ETV Bharat / bharat

ಪುಲ್ವಾಮಾ ದಾಳಿಗೆ 2 ವರ್ಷ: ಹುತಾತ್ಮ ಯೋಧರಿಗೆ ಶಾ, ರಾಹುಲ್​ ಸೇರಿದಂತೆ ಗಣ್ಯರ ನಮನ - Congress leader Rahul Gandhi

2019ರ ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಸಿಆರ್‌ಪಿಎಫ್ ಯೋಧರಿಗೆ ಗೃಹ ಸಚಿವ ಅಮಿತ್​ ಶಾ ಸೇರಿದಂತೆ ಗಣ್ಯರು ಟ್ವೀಟ್​ ಮಾಡಿ ನಮನ ಸಲ್ಲಿಸಿದ್ದಾರೆ.

Pulwama terror attack
ಹುತಾತ್ಮ ಯೋಧರಿಗೆ ಶಾ, ರಾಹುಲ್​ ಸೇರಿದಂತೆ ಗಣ್ಯರ ನಮನ
author img

By

Published : Feb 14, 2021, 11:40 AM IST

ನವದೆಹಲಿ: ಪುಲ್ವಾಮಾ ಭಯೋತ್ಪಾದಕ ದಾಳಿ ನಡೆದು ಇಂದಿಗೆ ಎರಡು ವರ್ಷಗಳು ಸಂದಿದ್ದು, ದಾಳಿಯಲ್ಲಿ ಪ್ರಾಣ ಕಳೆದುಕೊಂಡ 40 ಸಿಆರ್‌ಪಿಎಫ್ ಯೋಧರಿಗೆ ಕೇಂದ್ರ ಗೃಹ ಸಚಿವ ಅಮಿತ್​ ಶಾ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ, ಕೇಂದ್ರ ರಕ್ಷಣಾ ಸಚಿವ ರಾಜನಾಥ್​ ಸಿಂಗ್​​ ಸೇರಿದಂತೆ ಗಣ್ಯರು ನಮಿಸಿದ್ದಾರೆ.

  • I bow down to the brave martyrs who lost their lives in the gruesome Pulwama attack on this day in 2019.

    India will never forget their exceptional courage and supreme sacrifice.

    — Amit Shah (@AmitShah) February 14, 2021 " class="align-text-top noRightClick twitterSection" data=" ">

2019 ರಲ್ಲಿ ಈ ದಿನ ನಡೆದ ಭೀಕರ ಪುಲ್ವಾಮಾ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಧೈರ್ಯಶಾಲಿ ಯೋಧರಿಗೆ ನಾನು ನಮಸ್ಕರಿಸುತ್ತೇನೆ. ಭಾರತವು ನಿಮ್ಮ ಅಸಾಧಾರಣ ಧೈರ್ಯ ಮತ್ತು ತ್ಯಾಗವನ್ನು ಎಂದಿಗೂ ಮರೆಯುವುದಿಲ್ಲ ಎಂದು ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.

  • पुलवामा हमले में शहीद हुए वीर सैनिकों को श्रद्धांजलि और उनके परिवारों को नमन।

    देश आपका ऋणी है।

    — Rahul Gandhi (@RahulGandhi) February 14, 2021 " class="align-text-top noRightClick twitterSection" data=" ">

ಪುಲ್ವಾಮಾ ದಾಳಿಯಲ್ಲಿ ಮೃತಪಟ್ಟ ಕೆಚ್ಚೆದೆಯ ಸೈನಿಕರಿಗೆ ನನ್ನ ನಮನಗಳು. ನಿಮ್ಮ ಕುಟುಂಬಗಳಿಗೆ ದೇಶವು ಋಣಿಯಾಗಿರುತ್ತದೆ ಎಂದು ಹಿಂದಿಯಲ್ಲಿ ರಾಹುಲ್ ಗಾಂಧಿ ಟ್ವೀಟ್​ ಮಾಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಭಾರತಾಂಬೆಯ ಧೈರ್ಯಶಾಲಿ ಪುತ್ರರಿಗೆ ನಾನು ನಮಿಸುತ್ತೇನೆ. ರಾಷ್ಟ್ರವು ಅವರ ಅದಮ್ಯ ಧೈರ್ಯ ಮತ್ತು ಶೌರ್ಯಕ್ಕೆ ಯಾವಾಗಲೂ ಋಣಿಯಾಗಿರುತ್ತದೆ ಎಂದು ಜೆ.ಪಿ. ನಡ್ಡಾ ತಮ್ಮ ಟ್ವಿಟರ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

  • जम्मू कश्मीर के पुलवामा में हुए आतंकी हमले में शहीद होने वाले माँ भारती के वीर सपूतों को कोटि-कोटि नमन।

    आपके अदम्य साहस, वीरता व शौर्य का राष्ट्र सदैव ऋणी रहेगा।

    — Jagat Prakash Nadda (@JPNadda) February 14, 2021 " class="align-text-top noRightClick twitterSection" data=" ">

ಇದನ್ನೂ ಓದಿ: ಪುಲ್ವಾಮಾ ದಾಳಿಯ ಮಾಸದ ನೆನಪು: ಆ ಕರಾಳ ದಿನಕ್ಕೆ ಎರಡು ವರ್ಷ

ರಾಷ್ಟ್ರಕ್ಕೆ ಯೋಧರು ಮಾಡಿದ ಸೇವೆ ಮತ್ತು ಅವರ ಪರಮ ತ್ಯಾಗವನ್ನು ಭಾರತ ಎಂದಿಗೂ ಮರೆಯುವುದಿಲ್ಲ ಎಂದು ರಾಜನಾಥ್​ ಸಿಂಗ್ ಹೇಳಿದ್ದಾರೆ.

  • I pay homage to those brave @crpfindia personnel who sacrificed their lives in 2019 Pulwama terror attack.

    India will never forget their service to the nation and their supreme sacrifice. We continue to stand with their families, who had to suffer due to this attack.

    — Rajnath Singh (@rajnathsingh) February 14, 2021 " class="align-text-top noRightClick twitterSection" data=" ">

2019ರ ಫೆಬ್ರವರಿ 14 ರಂದು ಸ್ಫೋಟಕ ತುಂಬಿದ ವಾಹನವನ್ನು ಸಿಆರ್‌ಪಿಎಫ್ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಬಸ್​ಗೆ ಡಿಕ್ಕಿ ಹೊಡೆಸಿ ಉಗ್ರರು ಆತ್ಮಾಹುತಿ ಬಾಂಬ್​ ದಾಳಿ ನಡೆಸಿದ್ದರು. ಘಟನೆಯಲ್ಲಿ 40 ಭಾರತೀಯ ಯೋಧರು ಹುತಾತ್ಮರಾಗಿದ್ದರು. ಹಲವರು ಗಾಯಗೊಂಡಿದ್ದರು. ಪಾಕಿಸ್ತಾನ ಮೂಲದ ಉಗ್ರ ಸಂಘಟನೆಯಾದ ಜೈಷ್-ಎ-ಮೊಹಮ್ಮದ್ ದಾಳಿಯ ಹೊಣೆ ಹೊತ್ತಿತ್ತು. ಇದಕ್ಕೆ ಪ್ರತಿಯಾಗಿ ಬಾಲಕೋಟ್​ನಲ್ಲಿ ಭಯೋತ್ಪಾದಕ ಶಿಬಿರಗಳ ಮೇಲೆ ವಾಯುದಾಳಿ ನಡೆಸಿ, ಸುಮಾರು 100 ಉಗ್ರರನ್ನು ಭಾರತೀಯ ಸೇನೆ ಬೇಟೆಯಾಡಿ ಪಾಕಿಸ್ತಾನಕ್ಕೆ ಬುದ್ಧಿ ಕಲಿಸಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.