ETV Bharat / bharat

ರಾಜಸ್ಥಾನದಲ್ಲೂ ಆರ್ಭಟಿಸಿದ ಸಿಡಿಲು: ನಾಲ್ವರು ಮಕ್ಕಳು ಸೇರಿ 20 ಜನ ಸಾವು - ಅಮೀರ್​ ಮಹಲ್​ನ ವಾಚ್​ ಟವರ್

ರಾಜಸ್ಥಾನದಲ್ಲಿ ಸಿಡಿಲಾರ್ಭಟಕ್ಕೆ ವಿವಿಧೆಡೆ ಕನಿಷ್ಠ 20 ಮಂದಿ ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ.

ರಾಜಸ್ಥಾನದಲ್ಲಿ ಸಿಡಿಲಬ್ಬರ, 20 ಜನರ ದುರ್ಮರಣ
ರಾಜಸ್ಥಾನದಲ್ಲಿ ಸಿಡಿಲಬ್ಬರ, 20 ಜನರ ದುರ್ಮರಣ
author img

By

Published : Jul 12, 2021, 7:21 AM IST

ರಾಜಸ್ಥಾನ: ರಾಜ್ಯದ ಹಲವೆಡೆ ಭಾರಿ ಮಳೆಯಾಗಿದ್ದು, ಜೈಪುರದ ಜಯಗಢ ಕೋಟೆ​​​, ನಹರ್​ಗಢ ಕೋಟೆ​ ಹಾಗೂ ಅಮೀರ್​ ಮಹಲ್​ನಲ್ಲಿ ಸಿಡಿಲಾರ್ಭಟ ಜೋರಾಗಿದೆ. ಅಮೀರ್​ ಮಹಲ್​ನ ವಾಚ್​ ಟವರ್​ಗೆ ಸಿಡಿಲು ಬಡಿದು 16 ಮಂದಿ ಮೃತಪಟ್ಟಿದ್ದಾರೆ. ಉಳಿದ ಎರಡು ಪ್ರದೇಶಗಳಲ್ಲಿ ಸಾವು ಸಂಭವಿಸಿರುವ ಬಗ್ಗೆ ಯಾವುದೇ ವರದಿಯಾಗಿಲ್ಲ.

ರಾಜಸ್ಥಾನದಲ್ಲಿ ಸಿಡಿಲಬ್ಬರ, 20 ಜನರ ದುರ್ಮರಣ

ಪಂಜಾಬ್ ಮೂಲದ ಅಣ್ಣ ತಂಗಿ ಸಾವು

ಮೃತಪಟ್ಟ 16 ಜನರ ಪೈಕಿ ಪಂಜಾಬ್​​ ಮೂಲದ ಅಣ್ಣ-ತಂಗಿಯೂ ಸೇರಿದದ್ದಾರೆ. ಅಮೃತ್​ಸರ್​ ನಿವಾಸಿಗಳಾದ ಅಮಿತ್ ಶರ್ಮಾ(27), ಶಿವಾನಿ (25) ಮೃತ ದುರ್ದೈವಿಗಳಾಗಿದ್ದಾರೆ. ಅಂಬರ್​ ಅರಮನೆಯ ಮುಂಭಾಗದಲ್ಲಿರುವ ಬೆಟ್ಟದ ಮೇಲೇರಿದ್ದಾಗ, ಈ ಅವಘಡ ಸಂಭವಿಸಿದೆ.

ಇಡೀ ರಾತ್ರಿ ರಕ್ಷಣಾ ಕಾರ್ಯಾಚರಣೆ

ಸಂಜೆಯ ವೇಳೆಗೆ ವಾಚ್​ ಟವರ್​ನಲ್ಲಿ ಸುಮಾರು 35 ರಿಂದ 40 ಜನರಿದ್ದರು. ಇದ್ದಕ್ಕಿದ್ದಂತೆ ಬಡಿದ ಸಿಡಿಲಿಗೆ 16 ಮಂದಿ ಬಲಿಯಾಗಿದ್ದು, ಅನೇಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ನಾಗರಿಕ ರಕ್ಷಣಾ ಪಡೆ, ಎಸ್​ಡಿಆರ್​ಎಫ್​ ಮತ್ತು ಪೊಲೀಸರ ತಂಡ ಇಡೀ ರಾತ್ರಿ ರಕ್ಷಣಾ ಕಾರ್ಯಾಚರಣೆ ನಡೆಸಿದೆ.

ಡ್ರೋನ್ ಮೂಲಕ ಶೋಧ ಕಾರ್ಯ

ಈ ಬಗ್ಗೆ ಹೆಚ್ಚುವರಿ ಪೊಲೀಸ್ ಆಯುಕ್ತ ರಾಹುಲ್ ಪ್ರಕಾಶ್ ಮಾತನಾಡಿ, ಈವರೆಗೆ 11 ಜನರ ಮೃತದೇಹ ಹೊರ ತೆಗೆಯಲಾಗಿದೆ. 15 ಮಂದಿ ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈಗಾಗಲೇ ಮೂರು ಬಾರಿ ಈ ಪ್ರದೇಶದಲ್ಲಿ ಶೋಧ ಕಾರ್ಯ ನಡೆಸಿದ್ದೇವೆ. ಬೆಳಗ್ಗೆ ಡ್ರೋನ್ ಮೂಲಕ ಶೋಧ ಕಾರ್ಯ ನಡೆಸಲಾಗುವುದು ಎಂದರು. ಮೃತರಲ್ಲಿ ಹೆಚ್ಚಿನವರು ಜೈಪುರ ಮೂಲದವರು ಎಂದು ತಿಳಿದು ಬಂದಿದೆ.

ಸುಮಾರು 3 ಸಾವಿರ ಮೆಟ್ಟಿಲುಗಳಿರುವ ವಾಚ್​​ ಟವರ್​ನಲ್ಲಿ ಕಾರ್ಯಾಚರಣೆ ನಡೆಸುವುದು ರಕ್ಷಣಾ ಸಿಬ್ಬಂದಿಗೆ ಭಾರಿ ಕಷ್ಟದ ಕೆಲಸವಾಗಿದೆ. ಮೃತದೇಹಗಳನ್ನು ಕೆಳಗಿಳಿಸಲು ಸಿಬ್ಬಂದಿ ಭಾರಿ ಕಷ್ಟಪಡಬೇಕಾಯಿತು. ಮೃತರು ಮತ್ತು ಗಾಯಗೊಂಡವರನ್ನು ಹೆಗಲ ಮೇಲೆ ಹೊತ್ತು ಕೆಳಗಿಳಿಸಲಾಗಿದೆ ಎಂದು ಅವರು ತಿಳಿಸಿದರು.

ಕೋಟಾದಲ್ಲಿ ನಾಲ್ವರು ಮಕ್ಕಳು ಬಲಿ

ಜಿಲ್ಲೆಯ ತಹಸಿಲ್​ನ ಗಾರ್ಡಾ ಗ್ರಾಮದಲ್ಲಿ ಸಿಡಿಲಿಗೆ ಇಬ್ಬರು ಸಹೋದರರು ಸೇರಿದಂತೆ ನಾಲ್ವರು ಮಕ್ಕಳು ಮೃತಪಟ್ಟಿದ್ದು, ಐವರು ಮಕ್ಕಳ ಸ್ಥಿತಿ ಗಂಭೀರವಾಗಿದೆ. 12 ಕ್ಕೂ ಹೆಚ್ಚು ಮೇಕೆಗಳು ಬಲಿಯಾಗಿವೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದರು. ಮಕ್ಕಳು ಮೇಕೆ ಮೇಯಿಸಲು ತೆರಳಿದ್ದ ವೇಳೆ ಈ ಅವಘಡ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೃತರನ್ನು ವಿಕ್ರಂ (16), ಅಕ್ರಜ್ (13), ರಾಧೇಶ್​ (12), ಉರ್ಜನ್ (16) ಎಂದು ಗುರುತಿಸಲಾಗಿದೆ.

ಸಂತಾಪ ಸೂಚಿಸಿದ ಸಿಎಂ

ರಾಜ್ಯದಲ್ಲಿ ನಡೆದಿರುವ ಈ ದುರಂತಕ್ಕೆ ಸಿಎಂ ಅಶೋಕ್ ಗೆಹ್ಲೋಟ್​, ಕಾಂಗ್ರೆಸ್​ ನಾಯಕ ಸಚಿನ್ ಪೈಲಟ್​​, ಮಾಜಿ ಸಿಎಂ ವಸುಂಧರಾ ರಾಜೆ ಸೇರಿ ಹಲವರು ಸಂತಾಪ ಸೂಚಿಸಿದ್ದಾರೆ. ಮೃತರ ಸಂಬಂಧಿಕರಿಗೆ ತಲಾ 4 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ರಾಜ್ಯ ಸರ್ಕಾರ ಘೋಷಿಸಿದೆ.

  • कोटा, धौलपुर, झालावाड़, जयपुर और बारां में आज आकाशीय बिजली गिरने से हुई जनहानि बेहद दुखद एवं दुर्भाग्यपूर्ण है। प्रभावितों के परिजनों के प्रति मेरी गहरी संवेदनाएं, ईश्वर उन्हें सम्बल प्रदान करें।
    अधिकारियों को निर्देश दिए हैं कि पीड़ित परिवारों को शीघ्र सहायता उपलब्ध करवाएं।

    — Ashok Gehlot (@ashokgehlot51) July 11, 2021 " class="align-text-top noRightClick twitterSection" data=" ">

ETV Bharat Logo

Copyright © 2024 Ushodaya Enterprises Pvt. Ltd., All Rights Reserved.