ನವದೆಹಲಿ: ಸಂಸದರು ಹೊಸ ಭರವಸೆ ಮತ್ತು ವಿಶ್ವಾಸದೊಂದಿಗೆ ಹೊಸ ಕಟ್ಟಡವನ್ನು ಪ್ರವೇಶಿಸಲಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಸೋಮವಾರ (ನಿನ್ನೆ) ಲೋಕಸಭೆಯಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಭಾಷಣ ಮಾಡಿದ ಅವರು, "ಭಾರತದ ಪ್ರಜಾಪ್ರಭುತ್ವದ ಪಯಣವನ್ನು ನೆನಪಿಸಿಕೊಂಡರು. ಪಾರಂಪರಿಕ ಕಟ್ಟಡದಲ್ಲಿ ಕೊನೆಯ ದಿನವನ್ನು ಸ್ವಾತಂತ್ರ್ಯದ ನಂತರ ಸೇವೆ ಸಲ್ಲಿಸಿದ 7,500ಕ್ಕೂ ಹೆಚ್ಚು ಸಂಸದರಿಗೆ ಮೀಸಲಿಡಬೇಕು" ಎಂದರು.
-
बीते 75 वर्षों में संसद से जुड़ा हर सदस्य आज इसलिए बेहद अभिनंदनीय है… pic.twitter.com/slkfRbhQFO
— Narendra Modi (@narendramodi) September 18, 2023 " class="align-text-top noRightClick twitterSection" data="
">बीते 75 वर्षों में संसद से जुड़ा हर सदस्य आज इसलिए बेहद अभिनंदनीय है… pic.twitter.com/slkfRbhQFO
— Narendra Modi (@narendramodi) September 18, 2023बीते 75 वर्षों में संसद से जुड़ा हर सदस्य आज इसलिए बेहद अभिनंदनीय है… pic.twitter.com/slkfRbhQFO
— Narendra Modi (@narendramodi) September 18, 2023
"ಗಣೇಶ ಚತುರ್ಥಿಯ ಶುಭ ಸಂದರ್ಭದಲ್ಲಿ ಸಂಸತ್ತು ಹೊಸ ಭವ್ಯ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿದೆ. ಭವಿಷ್ಯದ ಭರವಸೆಯೊಂದಿಗೆ ನಾವು ಹಳೆಯ ಕಟ್ಟಡವನ್ನು ತೊರೆಯುತ್ತಿದ್ದೇವೆ. ಹೊಸ ಸಂಸತ್ತಿನ ಕಟ್ಟಡವನ್ನು ಪ್ರವೇಶಿಸುತ್ತಿದ್ದಂತೆ, ಹೊಸ ಭರವಸೆ ಮತ್ತು ಆತ್ಮವಿಶ್ವಾಸದಿಂದ ಅಲ್ಲಿಗೆ ಹೋಗುತ್ತೇವೆ ಎಂಬ ವಿಶ್ವಾಸ ನನಗಿದೆ. ಈ ಕಟ್ಟಡದ ಪ್ರತಿ ಇಟ್ಟಿಗೆಗೂ ನಮಸ್ಕರಿಸುತ್ತೇನೆ" ಎಂದು ಹೇಳಿದರು.
ಹಳೆಯ ಸಂಸತ್ ಭವನದ ಐತಿಹಾಸಿಕ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ ಪ್ರಧಾನಿ ಮೋದಿ, "ಹಳೆಯ ಸಂಸತ್ ಭವನದ ನಿರ್ಮಾಣಕ್ಕೆ ವಿದೇಶಿ ಆಡಳಿತಗಾರರು ಅಡಿಪಾಯ ಹಾಕಿದರೆ, ಭಾರತೀಯರ ಬೆವರು, ಶ್ರಮ ಮತ್ತು ಹಣದ ಮೂಲಕ ಅದನ್ನು ನಿರ್ಮಿಸಲಾಗಿದೆ" ಎಂದು ಸ್ಮರಿಸಿದರು.
-
यह हमारे लोकतंत्र की ताकत और हर भारतीय का आशीर्वाद है, जिसने मुझ जैसे एक गरीब परिवार के बच्चे को पार्लियामेंट में पहुंचाया। pic.twitter.com/zSNv8AfmTm
— Narendra Modi (@narendramodi) September 18, 2023 " class="align-text-top noRightClick twitterSection" data="
">यह हमारे लोकतंत्र की ताकत और हर भारतीय का आशीर्वाद है, जिसने मुझ जैसे एक गरीब परिवार के बच्चे को पार्लियामेंट में पहुंचाया। pic.twitter.com/zSNv8AfmTm
— Narendra Modi (@narendramodi) September 18, 2023यह हमारे लोकतंत्र की ताकत और हर भारतीय का आशीर्वाद है, जिसने मुझ जैसे एक गरीब परिवार के बच्चे को पार्लियामेंट में पहुंचाया। pic.twitter.com/zSNv8AfmTm
— Narendra Modi (@narendramodi) September 18, 2023
ಮುಂದಿನ ಪೀಳಿಗೆಗೆ ಸ್ಫೂರ್ತಿ: ಸ್ವಾತಂತ್ರ್ಯಕ್ಕೆ ಮೊದಲು ಇದು ಇಂಪೀರಿಯಲ್ ಲೆಜಿಸ್ಲೇಟಿವ್ ಕೌನ್ಸಿಲ್ ಆಗಿತ್ತು. ಸ್ವಾತಂತ್ರ್ಯಾ ನಂತರ ಸಂಸತ್ ಕಟ್ಟಡವಾಯಿತು. "ನಾವು ಹೊಸ ಕಟ್ಟಡಕ್ಕೆ ಹೋಗಬಹುದು, ಆದರೆ ಹಳೆಯ ಕಟ್ಟಡವು ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ. ಇದು ಭಾರತದ ಪ್ರಯಾಣದ ಪ್ರಮುಖ ಅಧ್ಯಾಯ" ಎಂದು ಮೋದಿ ಬಣ್ಣಿಸಿದರು.
ಇದನ್ನೂ ಓದಿ: ವಿಶೇಷ ಸಂಸತ್ ಅಧಿವೇಶನ: ಹೊಸ ಕಟ್ಟಡದಲ್ಲಿ ರಿಹರ್ಷಲ್.. ಎಲ್ಲ ವ್ಯವಸ್ಥೆಗಳ ಪರಿಶೀಲನೆ!
-
Lok Sabha Secretariat issues gazette notification, designating the new Parliament building as the Parliament House of India.#RajyaSabha #LokSabha #NewParliamentBuilding #NewParliamentHouse #ParliamentSpecialSession pic.twitter.com/OMLT6W929m
— SansadTV (@sansad_tv) September 19, 2023 " class="align-text-top noRightClick twitterSection" data="
">Lok Sabha Secretariat issues gazette notification, designating the new Parliament building as the Parliament House of India.#RajyaSabha #LokSabha #NewParliamentBuilding #NewParliamentHouse #ParliamentSpecialSession pic.twitter.com/OMLT6W929m
— SansadTV (@sansad_tv) September 19, 2023Lok Sabha Secretariat issues gazette notification, designating the new Parliament building as the Parliament House of India.#RajyaSabha #LokSabha #NewParliamentBuilding #NewParliamentHouse #ParliamentSpecialSession pic.twitter.com/OMLT6W929m
— SansadTV (@sansad_tv) September 19, 2023
ಮೋದಿ ವಿರುದ್ಧ ಕಾಂಗ್ರೆಸ್ ಟೀಕೆ: ಪ್ರಧಾನಿ ನರೇಂದ್ರ ಮೋದಿ ಅವರು "ಎಲ್ಲರಿಗಿಂತ ಕೆಟ್ಟ ಸಂಸದೀಯ ಹಾಜರಾತಿ ದಾಖಲೆ ಹೊಂದಿದ್ದಾರೆ. ಹೊಸ ಸಂಸತ್ ಭವನದಲ್ಲಾದರೂ ಅವರು ಉಭಯ ಸದನಗಳಲ್ಲಿ ಹೆಚ್ಚು ಬಾರಿ ಕುಳಿತುಕೊಳ್ಳಲಿ" ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.
ರಾಜ್ಯಸಭೆ ಮತ್ತು ಲೋಕಸಭೆ ಇಂದು ಮಧ್ಯಾಹ್ನ ಹೊಸ ಸಂಸತ್ ಕಟ್ಟಡದಲ್ಲಿ ಸಮಾವೇಶಗೊಳ್ಳಲಿದೆ. ಪ್ರಧಾನಿ ಉಭಯ ಸದನಗಳಲ್ಲಿ ಹೆಚ್ಚಾಗಿ ಕುಳಿತುಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೆನೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. "ಸಂಸತ್ತಿನಲ್ಲಿ ಅತ್ಯಂತ ಕೆಟ್ಟ ಹಾಜರಾತಿ ದಾಖಲೆಯೊಂದಿಗೆ ಕನಿಷ್ಠ ಸಾಂಪ್ರದಾಯಿಕವಲ್ಲದ ಹಸ್ತಕ್ಷೇಪಗಳಿಂದ ಅವರು (ಮೋದಿ) ಗುರುತಿಸಲ್ಪಟ್ಟಿದ್ದಾರೆ" ಎಂದು ರಮೇಶ್ ಹೇಳಿದ್ದಾರೆ.
ಮಧ್ಯಾಹ್ನ ಹೊಸ ಸಂಸತ್ ಕಟ್ಟಡದಲ್ಲಿ ಸಮಾವೇಶ: ಇಂದು ರಾಜ್ಯಸಭೆಯು ಹೊಸ ಸಂಸತ್ ಭವನದ ಮೇಲ್ಮನೆ ಕೊಠಡಿಯಲ್ಲಿ ಮಧ್ಯಾಹ್ನ 2:15ಕ್ಕೆ ಸಭೆ ಸೇರಿದರೆ, ಲೋಕಸಭೆ ಹೊಸದಾಗಿ ನಿರ್ಮಿಸಲಾದ ಸಂಕೀರ್ಣದ ಕೆಳಮನೆ ಕೊಠಡಿಯಲ್ಲಿ ಮಧ್ಯಾಹ್ನ 1:15ಕ್ಕೆ ಸೇರಲಿದೆ. ಸೋಮವಾರ, ಉಭಯ ಸದನಗಳ ಸದಸ್ಯರು ಹಳೆಯ ಕಟ್ಟಡದಲ್ಲಿ, "ಸಂವಿಧಾನ ಸಭೆಯಿಂದ ಆರಂಭವಾದ 75 ವರ್ಷಗಳ ಸಂಸತ್ತಿನ ಪಯಣ, ಸಾಧನೆಗಳು, ಅನುಭವಗಳು, ನೆನಪುಗಳು ಮತ್ತು ಕಲಿಕೆಗಳು" ಕುರಿತು ಚರ್ಚೆ ನಡೆಸಿದ್ದರು.
ಹೊಸ ಸಂಸತ್ ಭವನದಲ್ಲಿ ಇಂಧನ ಉಳಿತಾಯ: ಹೊಸ ಸಂಸತ್ ಕಟ್ಟಡದ ಬೆಳಕಿನಲ್ಲಿ ಇಂಧನ ದಕ್ಷತೆ ಪ್ರಮುಖ ಕೇಂದ್ರವಾಗಿದೆ. ಈ ರಚನೆಯು ಸಾಂಪ್ರದಾಯಿಕ ವ್ಯವಸ್ಥೆಗಿಂತ 50 ಪ್ರತಿಶತದಷ್ಟು ಕಡಿಮೆ ಶಕ್ತಿಯನ್ನು ಬಳಸುತ್ತದೆ ಎಂದು ಉದ್ಯಮದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ವರ್ಷದ ಮೇನಲ್ಲಿ ಉದ್ಘಾಟನೆಗೊಂಡಿರುವ ಕಟ್ಟಡ ಮಂಗಳವಾರದಿಂದ ತನ್ನ ಮೊದಲ ಅಧಿವೇಶನವನ್ನು ಆಯೋಜಿಸಲಿದೆ.
ಸಾಕಷ್ಟು ಕಸ್ಟಮೈಸ್ ಮಾಡಿದ ಲೈಟಿಂಗ್ ವ್ಯವಸ್ಥೆ ಹೊಂದಿದೆ ಎಂದು ಬೆಳಕಿನ ಭಾಗವನ್ನು ನಿರ್ವಹಿಸುವ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನಾವು ಉತ್ಪನ್ನಗಳೊಂದಿಗೆ ಸಂಯೋಜಿತ ಸಂವೇದಕಗಳನ್ನು ಹೊಂದಿದ್ದೇವೆ ಎಂದು ಪ್ಯಾನಾಸೋನಿಕ್ ಲೈಫ್ ಸೊಲ್ಯೂಷನ್ಸ್‌ನಲ್ಲಿನ ಬೆಳಕಿನ ವಿಭಾಗದ ವ್ಯಾಪಾರ ಗುಂಪಿನ ಮುಖ್ಯಸ್ಥ ರಾಜಾ ಮುಖರ್ಜಿ ತಿಳಿಸಿದ್ದಾರೆ. ಡೇಲೈಟ್ ಇಂಟಿಗ್ರೇಷನ್ ಸೆನ್ಸರ್‌ಗಳು ಮತ್ತು ಮೋಷನ್ ಆಕ್ಯುಪೆನ್ಸಿ ಸೆನ್ಸಾರ್‌ಗಳು ಇವೆ. ಇದು ಒಟ್ಟು ಇಂಧನ ಉಳಿತಾಯವನ್ನು ಹೆಚ್ಚಿಸುತ್ತದೆ ಎಂದು ಅವರು ಹೇಳಿದರು.
ಇದನ್ನೂ ಓದಿ: ನಮ್ಮ ಸಂಸತ್ತು, ನಮ್ಮ ಹೆಮ್ಮೆ: ಫೋಟೋಗಳಲ್ಲಿ ಸೆರೆಯಾದ ಐತಿಹಾಸಿಕ ಕ್ಷಣಗಳು..