ETV Bharat / bharat

ಮಧ್ಯಪ್ರದೇಶದ ಸತ್ನಾದಲ್ಲಿ ಸಿಡಿಲು ಬಡಿದು 7 ಮಂದಿ ಸಾವು, ನಾಲ್ವರಿಗೆ ಗಾಯ - lightning strikes in Madhya pradesh

ಸತ್ನಾ ಜಿಲ್ಲೆಯ ಬದೇರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಧರ್ಮಪುರ ಪುರಾನಿ ಬಸ್ತಿ ಬಳಿ ಸಿಡಿಲು ಬಡಿದು, ನಾಲ್ವರು ಸಾವನ್ನಪ್ಪಿದ್ದಾರೆ.

Lightning strikes kill 7, injure 4 in Madhya Pradesh Satna
ಮಧ್ಯಪ್ರದೇಶದ ಸತ್ನಾದಲ್ಲಿ ಸಿಡಿಲು ಬಡಿದು 7 ಮಂದಿ ಸಾವು, ನಾಲ್ವರಿಗೆ ಗಾಯ
author img

By

Published : May 20, 2021, 2:53 AM IST

ಸತ್ನಾ, ಮಧ್ಯಪ್ರದೇಶ: ಸಿಡಿಲು ಬಡಿದು ಸತ್ನಾ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಏಳು ಮಂದಿ ಸಾವನ್ನಪ್ಪಿದ್ದಾರೆ. ಸುಮಾರು ನಾಲ್ವರು ಗಾಯಗೊಂಡಿದ್ದು, ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮೊದಲ ಘಟನೆ ಬದೇರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಧರ್ಮಪುರ ಪುರಾನಿ ಬಸ್ತಿ ಗ್ರಾಮದ ಹನುಮಾನ್ ದೇವಾಲಯದ ಬಳಿ ನಡೆದಿದೆ. ಮಳೆ ಬೀಳುವ ವೇಳೆ ದೇವಾಲಯದ ಬಳಿ ಧಾವಿಸಿದ್ದ ಮೀನುಗಾರರಿಗೆ ಸಿಡಿಲು ಬಡಿದು ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಮತ್ತೋರ್ವ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

ಮೃತರನ್ನು ಕಾಕ್ರಾ ಗ್ರಾಮದ ಅವಿನಾಶ್ ಕೋಲ್, ಸುರೇಂದ್ರ ಸಾಹು, ಜಿತೇಂದ್ರ ಕೋಲ್ ಮತ್ತು ಭಾರತ್ ಕೋಲ್ ಎಂದು ಗುರುತಿಸಲಾಗಿದೆ. ಇನ್ನು ರಾಜು ಕೋಲ್, ಸಿಪಾಹಿ ಕೋಲ್ ಮತ್ತು ಸಂಪತ್ ಕೋಲ್ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಇಲ್ಲಿದೆ 'ಕೊರೊನಾದೇವಿ'ಯ ದೇವಸ್ಥಾನ.. 48 ದಿನಗಳಿಂದ ವಿಶೇಷ ಪ್ರಾರ್ಥನೆ

ಎರಡನೇ ಘಟನೆಯು ಮಜ್ಗವಾನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಕೈಲಾಸ್​​ಪುರ ಗ್ರಾಮದಲ್ಲಿ ನಡೆದಿದೆ. ಸತೀಚಂದ್ರ ಪಾಂಡೆ ಮತ್ತು ಉಮೇಶ್ ಕುಮಾರ್ ಮಿಶ್ರಾ ಮೃತಪಟ್ಟವರಾಗಿದ್ದಾರೆ. ಕಾಣೆಯಾಗಿದ್ದ ಎಮ್ಮೆಗಳನ್ನು ಹುಡುಕಲು ತೆರಳಿದ್ದ ಸಂದರ್ಭದಲ್ಲಿ ಕೈಲಾಸ್​ಪುರ ಗ್ರಾಮದಲ್ಲಿ ತಾವು ನಿಂತಿದ್ದ ಮರಕ್ಕೆ ಸಿಡಿಲು ಬಡಿದು, ಇಬ್ಬರೂ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಮೂರನೇಯ ಘಟನೆ ರಾಮನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಹರೈ ಗ್ರಾಮದಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಒಬ್ಬರು ಗಾಯಗೊಂಡಿದ್ದಾರೆ. ಇಬ್ಬರು ಒಂದೇ ಕುಟುಂಬದವರಾಗಿದ್ದು, ಸೈಕಲ್ ಮೂಲಕ ಸೆಮರಿಯಾಕ್ಕೆ ಹೋಗುತ್ತಿದ್ದರು. ಚೋಟೆಲಾಲ್ ಸಾಕೆತ್ ಸ್ಥಳದಲ್ಲೇ ಮೃತಪಟ್ಟಿದ್ದು, ಬಬ್ಲು ಸಾಕೆತ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.