ETV Bharat / bharat

ಆಟೋಗೆ ಲಾರಿ ಡಿಕ್ಕಿ: ಕೂಲಿ ಕೆಲಸಕ್ಕೆ ತೆರಳುತ್ತಿದ್ದ ಐವರ ಸಾವು

ತೆಲಂಗಾಣ ವಿಕಾರಾಬಾದ್ ಜಿಲ್ಲೆಯಲ್ಲಿ ಆಟೋಗೆ ಲಾರಿ ಡಿಕ್ಕಿ ಹೊಡೆದು ಐವರು ಸಾವನ್ನಪ್ಪಿರುವ ಘಟನೆ ಸಂಭವಿಸಿದೆ.

author img

By

Published : Nov 3, 2022, 5:05 PM IST

lorry-collided-with-auto-five-people-killed
ಆಟೋಗೆ ಲಾರಿ ಡಿಕ್ಕಿ: ಕೂಲಿ ಕೆಲಸಕ್ಕೆ ತೆರಳುತ್ತಿದ್ದ ಐವರ ಸಾವು

ವಿಕಾರಾಬಾದ್ (ತೆಲಂಗಾಣ): ಆಟೋಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಐವರು ಮೃತಪಟ್ಟ ದುರ್ಘಟನೆ ತೆಲಂಗಾಣ ವಿಕಾರಾಬಾದ್ ಜಿಲ್ಲೆಯಲ್ಲಿ ನಡೆದಿದೆ. ಆಟೋದಲ್ಲಿ ಕೂಲಿ ಕೆಲಸಕ್ಕೆ ತೆರಳುತ್ತಿದ್ದಾಗ ಈ ದುರಂತ ನಡೆದಿದೆ.

ಇಲ್ಲಿನ ಪೆದ್ದೇಮುಲ್ ಮಂಡಲದ ಮದನಾಥಪುರ ತಾಂಡಾದ 10 ಜನರು ವಿಕಾರಾಬಾದ್‌ಗೆ ಆಟೋದಲ್ಲಿ ಕೆಲಸಕ್ಕಾಗಿ ತೆರಳುತ್ತಿದ್ದರು. ಈ ವೇಳೆ ಧಾರೂರು ಮಂಡಲದ ಕೆರೆಳ್ಳಿ ಬಾಚಾರಂ ಸೇತುವೆ ಬಳಿ ಎದುರಿಗೆ ಬಂದ ಲಾರಿ ಆಟೋಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಆಟೋದಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಗಾಯಾಳುಗಳನ್ನು ವಿಕಾರಾಬಾದ್ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ, ಚಿಕಿತ್ಸೆಗೆ ಸ್ಪಂದಿಸಿದ ಇನ್ನಿಬ್ಬರು ಸಹ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಮೃತರನ್ನು ಆಟೋ ಚಾಲಕ ಜಮೀಲ್ ಮತ್ತು ಪ್ರಯಾಣಿಕರಾದ ಹೇಮಲಾ, ರವಿ, ಕಿಶನ್ ಮತ್ತು ಸೋನಿ ಭಾಯ್ ಎಂದು ಗುರುತಿಸಲಾಗಿದೆ. ಮೃತರೆಲ್ಲರೂ ಮದನಾಥಪುರ ನಿವಾಸಿಗಳು ಆಗಿದ್ದಾರೆ. ಈ ಅಪಘಾತಕ್ಕೆ ಕಾರಣನಾದ ಲಾರಿ ಚಾಲಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಪೊಲೀಸ್ ಸಿಬ್ಬಂದಿಗೆ ಪೆಪ್ಪರ್ ಸ್ಪ್ರೇ ಎರಚಿ ಹಲ್ಲೆ ಮಾಡಿದ್ದ ರೌಡಿಶೀಟರ್ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.