ಸೂರತ್ : ಕೊರೊನಾದ ಮತ್ತೊಂದು ಹಂತ ಮಾರ್ಚ್ ತಿಂಗಳಲ್ಲಿ ಪ್ರಾರಂಭವಾಗಿತ್ತು. ಅಂದಿನಿಂದ, 411ಕ್ಕೂ ಹೆಚ್ಚು ಮಕ್ಕಳು ಸೋಂಕಿಗೆ ಒಳಗಾಗಿದ್ದಾರೆ. ಅವರಲ್ಲಿ ಆಗ ತಾನೇ ಹುಟ್ಟಿದ ಮಗುವಿನಿಂದ ಹಿಡಿದು 12 ವರ್ಷದ ಮಕ್ಕಳೂ ಸೇರಿದ್ದಾರೆ.
ಈ ಮಕ್ಕಳಿಗೆ ಸೋಂಕು ತಗುಲಿದ ವೇಳೆ ಕೆಲವರ ಸ್ಥಿತಿ ತುಂಬಾ ಗಂಭೀರವಾಗಿದ್ದು, ವೆಂಟಿಲೇಟರ್‌ನಲ್ಲಿ ಹಾಕಬೇಕಾಗಿತ್ತು. ಆದರೆ, ಅನೇಕ ಮಕ್ಕಳು ಈ ಮಾರಕ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಿ ಬದುಕುಳಿದರು.
ಮಗುವಿಗೆ ಎದೆಹಾಲು ನೀಡಲಿಲ್ಲ: ಸೂರತ್‌ನಲ್ಲಿ 25 ದಿನಗಳ ಮಗು ಕೊರೊನಾವನ್ನು ಸೋಲಿಸಿದೆ. ಈ ಮಗುವಿನ ತಂದೆ ಮೊದಲು ಸೋಂಕಿಗೆ ತುತ್ತಾದರು, ಎರಡು ದಿನಗಳ ನಂತರ ಅವರ ತಾಯಿ ಮತ್ತು ಹೆಂಡತಿಗೂ ಸೋಂಕು ತಗುಲಿತು.
ನಮ್ಮ ಮಗುವಿಗೆ ಸೋಂಕು ತಗುಲಿದಾಗ ನಾವು ನಾಮಕರಣ ಮಾಡಿರಲಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ, ನನ್ನ ಮಗುವಿಗೆ ತಾಯಿಹಾಲನ್ನ ಕೂಡ ನೀಡಲಿಲ್ಲ. ಆದರೆ, ಈಗ ಮಗು ಗುಣಮುಖವಾಗಿ ಸುರಕ್ಷಿತ ಮತ್ತು ಆರೋಗ್ಯಕರವಾಗಿದೆ.
ನನ್ನ ಮಗ ನನ್ನ ಹೋರಾಟಗಾರ : ಶಿವನ್ ಶಾಗೆ ಮೂರುವರೆ ವರ್ಷ. ಅವನ ಜೊತೆಗೆ ಅವನ ತಾಯಿಗೂ ಸೋಂಕು ತಗುಲಿತ್ತು. ಮಗುವಿಗೆ ಸೋಂಕು ಇದೆ ಎಂದು ತಿಳಿದಾಗ ಕುಟುಂಬದ ಪ್ರತಿಯೊಬ್ಬರೂ ಆತಂಕಕ್ಕೆ ಒಳಗಾದರು. ಆದರೆ, ಇಬ್ಬರೂ ಚಿಕಿತ್ಸೆ ಪಡೆದು ವೇಗವಾಗಿ ಚೇತರಿಸಿಕೊಂಡರು. ಹೀಗಾಗಿ, ನನ್ನ ಮಗ ಹೋರಾಟಗಾರ ಅಂತಾರೆ ಶಿವನ್ ತಂದೆ.
ಎರಡು ವರ್ಷದ ಜಾಸ್ಮಿನ್ ಗುಣಮುಖ : ಎರಡು ವರ್ಷದ ಜಾಸ್ಮಿನ್‌ಳ ತಂದೆ ಸಾಗರ್ಗೆ ಕೊರೊನಾ ಪಾಸಿಟಿವ್ ಬಂದ ಕಾರಣ ಮಗಳಿಗೂ ಸೋಂಕು ತಗುಲಿತ್ತು. ಆದರೆ, ವೈದ್ಯರ ಬಳಿಗೆ ಕೊಂಡ್ಯೊಯ್ದ ಮೇಲೆ ಅವಳು ಚೇತರಿಸಿಕೊಂಡಳು ಅಂತಾರೆ ತಂದೆ.
ಆಕೆಗೆ ಔಷಧಿ ಕೂಡ ಕುಡಿಯಲು ಸಾಧ್ಯವಾಗಲಿಲ್ಲ : ಒಂದು ವರ್ಷದ ತ್ರಿಶಾ ಕುಟುಂಬದ ಸದಸ್ಯರಿಗೆಲ್ಲ ಕೊರೊನಾ ಸೋಂಕು ತಗುಲಿತ್ತು. ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತ್ರಿಶಾ ತುಂಬಾ ಅನಾರೋಗ್ಯದಿಂದ ಬಳಲುತ್ತಿದ್ದಳು.
ಅವಳು ಔಷಧಿ ಸಹ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ. ನಂತರ ಆಕೆ ಸಂಪೂರ್ಣವಾಗಿ ಚೇತರಿಸಿಕೊಳ್ಳುವವರೆಗೂ ವೈದ್ಯರು ಚಿಕಿತ್ಸೆ ನೀಡಿದರು. ಅವಳು ಮೊದಲಿನಂತೆ ಈಗ ನಕ್ಕು ನಲಿಯುತ್ತಿದ್ದಾಳೆ.
ಹೆವಿ ಡೋಸ್ನಿಂದ ತಂದ ಚಿಂತೆಗೀಡಾಗಿದ್ದರು : 2.5 ವರ್ಷದ ವಿವನ್ಗೆ ಸತತ ಎರಡು ದಿನಗಳ ಕಾಲ ಜ್ವರ ಬಾಧಿಸಿತ್ತು. ಮಗುವಿಗೆ ಹೆಚ್ಚು ಔಷಧಿಯನ್ನು ತಡೆದುಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ತಂದೆ ಸುಮಿತ್ ಆತಂಕಗೊಂಡಿದ್ದರು.
ವಿವನ್ ಐದು ದಿನಗಳ ಕಾಲ ಆಸ್ಪತ್ರೆಯಲ್ಲಿಯೇ ಇದ್ದ. ಅಲ್ಲಿ ಅವನಿಗೆ ತೀವ್ರಾ ನಿಗಾವಹಿಸಿ ಔಷಧಿ ನೀಡಲಾಯಿತು. ಪರಿಣಾಮವಾಗಿ ವಿವನ್ ಸಂಪೂರ್ಣ ಚೇತರಿಸಿಕೊಂಡ.
ಮಕ್ಕಳಿಗೆ ಸೀನುವಿಕೆಗೆ ಔಷಧಿ ನೀಡಲಾಗುತ್ತದೆ : ಕೊರೊನಾ ಸೋಂಕಿತ ಮಕ್ಕಳಿಗೆ ಚಿಕಿತ್ಸೆ ನೀಡುತ್ತಿರುವ ಡಾ.ಪೂರ್ವೇಶ್ , ಪ್ರಸ್ತುತ ಹಂತದಲ್ಲಿ ಹೆಚ್ಚಿನ ಮಕ್ಕಳು ಸೋಂಕಿಗೆ ಒಳಗಾಗುತ್ತಿದ್ದಾರೆ ಎಂದು ಹೇಳಿದರು.
ಮಗುವಿಗೆ ಜ್ವರವಿದ್ದರೆ ಅದಕ್ಕೆ ಪ್ಯಾರಸಿಟಮಲ್ ನೀಡಲಾಗುತ್ತೆ. ಇತ್ತೀಚಿಗೆ ಅನೇಕ ಸಂದರ್ಭಗಳಲ್ಲಿ, ವೈದ್ಯರು ಮಗುವಿಗೆ ರೆಮಿಡಿಸಿವಿರ್ ಸಹ ನೀಡುತ್ತಾರೆ, ಅದು ಸಾಕಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದ್ರು.