ಟೆಲಿಕಾಂ ಸಂಸ್ಥೆಗಳು ಒಂದರ ಹಿಂದೊಂದರಂತೆ ದರ ಏರಿಕೆ ಮಾಡಿವೆ. ಏರ್ಟೆಲ್, ರಿಲಯನ್ಸ್ ಜಿಯೋ, ವೊಡಾಫೋನ್ ಐಡಿಯಾ ಸಂಸ್ಥೆಗಳು ಏಕಾಏಕಿ ದರ ಏರಿಕೆ ನಿರ್ಧಾರ ಪ್ರಕಟಿಸಿ ಗ್ರಾಹಕರಿಗೆ ಆಘಾತ ನೀಡಿವೆ.
ಪ್ರಸ್ತುತ, ಪ್ರಿಪೇಯ್ಡ್ ಯೋಜನೆಗಳು, ಅನಿಯಮಿತ ವಾಯ್ಸ್ ಕಾಲಿಂಗ್ ಪ್ಯಾಕ್‌ಗಳು ಮತ್ತು ಮೊಬೈಲ್ ಡೇಟಾ ರೀಚಾರ್ಜ್ ಬೆಲೆಗಳನ್ನು ಶೇ.20-25 ರಷ್ಟು ಹೆಚ್ಚಿಸಲಾಗಿದೆ.
ಏರ್ಟೆಲ್ ಆರಂಭದಲ್ಲಿ ಪ್ರಿಪೇಯ್ಡ್ ರೀಚಾರ್ಜ್ ಬೆಲೆಗಳನ್ನು ಏರಿಸುವುದಾಗಿ ಘೋಷಿಸಿತ್ತು. ಈ ಬೆಲೆಗಳು ನವೆಂಬರ್ 26 ರಿಂದ ಜಾರಿಗೆ ಬಂದಿವೆ. ಅದರ ನಂತರ ವೊಡಾಫೋನ್ ಐಡಿಯಾ ಕೂಡ ರೀಚಾರ್ಜ್ ದರ ಹೆಚ್ಚಿಸಿತು. ಈ ನಡುವೆ ಈ ಮೂರು ಟೆಲಿಕಾಂ ಸಂಸ್ಥೆಗಳಲ್ಲಿ ಗ್ರಾಹಕರು ಉತ್ತಮ ಯೋಜನೆಗಳ ಹುಡುಕಾಟದಲ್ಲಿದ್ದಾರೆ. ಸದ್ಯ ಈ ಎಲ್ಲಾ ಸಂಸ್ಥೆಯ ರೀಚಾರ್ಜ್ ದರಗಳು ತುಟ್ಟಿಯಾಗಿವೆ.