ಮುಂಬೈ: (ಮಹಾರಾಷ್ಟ್ರ): 100 ರೂ. ವಿಚಾರಕ್ಕಾಗಿ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ. ಕೊಲೆ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮುಂಬೈನ ಗಿರ್ಗಾಂವ್ನಲ್ಲಿ 35 ವರ್ಷದ ವ್ಯಕ್ತಿಯೋರ್ವನ ಮೇಲೆ ಆತನ ಸಹೋದ್ಯೋಗಿ ಸಿಮೆಂಟ್ ಬ್ಲಾಕ್ನಿಂದ ಹೊಡೆದು ಕೊಲೆ ಮಾಡಿದ್ದಾನೆ. ಮೂಲತಃ ರಾಜಸ್ಥಾನದ ಅರ್ಜುನ್ ಯಶ್ವಂತ್ ಸಿಂಗ್ ತನ್ನ ಸಹೋದ್ಯೋಗಿಯಿಂದ 100 ರೂಪಾಯಿ ಸಾಲ ಪಡೆದುಕೊಂಡಿದ್ದನು. ಇದೇ ವಿಚಾರವಾಗಿ ಗುರುವಾರ ರಾತ್ರಿ ಕುಡಿದ ಮತ್ತಿನಲ್ಲಿ ಇಬ್ಬರ ಮಧ್ಯೆ ಜಗಳವಾಗಿದೆ. ಈ ವೇಳೆ ಸಿಮೆಂಟ್ ಬ್ಲಾಕ್ನಿಂದ ತಲೆಗೆ ಹೊಡೆದು ಮನೋಜ್ ಸ್ಥಳದಿಂದ ಪರಾರಿಯಾಗಿದ್ದಾನೆ. ಇದರ ಬೆನ್ನಲ್ಲೇ ಅರ್ಜುನ್ ಯಶ್ವಂತ್ ಸಿಂಗ್ ಸಾವನ್ನಪ್ಪಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು ಬಂಧಿಸುವಲ್ಲಿ ವಿಪಿ ರಸ್ತೆಯ ಪೊಲೀಸರು ಯಶಸ್ವಿಯಾಗಿದ್ದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿರಿ: 11 ವಿಮಾನಗಳಲ್ಲಿ 2,200 ಭಾರತೀಯರು ಉಕ್ರೇನ್ನಿಂದ ನಾಳೆ ತಾಯ್ನಾಡಿಗೆ: ಅಮಿತ್ ಶಾ ಮಾಹಿತಿ
ಸಣ್ಣ ವಿವಾದಕ್ಕೆ ಯುವಕನ ಕೊಲೆ: ಮತ್ತೊಂದು ಪ್ರಕರಣದಲ್ಲಿ ಸಣ್ಣ ವಿವಾದಕ್ಕಾಗಿ ಯುವಕನೋರ್ವನ ಮೇಲೆ ದುಷ್ಕರ್ಮಿಗಳು ಕಲ್ಲಿನಿಂದ ಹಲ್ಲೆ ನಡೆಸಿ, ಕೊಲೆ ಮಾಡಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಇದಕ್ಕೆ ಸಂಬಂಧಿಸಿದಂತೆ ಥಾಣೆಯ ಕಲ್ಯಾಣ ತಾಲೂಕು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಮೇಶ್ ಎಂಬ ಯುವಕ ತನ್ನ ಸ್ನೇಹಿತರೊಂದಿಗೆ ಸೇರಿ ಕಲ್ಯಾಣ ತಾಲೂಕಿನ ಖಡವಲಿ ನದಿಗೆ ಈಜಲು ತೆರಳಿದ್ದಾರೆ. ಈ ವೇಳೆ ಅಪರಿಚಿತರು ಇವರನ್ನ ಪ್ರಶ್ನೆ ಮಾಡಿದ್ದು, ವಾಗ್ವಾದ ನಡೆದಿದೆ. ಈ ವೇಳೆ ಉಮೇಶ್ ಎಂಬಾತನ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಲಾಗಿದ್ದು, ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.