ETV Bharat / bharat

ಬಾರಾಬಂಕಿಯಲ್ಲಿ ದೇಶದ ಅತಿದೊಡ್ಡ ಕುದುರೆ ಜಾತ್ರೆ  ಆರಂಭ - ಮೂರನೇ ಅತಿದೊಡ್ಡ ಪಶು ಮೇಳ

ವಿವಿಧ ತಳಿಯ ಕುದುರೆಗಳಿಗೆ ವಿಶೇಷವಾಗಿ ಪ್ರಸಿದ್ಧವಾಗಿರುವ ದೇವನ್ ಜಾನುವಾರು ಜಾತ್ರೆಯಲ್ಲಿ ದೇಶದ ವಿವಿಧ ಭಾಗಗಳಿಂದ ಪ್ರಾಣಿಗಳನ್ನು ಮಾರಾಟಕ್ಕಾಗಿ ತರಲಾಗುತ್ತದೆ. ಬಾರಾಬಂಕಿ ಜಾನುವಾರು ಜಾತ್ರೆಗೆ ಒಂದು ತಿಂಗಳ ಮೊದಲೇ ಸಿದ್ಧತೆಗಳು ಆರಂಭವಾಗುತ್ತವೆ.

ದೇಶದ ಅತಿದೊಡ್ಡ ಕುದುರೆ ಜಾತ್ರೆ ಬಾರಾಬಂಕಿಯಲ್ಲಿ ಆರಂಭ
Largest cattle fair for horses kickstarts at Barabanki
author img

By

Published : Oct 19, 2022, 1:00 PM IST

ಬಾರಾಬಂಕಿ (ಉತ್ತರ ಪ್ರದೇಶ): ಪ್ರಾಣಿ ಪ್ರಿಯರಿಗೆ ಅತ್ಯಂತ ಇಷ್ಟವಾದ ದೇವನ್ ಜಾನುವಾರು ಜಾತ್ರೆ ಅಕ್ಟೋಬರ್ 18 ರಿಂದ ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯಲ್ಲಿ ಆರಂಭವಾಗಿದೆ. ಬಿಹಾರದ ಸೋನೆಪುರ್ ಜಾನುವಾರು ಜಾತ್ರೆ ಮತ್ತು ರಾಜಸ್ಥಾನದ ಪುಷ್ಕರ್ ನಂತರ, 'ಬಾರಾಬಂಕಿ ಮೇಳ' ದೇಶದ ಮೂರನೇ ಅತಿದೊಡ್ಡ ಪಶು ಮೇಳವಾಗಿದೆ. ಕುದುರೆಗಳ ಪ್ರದರ್ಶನ ಮತ್ತು ಮಾರಾಟ ಬಾರಾಬಂಕಿ ಜಾತ್ರೆಯ ಪ್ರಮುಖ ಆಕರ್ಷಣೆಗಳಾಗಿವೆ.

ವಿವಿಧ ತಳಿಯ ಕುದುರೆಗಳಿಗೆ ವಿಶೇಷವಾಗಿ ಪ್ರಸಿದ್ಧವಾಗಿರುವ ದೇವನ್ ಜಾನುವಾರು ಜಾತ್ರೆಯಲ್ಲಿ ದೇಶದ ವಿವಿಧ ಭಾಗಗಳಿಂದ ಪ್ರಾಣಿಗಳನ್ನು ಮಾರಾಟಕ್ಕಾಗಿ ತರಲಾಗುತ್ತದೆ. ಬಾರಾಬಂಕಿ ಜಾನುವಾರು ಜಾತ್ರೆಗೆ ಒಂದು ತಿಂಗಳ ಮೊದಲೇ ಸಿದ್ಧತೆಗಳು ಆರಂಭವಾಗುತ್ತವೆ. ಮೇಳದ ಮೈದಾನದಲ್ಲಿ ಗೃಹಾಲಂಕಾರ, ಪೀಠೋಪಕರಣಗಳು, ಕಲಾಕೃತಿಗಳು ಮತ್ತು ಗೃಹೋಪಯೋಗಿ ವಸ್ತುಗಳ ವಿವಿಧ ಮಳಿಗೆಗಳನ್ನು ಹಾಕಲಾಗಿದ್ದರೂ, ಕುದುರೆಗಳು ಪ್ರಮುಖ ಆಕರ್ಷಣೆಯಾಗಿವೆ.

ಈಟಿವಿ ಭಾರತದ ಜೊತೆ ಮಾತನಾಡಿದ ಮಹಾರಾಷ್ಟ್ರದ ಜಾನುವಾರು ವ್ಯಾಪಾರಿ ಸಚಿನ್ ಗವಳಿ, ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ಪಂಜಾಬ್‌ನ ಜನರು ಕುದುರೆಗಳನ್ನು ಖರೀದಿಸಲು ದೇವವ್ ಜಾತ್ರೆಗೆ ಹೆಚ್ಚಾಗಿ ಬರುತ್ತಾರೆ. ದೇಶದ ನಡೆಯುವ ಅತಿದೊಡ್ಡ ಮೂರು ಜಾನುವಾರು ಜಾತ್ರೆಗಳ ಪೈಕಿ ಇದೂ ಒಂದು. ಬಿಹಾರದ ಸೋನೆಪುರ್ ಮತ್ತು ರಾಜಸ್ಥಾನದ ಪುಷ್ಕರ್‌ಗೆ ಹೋಲಿಸಿದರೆ ಇದು ಬಹಳ ಉತ್ತಮವಾಗಿದೆ. ಇಲ್ಲಿನ ರೈತರು ಇಲ್ಲಿ ಕುದುರೆ ಮರಿಗಳನ್ನು ಖರೀದಿಸುತ್ತಾರೆ ಮತ್ತು ಅವುಗಳನ್ನು ಸಾಕಿ ದೊಡ್ಡವು ಮಾಡಿ ಜಾತ್ರೆಯಲ್ಲಿ ಮರು ಮಾರಾಟ ಮಾಡುತ್ತಾರೆ ಎಂದು ಅವರು ಹೇಳಿದರು.

ಇದನ್ನೂ ಓದಿ: ತೆಲಂಗಾಣದ ಮೇಡಾರಂ ಜಾತ್ರೆಯ ಸುಂದರ ಫೋಟೋಸ್​​

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.