:26 PM IST

ಕೋಲ್ಕತ್ತಾ(ಪಶ್ಚಿಮ ಬಂಗಾಳ): ಸಿನಿಮಾಗಳಲ್ಲಿ ಅನೇಕ ನಾಯಕ ನಟರು ಉಗ್ರಗಾಮಿ ಪಾತ್ರಗಳಲ್ಲಿ ನಟನೆ ಮಾಡಿ ಪೊಲೀಸರ ಮುಂದೆ ಶರಣಾಗಿರುವುದನ್ನು ನೋಡಿರುತ್ತೇವೆ. ಆದರೆ, ನಿಜಜೀವನದಲ್ಲೂ ಅಂತಹದ್ದೊಂದು ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.

ಕಮತಾಪುರ ವಿಮೋಚನಾ ಉಗ್ರ ಸಂಘಟನೆ(ಕೆಎಲ್​ಒ)ಯ ಪ್ರಧಾನ ಕಾರ್ಯದರ್ಶಿ ಕೈಲಾಶ್​ ಅಲಿಯಾಸ್​ ಕೇಶಬ್​​ ಬರ್ಮನ್​​ ಹಾಗೂ ಅವರ ಪತ್ನಿ ಇದೀಗ ಪೊಲೀಸರಿಗೆ ಶರಣಾಗಿದ್ದಾರೆ. ಪ.ಬಂಗಾಳದ ಪೊಲೀಸ್​ ವಿಶೇಷ ಕಾರ್ಯಪಡೆ(ಎಸ್​ಟಿಎಫ್​) ಘಟಕದ ಮುಂದೆ ಇಬ್ಬರೂ ಶರಣಾಗತಿಯಾಗಿದ್ದಾರೆ. ಈ ಜೋಡಿಯ ಪ್ರೇಮ ಕಹಾನಿ ಯಾವ ಸಿನಿಮಾ ಸ್ಕ್ರಿಪ್ಟ್​​​ಗೂ ಕಡಿಮೆ ಇಲ್ಲ.

ಇದನ್ನೂ ಓದಿ: ಮಾವೋವಾದಿ ಸಿದ್ಧಾಂತದ ಬಗ್ಗೆ ನಿರಾಸೆ: ಶಸ್ತ್ರ ತ್ಯಜಿಸಿದ 11 ನಕ್ಸಲರು..!

ಕೈಲಾಶ್​​-ಸ್ವಪ್ನಾ ಪ್ರೇಮ ಕಹಾನಿ: ಶಾಲಾ ದಿನಗಳಲ್ಲಿ ಸ್ವಪ್ನಾ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದವಳು. ಆದರೆ, ತೀವ್ರ ಆರ್ಥಿಕ ಸಂಕಷ್ಟದಿಂದಾಗಿ ಶಾಲೆ ತೊರೆಯಬೇಕಾಗಿತ್ತು. ತದನಂತರ ಉಗ್ರ ಸಂಘಟನೆ ಕೆಎಲ್​ಒಗೆ ಸೇರಿಕೊಳ್ತಾಳೆ. ಈ ಸಂಘಟನೆಯಲ್ಲಿ ಕೆಲಸ ಮಾಡುವಾಗ ನರ್ಸಿಂಗ್ ಡಿಪ್ಲೊಮಾ ಮುಗಿಸಿದ್ದಳು. ತನ್ನ ಒಡನಾಡಿಗಳಿಗೆ ವೈದ್ಯಕೀಯ ಸಹಾಯ ಮಾಡುತ್ತಿದ್ದಳು. ಈ ಸಂದರ್ಭದಲ್ಲಿ ಗಾಯಗೊಂಡಿದ್ದ ಉಗ್ರ ಕೈಲಾಸ್​​ ಎಂಬಾತನ ಭೇಟಿಯಾಗುತ್ತದೆ. ಇಬ್ಬರ ನಡುವೆ ಮೊದಲ ನೋಟದಲ್ಲೇ ಪ್ರೀತಿ ಅರಳುತ್ತದೆ. 2013ರಲ್ಲಿ ಅಸ್ಸೋಂ ರೈಫಲ್ಸ್​​​​ ಸ್ವಪ್ನಾ ಅವರನ್ನು ಬಂಧಿಸಿ, ಮಣಿಪುರದ ಶಿಬಿರದಲ್ಲಿಡುತ್ತದೆ.

2014ರಲ್ಲಿ ಮದುವೆ: 2014ರಲ್ಲಿ ಉಗ್ರ ಸಂಘಟನೆ ಸದಸ್ಯರು ಸ್ವಪ್ನಾ ಅವರನ್ನು ಅಪಹರಿಸುತ್ತಾರೆ. ಇದರ ನೇತೃತ್ವವನ್ನು ಕೈಲಾಶ್​ ಹೊತ್ತುಕೊಂಡಿದ್ದರು. ಇದರಲ್ಲಿ ಯಶಸ್ವಿಯಾದ ಬಳಿಕ 2014ರಲ್ಲಿ ಇವರ ಮದುವೆಯಾಗಿತ್ತದೆ. ಇವರಿಗೋಸ್ಕರ ಪೊಲೀಸರು ಶೋಧಕಾರ್ಯ ಆರಂಭಿಸುತ್ತಾರೆ. ಹೀಗಾಗಿ, ಇಬ್ಬರು ಬಾಂಗ್ಲಾದೇಶ, ನೇಪಾಳ ಮತ್ತು ಮ್ಯಾನ್ಮಾರ್‌ನ ಅಡಗುತಾಣಗಳಲ್ಲಿ ಒಟ್ಟಿಗೆ ಉಳಿದುಕೊಳ್ಳುತ್ತಾರೆ. ಇದೀಗ ಕೊನೆಗೂ ಖುದ್ದಾಗಿ ಪೊಲೀಸರ ಮುಂದೆ ಶರಣಾಗಿದ್ದಾರೆ.

ಇದನ್ನೂ ಓದಿ: ಛತ್ತೀಸ್‌ಗಡದಲ್ಲಿ 13 ನಕ್ಸಲರು ಶರಣಾಗತಿ

ಕೈಲಾಶ್ ಮಾತನಾಡಿ​, "ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೇಲೆ ನನಗೆ ನಂಬಿಕೆ ಇದೆ. ಶರಣಾಗುವಂತೆ ಅವರ ಮನವಿಗೆ ಸ್ಪಂದಿಸಿದ್ದೇನೆ. ಇದೀಗ ಮುಖ್ಯವಾಹಿನಿಗೆ ಬಂದು ಸಮಾಜದ ಭಾಗವಾಗಿ ಬದುಕಲು ಬಯಸುತ್ತೇನೆ. ಹಿಂಸೆಯ ಮಾರ್ಗ ಬಿಟ್ಟು ಪ್ರಜಾಪ್ರಭುತ್ವದ ಹಾದಿಯಲ್ಲಿ ಉಳಿದುಕೊಳ್ಳುವೆ" ಎಂದರು.

ಪಶ್ಚಿಮ ಬಂಗಾಳ ಪೊಲೀಸ್ ಮಹಾನಿರ್ದೇಶಕ ಮನೋಜ್ ಮಾಳವಿಯಾ ಮಾತನಾಡಿ, "ಕೆಎಲ್​ಒನ ಇಬ್ಬರು ಸಕ್ರಿಯ ಸದಸ್ಯರು ಪೊಲೀಸರ ಮುಂದೆ ಶರಣಾಗಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸಕ್ರಿಯ ಸದಸ್ಯರು ಶರಣಾಗತಿಯಾಗು ನಿರೀಕ್ಷೆ ಇದೆ" ಎಂದು ತಿಳಿಸಿದರು.

ವಿವಿಧ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ: ಕೈಲಾಶ್ ಕೋಚ್​​ ಜನವರಿ 2013ರಿಂದ ಉಗ್ರ ಸಂಘಟನೆಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದು, ಯುನೈಟೆಡ್ ಲಿಬರೇಶನ್ ಫ್ರಂಟ್ ಆಫ್ ಅಸ್ಸೋಂ (UNLF) ಸೇರಿದಂತೆ ಹಲವು ಉಗ್ರ ಸಂಘಟನೆಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಪಶ್ಚಿಮ ಬಂಗಾಳದಲ್ಲಿ ನಡೆದ ನಾಲ್ಕು ಪ್ರಕರಣ ಹಾಗೂ ಅಸ್ಸೋಂನ ವಿವಿಧ ಹಿಂಸಾತ್ಮಕ ಪ್ರಕರಣಗಳಲ್ಲಿಯೂ ಇವರು ಭಾಗಿಯಾಗಿದ್ದರು. ಇವರಿಗೋಸ್ಕರ ಪೊಲೀಸರು ಶೋಧ ನಡೆಸುತ್ತಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.