ETV Bharat / bharat

ರಾಮ ಹಿಂದೂಗಳಿಗೆ ಮಾತ್ರ ದೇವರಲ್ಲ; ಮುಸ್ಲಿಂ, ಕ್ರಿಶ್ಚಿಯನ್ನರಿಗೂ​ ದೇವರು: ಫಾರೂಕ್​ ಅಬ್ದುಲ್ಲಾ - ಈಟಿವಿ ಭಾರತ ಕನ್ನಡ

ಭಗವಾನ್ ಶ್ರೀರಾಮ ಕೇವಲ ಹಿಂದೂಗಳಿಗೆ ಮಾತ್ರ ದೇವರಲ್ಲ, ಎಲ್ಲರಿಗೂ ದೇವರು ಎಂದು ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಫಾರೂಖ್​ ಅಬ್ದುಲ್ಲಾ ಹೇಳಿದ್ದಾರೆ.

Etv Bharat
Etv Bharat
author img

By

Published : Mar 24, 2023, 1:36 PM IST

ಉಧಾಂಪುರ (ಶ್ರೀನಗರ): ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಮುಖ್ಯಸ್ಥ ಡಾ.ಫಾರೂಕ್ ಅಬ್ದುಲ್ಲಾ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿ, ಪಕ್ಷವು ಕೇವಲ ಮತಕ್ಕಾಗಿ ಶ್ರೀರಾಮನ ಹೆಸರು ಬಳಸುತ್ತಿದೆ. ಬಿಜೆಪಿ ಅಧಿಕಾರದಲ್ಲಿ ಉಳಿಯಲು ಮಾತ್ರ ರಾಮನ ಹೆಸರನ್ನು ಬಳಕೆ ಮಾಡುತ್ತಿದೆ. ಆದರೆ ರಾಮ ಕೇವಲ ಹಿಂದೂಗಳ ದೇವರಲ್ಲ ಎಂದರು.

ಗುರುವಾರ ಪ್ಯಾಂಥರ್ಸ್ ಪಾರ್ಟಿ ಆಯೋಜಿಸಿದ್ದ ರ್ಯಾಲಿ ಉದ್ದೇಶಿಸಿ ಮಾತನಾಡುತ್ತಾ, ಭಗವಾನ್ ಶ್ರೀರಾಮ ಕೇವಲ ಹಿಂದೂಗಳ ದೇವರಲ್ಲ. ದಯವಿಟ್ಟು ನಿಮ್ಮ ಮನಸ್ಸಿನಿಂದ ಈ ಕಲ್ಪನೆಯನ್ನು ತೆಗೆದುಹಾಕಿ. ಭಗವಾನ್​ ಶ್ರೀರಾಮ ಪ್ರತಿಯೊಬ್ಬರ ದೇವರು. ಅದು ಮುಸ್ಲಿಂ ಆಗಿರಬಹುದು, ಕ್ರಿಶ್ಚಿಯನ್ ಆಗಿರಬಹುದು, ಅಮೆರಿಕನ್ ಅಥವಾ ರಷ್ಯನ್ ಆಗಿರಬಹುದು, ರಾಮನಲ್ಲಿ ನಂಬಿಕೆ ಇರುವ ಪ್ರತಿಯೊಬ್ಬರಿಗೂ ಆತ ದೇವರೇ ಎಂದು ನುಡಿದರು. ರಾಮನ ಹೆಸರು ಹೇಳಿಕೊಂಡು ಬರುವವರು ಮೂರ್ಖರು. ಅವರು ರಾಮನ ಹೆಸರಲ್ಲಿ ಲಾಭ ಪಡೆಯಲು ಬಯಸುತ್ತಿದ್ದಾರೆ. ಅವರಿಗೆ ರಾಮನ ಮೇಲೆ ಪ್ರೀತಿ ಇಲ್ಲ, ಬದಲಿಗೆ ಅಧಿಕಾರದ ಮೇಲೆ ಪ್ರೀತಿ ಇದೆ ಎಂದು ಹರಿಹಾಯ್ದರು.

  • #WATCH भगवान राम सिर्फ हिंदूओं के भगवान नहीं सबके भगवान हैं। जैसे अल्लाह सिर्फ मुसलमानों का नहीं सबका रब है.. ये लोग जो राम के पूजारी बनकर आते हैं वो राम को बेचना चाहते हैं। इन्हें राम से नहीं हुकूमत से मोहब्बत है: नेशनल कॉन्फ्रेंस प्रमुख फ़ारुख़ अब्दुल्ला pic.twitter.com/c3eAyaIDFs

    — ANI_HindiNews (@AHindinews) March 23, 2023 " class="align-text-top noRightClick twitterSection" data=" ">

ಬಿಜೆಪಿಯೇತರ ಪಕ್ಷಗಳ ನಡುವಿನ ಒಗ್ಗಟ್ಟಿನ ಕುರಿತು ಪ್ರತಿಕ್ರಿಯಿಸಿದ ಅವರು, "ನಮ್ಮ ಒಗ್ಗಟ್ಟಿಗೆ ಯಾವುದೇ ಅಡ್ಡಿಯಾಗುವುದಿಲ್ಲ. ಅದು ಕಾಂಗ್ರೆಸ್ ಆಗಿರಬಹುದು, ಎನ್‌ಸಿ ಅಥವಾ ಪ್ಯಾಂಥರ್ಸ್ ಆಗಿರಲಿ. ನಾವು ಜನರಿಗಾಗಿ ಹೋರಾಡುತ್ತೇವೆ ಮತ್ತು ಸಾಯುತ್ತೇವೆ ಮತ್ತು ನಾವೆಲ್ಲರೂ ಒಗ್ಗಟ್ಟಿನಿಂದಲೇ ಇರುತ್ತೇವೆ" ಎಂದು ಹೇಳಿದರು.

ಕೆಲವು ದಿನಗಳ ಹಿಂದೆ ಜಮ್ಮು ಮತ್ತು ಕಾಶ್ಮೀರದ ರಾಜ್ಯ ಸ್ಥಾನಮಾನವನ್ನು ಮರಳಿ ನೀಡುವಂತೆ ಫಾರೂಕ್ ಅಬ್ದುಲ್ಲಾ ಒತ್ತಾಯಿಸಿದ್ದರು. ರಾಜ್ಯ ಸ್ಥಾನಮಾನ ನೀಡಿ ಸಾರ್ವತ್ರಿಕ ಚುನಾವಣೆಗಳನ್ನು ನಡೆಸಬೇಕು ಎಂದು ಹೇಳಿದ್ದರು. ಅಲ್ಲದೇ ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದ್ದು, ಅದರ ರಾಜ್ಯ ಸ್ಥಾನಮಾನ ಮರುಸ್ಥಾಪಿಸಬೇಕು. ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರದಲ್ಲಿ ಏಕೆ ಚುನಾವಣೆಗಳನ್ನು ನಡೆಸುತ್ತಿಲ್ಲ? ಎಂದು ಕೇಳಿದ್ದರು.

ಇದನ್ನೂ ಓದಿ: ಜಮ್ಮು ಕಾಶ್ಮೀರ ದೇಶದ ಅವಿಭಾಜ್ಯ ಅಂಗ, ರಾಜ್ಯ ಸ್ಥಾನಮಾನ ಮರಳಿ ನೀಡಿ: ಫಾರೂಕ್ ಅಬ್ದುಲ್ಲಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.