ETV Bharat / bharat

Maharashtra Political Crisis: ಉದ್ಧವ್​ ಠಾಕ್ರೆ ಬಣಕ್ಕೆ ಮತ್ತೊಂದು ಶಾಕ್​, ಶಿಂಧೆ ಬಣ ಸೇರಿದ ಮತ್ತೊಬ್ಬ ಶಿವಸೇನಾ ನಾಯಕಿ - ಶಿವಸೇನಾ ಇಬ್ಭಾಗ

ಮಹಾರಾಷ್ಟ್ರ ರಾಜಕೀಯದಲ್ಲಿ ದಿನಕ್ಕೊಂದು ಬದಲಾವಣೆ ಉಂಟಾಗುತ್ತಿದೆ. ಸಿಎಂ ಏಕನಾಥ್​ ಶಿಂಧೆ ಬಣಕ್ಕೆ, ಉದ್ಧವ್​ ಠಾಕ್ರೆ ಗುಂಪಿನ ನಾಯಕಿಯೊಬ್ಬರು ಸೇರ್ಪಡೆಯಾಗಿದ್ದಾರೆ.

ಉದ್ಧವ್​ ಠಾಕ್ರೆ ಬಣಕ್ಕೆ ಮತ್ತೊಂದು ಶಾಕ್
ಉದ್ಧವ್​ ಠಾಕ್ರೆ ಬಣಕ್ಕೆ ಮತ್ತೊಂದು ಶಾಕ್
author img

By

Published : Jul 7, 2023, 7:34 PM IST

Updated : Jul 7, 2023, 10:13 PM IST

ಮುಂಬೈ: ಮಾಜಿ ಸಿಎಂ ಉದ್ಧವ್​ ಠಾಕ್ರೆ ಬಣದ ಶಿವಸೇನೆಗೆ ಮತ್ತೊಂದು ಆಘಾತ ಉಂಟಾಗಿದೆ. ಉದ್ಧವ್​ ಆಪ್ತ ಬಣದಲ್ಲಿದ್ದ ವಿಧಾನಪರಿಷತ್​ ಉಪಸಭಾಪತಿ, ಎಂಎಲ್​ಸಿ ನೀಲಂ ಗೊರ್ಹೆ ಅವರು ಸಿಎಂ ಏಕನಾಥ್​ ಶಿಂಧೆ ಅವರ ಬಣಕ್ಕೆ ಜಿಗಿದಿದ್ದಾರೆ. ಕಳೆದ ತಿಂಗಳಷ್ಟೇ ಶಾಸಕಿ ಮನೀಶಾ ಕಾಯಂದೆ ಅವರು ಬಣ ತೊರೆದ ಬಳಿಕ ಇದು ಮತ್ತೊಬ್ಬ ನಾಯಕಿಯ ನಿರ್ಗಮನವಾಗುತ್ತಿರುವುದು ಠಾಕ್ರೆ ಬಣಕ್ಕೆ ತೀವ್ರ ಹಿನ್ನಡೆ ಉಂಟು ಮಾಡಿದೆ.

ಶಿವಸೇನೆಯ ಸಿಎಂ ಏಕನಾಥ್​ ಶಿಂಧೆ ನೇತೃತ್ವದಲ್ಲಿ 35 ಕ್ಕೂ ಅಧಿಕ ಶಾಸಕರು ಉದ್ಧವ್​ ಠಾಕ್ರೆ ಅವರ ವಿರುದ್ಧ ಬಂಡೆದ್ದು ಮೂಲ ಪಕ್ಷದಿಂದ ದೂರ ಸರಿದು ಬಿಜೆಪಿ ಜೊತೆಗೆ ಕೈಜೋಡಿಸಿ ಸರ್ಕಾರ ರಚನೆ ಮಾಡಿದ್ದರು. ಇದರಿಂದ ಮಹಾ ಅಘಾಡಿ ಸರ್ಕಾರ ಪತನಗೊಂಡಿತ್ತು. ಅದಾದ ಬಳಿಕ ನಡೆದ ರಾಜಕೀಯ ವಿಪ್ಲವಗಳಲ್ಲಿ ಶಿಂಧೆ ಬಣವನ್ನೇ ಮೂಲ ಶಿವಸೇನೆ ಎಂದು ಕೋರ್ಟ್​ ತೀರ್ಪು ನೀಡಿತ್ತು. ಇದರಿಂದ ಪಕ್ಷ ಮತ್ತು ಚಿಹ್ನೆಯನ್ನು ಶಿಂಧೆ ಬಣ ಪಡೆದುಕೊಂಡಿತು.

ಇದಾದ ಬಳಿಕ ಠಾಕ್ರೆ ಬಣದ ಒಬ್ಬೊಬ್ಬ ಶಾಸಕರು, ನಾಯಕರು, ಕಾರ್ಯಕರ್ತರು ಸಿಎಂ ಏಕನಾಥ್​ ಶಿಂಧೆ ಬಣಕ್ಕೆ ಜಂಪ್​ ಆಗುತ್ತಿದ್ದಾರೆ. ಇದೀಗ ಉಪಸಭಾಪತಿ ನೀಲಂ ಗೊರ್ಹೆ ಅವರ ಸರದಿಯಾಗಿದೆ. ನೀಲಂ ಅವರು ಶಿಂಧೆ ಬಣ ಸೇರಿದ್ಧಾರೆ. ಫಡ್ನವೀಸ್ ಸರ್ಕಾರದ ಮೊದಲ ಅಧಿವೇಶನದಲ್ಲಿ ಆಡಳಿತ ಪಕ್ಷಗಳು ಆದಿತ್ಯ ಠಾಕ್ರೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದವು. ಈ ವೇಳೆ ಠಾಕ್ರೆ ಗುಂಪಿನ ಶಾಸಕರಿಗೆ ಇದರ ವಿರುದ್ಧ ಮಾತನಾಡಲು ನೀಲಂ ಗೋರ್ಹೆ ಅವರು ಸದನದಲ್ಲಿ ಅವಕಾಶ ನೀಡುತ್ತಿಲ್ಲ ಎಂಬ ಆರೋಪ ಕೇಳಿಬಂದಿತ್ತು.

ಇದರ ವಿರುದ್ಧ ಮಾಜಿ ಸಿಎಂ ಉದ್ಧವ್ ಠಾಕ್ರೆಗೆ ಅವರಿಗೆ ದೂರು ಸಲ್ಲಿಸಲಾಗಿತ್ತು. ಠಾಕ್ರೆ ಅವರು ಗೊರ್ಹೆ ಅವರ ಜೊತೆ ಕಟುವಾಗಿ ಮಾತುಗಳನ್ನಾದಡಿದ್ದರು ಎನ್ನಲಾಗಿದೆ. ಇದರಿಂದ ಬೇಸತ್ತಿರುವ ನೀಲಂ ಶಿಂಧೆ ಬಣ ಸೇರಿದ್ದಾರೆ. ಅಲ್ಲದೇ, ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರೊಂದಿಗೆ ಹಲವು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದರು. ಮಹಾರಾಷ್ಟ್ರ ವಿಧಾನಸಭೆಯ ಇತಿಹಾಸದಲ್ಲಿ 55 ವರ್ಷಗಳ ನಂತರ ನೀಲಂ ಗೋರ್ಹೆ ಅವರು ವಿಧಾನ ಪರಿಷತ್ತಿನ ಮಹಿಳಾ ಉಪ ಸಭಾಪತಿಯಾಗಿ ಆಯ್ಕೆಯಾಗಿದ್ದರು.

2004ರಿಂದ ವಿಧಾನಪರಿಷತ್ ಸದಸ್ಯರಾಗಿರುವ ಅವರು, 2019ರಿಂದ ವಿಧಾನಪರಿಷತ್ ಉಪಸಭಾಪತಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಶಿವಸೇನಾ ಪಕ್ಷದ ನಿಷ್ಠಾವಂತ ನಾಯಕಿ, ವಕ್ತಾರರಾಗಿ ಜವಾಬ್ದಾರಿ ನಿರ್ವಹಿಸಿದ್ದರು. ಏಕನಾಥ್ ಶಿಂಧೆಯವರ ಬಂಡಾಯದ ವೇಳೆ ಠಾಕ್ರೆ ಗುಂಪನ್ನು ನೀಲಂ ಗೋರ್ಹೆ ಭದ್ರವಾಗಿ ಹಿಡಿದಿಟ್ಟಿದ್ದರು. ಇದೀಗ ಅವರೇ ಪಕ್ಷ ಸಿಎಂ ಏಕನಾಥ್​ ಶಿಂಧೆ ಬಣ ಸೇರಿದ್ದಾರೆ.

ಇದನ್ನೂ ಓದಿ: Chandrayaan 3 mission: ಜು.14ರಂದು ಚಂದ್ರಯಾನ 3 ಉಡಾವಣೆ: ಶ್ರೀಹರಿಕೋಟಾದ ಗ್ಯಾಲರಿಯಿಂದ ವೀಕ್ಷಿಸಲು ನಾಗರಿಕರಿಗೆ ಅವಕಾಶ..

Last Updated : Jul 7, 2023, 10:13 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.