ETV Bharat / bharat

'ಸಿನಿಮೀಯ ಸ್ಟೈಲ್'ನಲ್ಲಿ ಬ್ಯಾಂಕ್​ ದರೋಡೆ.. ಕಳ್ಳರ ಕೈಚಳಕ ಸಿಸಿಟಿವಿಯಲ್ಲಿ ಸೆರೆ..

ಘಟನಾ ಸ್ಥಳಕ್ಕೆ ತಲುಪಿ ಸಿಸಿಟಿವಿಯ ದೃಶ್ಯ ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಅವರ ದುಷ್ಕೃತ್ಯ ಸೆರೆಯಾಗಿದೆ. ಮೊಬೈಲ್​ನಲ್ಲಿ ದಾಖಲಾಗಿರುವ ಸಿಸಿಟಿವಿ ದೃಶ್ಯದ ಆಧಾರದ ಮೇಲೆ ಆರೋಪಿಗಳ ಬಂಧನಕ್ಕಾಗಿ ಬಲೆ ಬೀಸಲಾಗಿದ್ದು, ಕೆಲ ಗುಂಪು ರಚನೆ ಮಾಡಲಾಗಿದೆ..

loot case in film style in sbi branch
loot case in film style in sbi branch
author img

By

Published : Oct 4, 2021, 8:07 PM IST

Updated : Oct 5, 2021, 4:54 PM IST

ಬಾರ್ಮರ್​(ರಾಜಸ್ಥಾನ) : ಮೂವರು ಮುಸುಕುಧಾರಿಗಳು ಬ್ಯಾಂಕ್​​ನೊಳಗೆ ನುಗ್ಗಿ ಸಿನಿಮೀಯ ಸ್ಟೈಲ್​​ನಲ್ಲಿ ಬ್ಯಾಂಕ್​ ದರೋಡೆ ಮಾಡಿರುವ ಘಟನೆ ನಡೆದಿದೆ. ಬ್ಯಾಂಕ್‌ನಲ್ಲಿದ್ದ ಸುಮಾರು 6 ಲಕ್ಷ ರೂ. ದೋಚಿ ಪರಾರಿಯಾಗಿದ್ದಾರೆ.

ರಾಜಸ್ಥಾನದ ಬಾರ್ಮರ್ ಜಿಲ್ಲೆಯ ಸಮದರಿ ಪೊಲೀಸ್ ಠಾಣಾ ವ್ಯಾಪ್ತಿಯ ಖಂಡಪ್‌ಹಳ್ಳಿ SBI ಬ್ಯಾಂಕ್​ ಶಾಖೆಯಲ್ಲಿ ಈ ಘಟನೆ ನಡೆದಿದೆ. ಬ್ಯಾಂಕ್​ನಲ್ಲಿ ಸಿಬ್ಬಂದಿ ಪ್ರತಿದಿನದಂತೆ ಕೆಲಸದಲ್ಲಿ ತೊಡಗಿದ್ದಾಗ ಮೂವರು ಮುಸುಕುಧಾರಿಗಳು ಏಕಾಏಕಿ ಬ್ಯಾಂಕ್​​ನೊಳಗೆ ನುಗ್ಗಿದ್ದಾರೆ.

'ಸಿನಿಮೀಯ ಸ್ಟೈಲ್'ನಲ್ಲಿ ಬ್ಯಾಂಕ್​ ದರೋಡೆ..

ಇದನ್ನೂ ಓದಿರಿ: ಡೆಲ್ಲಿ ಏರ್​​ಪೋರ್ಟ್​​ನ ಬ್ರಿಡ್ಜ್​ ಕೆಳಗೆ ಸಿಕ್ಕಿಕೊಂಡ ಏರ್​ ಇಂಡಿಯಾ ವಿಮಾನ.. ವಿಡಿಯೋ ನೋಡಿ

ಈ ವೇಳೆ ಕೈಯಲ್ಲಿ ಪಿಸ್ತೂಲ್​ ಹಿಡಿದುಕೊಂಡು ಬ್ಯಾಂಕ್​ನೊಳಗಿದ್ದವರನ್ನ ಬೆದರಿಸಿ, ಒಂದೆಡೆ ಸೇರಿಸಿದ್ದಾರೆ. ಈ ವೇಳೆ ಓರ್ವ ದುಷ್ಕರ್ಮಿ ಕ್ಯಾಶ್​ ಕೌಂಟರ್​ಗೆ ಪ್ರವೇಶಿಸಿ ಚೀಲದೊಳಗೆ ಹಣ ತುಂಬಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ.

ಘಟನೆ ನಡೆದ ಬಳಿಕ ಬ್ಯಾಂಕ್​​​ ಉದ್ಯೋಗಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ತಲುಪಿ ಸಿಸಿಟಿವಿಯ ದೃಶ್ಯ ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಅವರ ದುಷ್ಕೃತ್ಯ ಸೆರೆಯಾಗಿದೆ. ಮೊಬೈಲ್​ನಲ್ಲಿ ದಾಖಲಾಗಿರುವ ಸಿಸಿಟಿವಿ ದೃಶ್ಯದ ಆಧಾರದ ಮೇಲೆ ಆರೋಪಿಗಳ ಬಂಧನಕ್ಕಾಗಿ ಬಲೆ ಬೀಸಲಾಗಿದ್ದು, ಕೆಲ ಗುಂಪು ರಚನೆ ಮಾಡಲಾಗಿದೆ.

Last Updated : Oct 5, 2021, 4:54 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.