ETV Bharat / bharat

ಪೂಂಚ್‌ನಲ್ಲಿ ಭೂಕುಸಿತ: ಅವಶೇಷಗಳಡಿ ತಾಯಿ-ಮಗಳು ಸಿಲುಕಿ ಸಾವು

author img

By

Published : Nov 4, 2022, 2:30 PM IST

ಭೂಕುಸಿತವುಂಟಾಗಿ ಮನೆಯೂ ಮಣ್ಣಿನವಶೇಷಗಳಡಿ ಸಿಲುಕಿದ ಪರಿಣಾಮ ಒಂದೇ ಕುಟುಂಬದ ತಾಯಿ ಮಗಳು ಮೃತಪಟ್ಟು, ಇಬ್ಬರು ತೀವ್ರ ಗಾಯಗೊಂಡಿರುವ ಘಟನೆ ಶುಕ್ರವಾರ ಬೆಳಗ್ಗೆ ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯ ಬಫ್ಲಿಯಾಜ್ ಪ್ರದೇಶದಲ್ಲಿ ನಡೆದಿದೆ.

landslide in poonch a ruined house
ಪೂಂಚ್ ದಲ್ಲಿ ಭೂಕುಸಿತ,ಕಾರ್ಯಾಚರಣೆಯಲ್ಲಿ ಸೇನಾಸಿಬ್ಬಂದಿ

ಪೂಂಚ್ (ಜಮ್ಮುಕಾಶ್ಮೀರ): ಭೂಕುಸಿತವುಂಟಾಗಿ ಮನೆಯೂ ನೆಲಕಚ್ಚಿದ ಪರಿಣಾಮ ಒಂದೇ ಕುಟುಂಬದ ತಾಯಿ ಮಗಳು ಮೃತಪಟ್ಟು, ಇಬ್ಬರು ತೀವ್ರ ಗಾಯಗೊಂಡಿರುವ ಘಟನೆ ಶುಕ್ರವಾರ ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯ ಬಫ್ಲಿಯಾಜ್ ಪ್ರದೇಶದಲ್ಲಿ ನಡೆದಿದೆ.

ಬೆಳಗ್ಗೆ ಶುಕ್ರವಾರ ಭೂಕುಸಿತ ಸಂಭವಿಸಿದ್ದು ಮೊಹಮ್ಮದ್ ಲತೀಪ್ ಅವರ ಮನೆ ಮಣ್ಣಿನವಶೇಷಗಳಡಿ ಸಿಲುಕಿದೆ. ಈ ದುರಂತದಲ್ಲಿ ಪತ್ನಿ ನಸೀಮ್ ಅಖ್ತರ್ (40) ಪುತ್ರಿ ರುಬಿನಾ ಕೌಸರ್ (12) ಸ್ಥಳದಲ್ಲೇ ಮೃತಪಟ್ಟರೆ, ಲತೀಪ್ ಹಾಗೂ ಮಗ ಬಶರತ್ ಅವರು ತೀವ್ರ ಗಾಯಗೊಂಡಿದ್ದರು.

ಸೇನಾ ಸಿಬ್ಬಂದಿ ಯಶಸ್ವಿ ಕಾರ್ಯಾಚರಣೆ: ಈ ಸುದ್ದಿ ತಿಳಿದ ತಕ್ಷಣ ಕಮಾಂಡರ್ ಕ್ಯಾಪ್ಟನ್ ಅಮನದೀಪ್ ನೇತೃತ್ವದಲ್ಲಿ ಸ್ಥಳೀಯ ಪೊಲೀಸರು ಹಾಗೂ 48 RR ಸೇನಾ ಸಿಬ್ಬಂದಿ ಜಂಟಿ ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ. ಗಾಯಗೊಂಡಿದ್ದ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದು, ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದಾರೆ.

ದುರ್ಘಟನೆಯಲ್ಲಿ ತಾಯಿ-ಮಗಳು ಇಬ್ಬರು ಮೃತಪಟ್ಟಿದ್ದಾರೆ. ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಎಸ್‌ಎಚ್‌ಒ ಸುರನ್‌ಕೋಟೆ ರಾಜವೀರ್ ಸಿಂಗ್ ಖಚಿತಪಡಿಸಿದ್ದಾರೆ. ಬಫ್ಲಿಯಾಜ್ ಪ್ರದೇಶದ ಸರಪಂಚ್ ತಾಹಿರಾ ತಬಸ್ಸುಮ್ ಅವರು ಭೂ ಕುಸಿತದಿಂದ ಪೀಡಿತ ಈ ಕುಟುಂಬಕ್ಕೆ ತಕ್ಷಣ ಪರಿಹಾರಗಳನ್ನು ಒದಗಿಸಬೇಕೆಂದು ಒತ್ತಾಯಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.