ETV Bharat / bharat

ಪಿ.ವಿ ಸಿಂಧು ಐತಿಹಾಸಿಕ ಒಲಿಂಪಿಕ್ಸ್‌ ಸಾಧನೆಗೆ ರಾಜ್ಯಸಭೆ, ಲೋಕಸಭೆಯಲ್ಲಿ ಅಭಿನಂದನೆ

ಟೋಕಿಯೋ ಒಲಿಂಪಿಕ್ಸ್​ ಬ್ಯಾಡ್ಮಿಂಟನ್​ನಲ್ಲಿ ಕಂಚಿನ ಪದಕ ಗೆದ್ದಿರುವ ಪಿ.ವಿ.ಸಿಂಧು ಅವರಿಗೆ ಸಂಸತ್ತಿನ ಉಭಯ ಸದನಗಳಿಂದಲೂ (ರಾಜ್ಯಸಭೆ ಮತ್ತು ಲೋಕಸಭೆ) ಅಭಿನಂದನೆ ಸಲ್ಲಿಸಲಾಗಿದೆ.

ಪಿ.ವಿ.ಸಿಂಧುಗೆ ಅಭಿನಂದನೆ
congratulates p v sindhu
author img

By

Published : Aug 2, 2021, 12:02 PM IST

ನವದೆಹಲಿ: ಟೋಕಿಯೋ ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿರುವ ಬ್ಯಾಡ್ಮಿಂಟನ್​ ತಾರೆ ಪಿ.ವಿ.ಸಿಂಧುಗೆ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅಭಿನಂದನೆ ಸಲ್ಲಿಸಲಾಗಿದೆ.

  • I am delighted to tell you that PV Sindhu won the bronze medal for India in badminton women's singles at #OlympicGames. This is her second consecutive Olympics medal. She is the first Indian woman to win two Olympic medals for individual events: Lok Sabha Speaker Om Birla pic.twitter.com/cczSUVqmtc

    — ANI (@ANI) August 2, 2021 " class="align-text-top noRightClick twitterSection" data=" ">

ಲೋಕಸಭೆ ಕಲಾಪ ಆರಂಭಕ್ಕೂ ಮುನ್ನ ಮಾತನಾಡಿದ ಸ್ಪೀಕರ್​ ಓಂ ಬಿರ್ಲಾ, ಬ್ಯಾಡ್ಮಿಂಟನ್​ ಆಟಗಾರ್ತಿ ಪಿ.ವಿ.ಸಿಂಧು ತಮ್ಮ ಅದ್ಭುತ ಪ್ರದರ್ಶನದಿಂದಾಗಿ ಒಲಿಂಪಿಕ್ಸ್​ನಲ್ಲಿ ಈವರೆಗೆ ಎರಡು ಪದಕ ಗೆದ್ದಿದ್ದು ಸದನದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಆಕೆಯ ಸಾಧನೆ ಈ ದೇಶದ ಯುವಜನತೆಗೆ ಸ್ಫೂರ್ತಿಯಾಗಲಿ ಎಂದು ಹಾರೈಸಿದರು.

ರಾಜ್ಯಸಭಾ ಕಲಾಪಕ್ಕೂ ಮುನ್ನ ಸಭಾಧ್ಯಕ್ಷ ವೆಂಕಯ್ಯ ನಾಯ್ಡು, ಪಿ.ವಿ.ಸಿಂಧುಗೆ ಅಭಿನಂದನೆ ಸಲ್ಲಿಸಿದರು. ಅಭೂತಪೂರ್ವ ಪ್ರತಿಭೆಯಿಂದ ಭಾರತಕ್ಕೆ ಎರಡು ಒಲಿಂಪಿಕ್ಸ್​ ಪದಕಗಳನ್ನು ಗೆದ್ದು ಕೊಟ್ಟಿದ್ದಾರೆ. ಅವರ ಸಾಧನೆ ಐತಿಹಾಸಿಕ ಎಂದು ಬಣ್ಣಿಸಿದರು.

ಇದನ್ನೂ ಓದಿ: ಸಿಂಧು ಪ್ರೋತ್ಸಾಹದ ನುಡಿಗಳು ನನ್ನ ಕಣ್ಣಲ್ಲಿ ನೀರು ತರಿಸಿತು: ತೈಪೆಯ ಬೆಳ್ಳಿ ಪದಕ ವಿಜೇತೆ

2016ರಲ್ಲಿ ರಿಯೋದಲ್ಲಿ ನಡೆದಿದ್ದ ಒಲಂಪಿಕ್ಸ್‌ನಲ್ಲಿ ಸಿಂಧು ಬೆಳ್ಳಿ ಪದಕ ಗೆದ್ದಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.