ETV Bharat / bharat

ಬಂಗಾಳಿ ಗಾನ ಮಾಂತ್ರಿಕ ಸಂಧ್ಯಾ ಮುಖೋಪಾಧ್ಯಾಯ ಇನ್ನಿಲ್ಲ... ಸಿಎಂ ಸಂತಾಪ - ಸಂಧ್ಯಾ ಮುಖೋಪಾಧ್ಯಾಯ ಇನ್ನಿಲ್ಲ

ಅನಾರೋಗ್ಯದಿಂದ ಬಳಲುತ್ತಿದ್ದ 90 ವರ್ಷದ ಪ್ರಸಿದ್ಧ ಬಂಗಾಳಿ ಗಾನ ಮಾಂತ್ರಿಕ ಸಂಧ್ಯಾ ಮುಖೋಪಾಧ್ಯಾಯ ಅವರು ನಿಧನರಾಗಿದ್ದು, ಸಿಎಂ ಮಮತಾ ಬ್ಯಾರ್ನಜಿ ಸಂತಾಪ ಸೂಚಿಸಿದ್ದಾರೆ.

Sandhya Mukhopadhyay passes away, Legendary Bengali singing maestro Sandhya passes away, Sandhya Mukhopadhyay no more, Sandhya Mukhopadhyay died news, ಸಂಧ್ಯಾ ಮುಖೋಪಾಧ್ಯಾಯ ನಿಧನ, ದಿಗ್ಗಜ ಬೆಂಗಾಲಿ ಗಾಯನ ಮಾಂತ್ರಿಕ ಸಂಧ್ಯಾ ನಿಧನ, ಸಂಧ್ಯಾ ಮುಖೋಪಾಧ್ಯಾಯ ಇನ್ನಿಲ್ಲ, ಸಂಧ್ಯಾ ಮುಖೋಪಾಧ್ಯಾಯ ನಿಧನ ಸುದ್ದಿ,
ಸಂಧ್ಯಾ ಮುಖೋಪಾಧ್ಯಾಯ ನಿಧನ
author img

By

Published : Feb 15, 2022, 11:44 PM IST

ಕೋಲ್ಕತ್ತಾ: 90 ವರ್ಷದ ಪ್ರಸಿದ್ಧ ಬಂಗಾಳಿ ಗಾನ ಮಾಂತ್ರಿಕ ಸಂಧ್ಯಾ ಮುಖೋಪಾಧ್ಯಾಯ ಮಂಗಳವಾರ ತಡರಾತ್ರಿ ಕೋಲ್ಕತ್ತಾದ ನಗರದ ಆಸ್ಪತ್ರೆಯಲ್ಲಿ ನಿಧನರಾದರು.

ಜನವರಿ 27, 2022 ರಂದು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಅವರು ಇತ್ತೀಚೆಗೆ ಕೇಂದ್ರ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿಯನ್ನು ತಿರಸ್ಕರಿಸಿದ್ದಕ್ಕೆ ಸುದ್ದಿಯಾಗಿದ್ದರು.

ಈ ವರ್ಷದ ಗಣರಾಜ್ಯೋತ್ಸವದ ಮೊದಲು ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿತು. ಆದರೆ ಹಿರಿಯ ಗಾಯಕಿ ಈ ವಯಸ್ಸಿನಲ್ಲಿ ಪ್ರಶಸ್ತಿಯನ್ನು ನೀಡಿದ್ದರಿಂದ ತನಗೆ ಅವಮಾನವಾಗಿದೆ ಎಂದು ಭಾವಿಸಿ ಪ್ರಶಸ್ತಿಯನ್ನು ನಿರಾಕರಿಸಿದರು.

ಈ ವರ್ಷ ಜನವರಿ 27 ರಂದು ಗಾಯಕಿ ಸಂಧ್ಯಾ ತೀವ್ರವಾಗಿ ಅನಾರೋಗ್ಯಕ್ಕೆ ಒಳಗಾದ ನಂತರ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಕ್ಷಣ ಗಾಯಕಿಯ ಕುಟುಂಬ ಸದಸ್ಯರನ್ನು ಸಂಪರ್ಕಿಸಿದರು. ಬಳಿಕ ಸಂಧ್ಯಾರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆ ಮಾಡಿದರು.

ಓದಿ: ಭೀಕರ ರಸ್ತೆ ಅಪಘಾತ: ಪಂಜಾಬಿ ನಟ, ಕೆಂಪುಕೋಟೆ ಹಿಂಸಾಚಾರ ಪ್ರಕರಣದ ಆರೋಪಿ ಸಾವು!

ನರೇಂದ್ರನಾಥ್ ಮುಖರ್ಜಿ ಮತ್ತು ಹೆಮ್ಪ್ರೋವಾ ದೇವಿಯ ಆರನೇ ಮಗಳಾಗಿ ಸಂಧ್ಯಾ ಅವರು ಕೊಲ್ಕತ್ತಾದಲ್ಲಿ ಜನಿಸಿದರು. ಬಳಿಕ ಅವರು ಉಸ್ತಾದ್ ಬಡೇ ಗುಲಾಮ್ ಅಲಿ ಅವರಿಂದ ಸಂಗೀತದ ತರಬೇತಿ ಪಡೆದರು.

ಬಂಗಾಳಿ ಕವಿ ಮತ್ತು ಸಂಗೀತ ನಿರ್ದೇಶಕ ಶ್ಯಾಮಲ್ ಗುಪ್ತಾ ಅವರನ್ನು ಸಂಧ್ಯಾ ವಿವಾಹವಾದರು. ಸಂಧ್ಯಾ ಅವರು ಗೀತಾಶ್ರೀ ಬಂಗಾಳಿ ಸಂಗೀತ ವಲಯದಲ್ಲಿ ಜನಪ್ರಿಯರಾಗಿದ್ದರು.

ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇದು ಅತ್ಯಂತ ದುಃಖದ ಸುದ್ದಿ ಎಂದು ಹೇಳಿದ್ದಾರೆ. ಅವರು ನಮ್ಮ ಮಧ್ಯೆ ಇನ್ನಿಲ್ಲ ಎಂದು ನಾನು ಊಹಿಸಲು ಸಾಧ್ಯವಿಲ್ಲ. ಕೋವಿಡ್​ನಿಂದ ಚೇತರಿಸಿಕೊಂಡ ನಂತರ ಅವರ ಆರೋಗ್ಯ ಕ್ಷೀಣಿಸುತ್ತಿದೆ ಎಂದು ನನಗೆ ತಿಳಿದಿರಲಿಲ್ಲ. ಅವರು ಯಾವಾಗಲೂ ಶಿಸ್ತುಬದ್ಧ ಜೀವನವನ್ನು ನಿರ್ವಹಿಸುತ್ತಿದ್ದರು ಎಂದು ಮುಖ್ಯಮಂತ್ರಿ ಮಮತಾ ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.