ಸ್ಯಾನ್ ಫ್ರಾನ್ಸಿಸ್ಕೋ( ಅಮೆರಿಕ): 44 ಶತಕೋಟಿ ಟ್ವಿಟರ್ ಸ್ವಾಧೀನ ಒಪ್ಪಂದವು ಶೀಘ್ರದಲ್ಲೇ ಮುಕ್ತಾಯಗೊಳ್ಳಲಿದ್ದು, ಟೆಸ್ಲಾ ಕಂಪನಿಯ ಸಿಇಒ ಎಲಾನ್ ಮಸ್ಕ್ ಬುಧವಾರ ಸ್ಯಾನ್ ಫ್ರಾನ್ಸಿಸ್ಕೋದ ಟ್ವಿಟರ್ ಪ್ರಧಾನ ಕಚೇರಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಅವರು ತಮ್ಮ ಕೈ ಕೈತೊಳೆಯುವ ಸಿಂಕ್ ಒಂದನ್ನು ಹಿಡಿದುಕೊಂಡು ಕಚೇರಿಗೆ ಆಗಮಿಸಿದ್ದು ವಿಶೇಷವಾಗಿತ್ತು.
ಈ ಕುರಿತು ಟ್ವೀಟ್ ಮಾಡಿ ವಿಡಿಯೋವೊಂದನ್ನು ಹಂಚಿಕೊಂಡಿರುವ ಎಲಾನ್ ಮಸ್ಕ್, ಟ್ವಿಟರ್ ಕಚೇರಿಗೆ ಹೋಗುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. ವಿಡಿಯೋದಲ್ಲಿ ಮಸ್ಕ್ ಬೃಹತ್ ಬಿಳಿ ಬಣ್ಣದ ಸಿಂಕ್‌ನೊಂದಿಗೆ ಟ್ವಿಟರ್ ಕಚೇರಿಗೆ ಪ್ರವೇಶಿಸಿದ್ದಾರೆ. 'ಅದು ಮುಳುಗಲು ಬಿಡಿ' ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾರೆ.
ಏಪ್ರಿಲ್‌ನಲ್ಲಿ ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಅನ್ನು ಸ್ವಾಧೀನಪಡಿಸಿಕೊಳ್ಳುವ ನಿರ್ಧಾರವನ್ನು ಬಿಲಿಯನೇರ್ ಘೋಷಿಸಿದಾಗಿನಿಂದ ಈ ಬೆಳವಣಿಗೆ ಹಲವು ನಾಟಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಗಿತ್ತು. ಜುಲೈನಲ್ಲಿ ಟ್ವಿಟರ್ ಡೀಲ್ ರದ್ದುಗೊಳಿಸಿದ್ದ ಟೆಸ್ಲಾ ಸಿಇಒ, ಟ್ವಿಟರ್ ನಾಯಕತ್ವವು ಬಾಟ್ ಖಾತೆಗಳ ಸಂಖ್ಯೆಯನ್ನು ತಪ್ಪಾಗಿ ಪ್ರತಿನಿಧಿಸುವ ಮೂಲಕ ಖರೀದಿ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ಆರೋಪಿಸಿದ್ದರು.
-
Entering Twitter HQ – let that sink in! pic.twitter.com/D68z4K2wq7
— Elon Musk (@elonmusk) October 26, 2022 " class="align-text-top noRightClick twitterSection" data="
">Entering Twitter HQ – let that sink in! pic.twitter.com/D68z4K2wq7
— Elon Musk (@elonmusk) October 26, 2022Entering Twitter HQ – let that sink in! pic.twitter.com/D68z4K2wq7
— Elon Musk (@elonmusk) October 26, 2022
ಇದನ್ನೂ ಓದಿ: ಮುಗಿದ ಕಿತ್ತಾಟ.. ಮೊದಲ ಆಫರ್ನಂತೆಯೇ ಟ್ವಿಟ್ಟರ್ ಖರೀದಿಸಲು ಎಲಾನ್ ಮಸ್ಕ್ ಒಪ್ಪಿಗೆ
ಬಳಿಕ, ಎಲಾನ್ ಮಸ್ಕ್ ವಿರುದ್ಧ ಟ್ವಿಟರ್ ಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿತ್ತು. ಒಪ್ಪಂದದಿಂದ ನಿರ್ಗಮಿಸಲು ಅವರು ಬಾಟ್‌ಗಳನ್ನು ನೆಪವಾಗಿ ಬಳಸಿದ್ದಾರೆ ಎಂದು ಆರೋಪಿಸಿತ್ತು. ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದ್ದ ಬೆನ್ನಲ್ಲೇ ಕಳೆದ ವಾರ ಯೂಟರ್ನ್ ತೆಗೆದುಕೊಂಡಿದ್ದ ಎಲಾನ್ ಮಸ್ಕ್, ಮೂಲತಃ ಒಪ್ಪಿದ ಬೆಲೆಯಲ್ಲಿ - ಒಂದು ಷೇರಿಗೆ $54.20 ಬೆಲೆಯಲ್ಲಿ ಒಪ್ಪಂದವನ್ನು ಮುಂದುವರಿಸುವುದಾಗಿ ದೃಢಪಡಿಸಿದ್ದರು.
ಇದೀಗ ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಟ್ವಿಟರ್‌ನ ಅಧಿಕೃತ ಮಾಲೀಕನ್ನಾಗಿ ಕಾಣಿಸಿಕೊಳ್ಳಲಿದ್ದು, ಟ್ವಿಟರ್ ಬಯೋವನ್ನು "ಚೀಫ್ ಟ್ವೀಟ್" ಎಂದು ಬದಲಾಯಿಸಿಕೊಂಡಿದ್ದಾರೆ.
ಇದನ್ನೂ ಓದಿ: ಎಲಾನ್ ಮಸ್ಕ್- ಟ್ವಿಟರ್ ಫೈಟ್.. ಮೈಕ್ರೋಬ್ಲಾಗಿಂಗ್ನ ಭದ್ರತಾ ವೈಫಲ್ಯದ ಸಾಕ್ಷ್ಯ ನೀಡಲಿರುವ ಮಾಜಿ ಉದ್ಯೋಗಿ