ಲಖನೌ, ಉತ್ತರಪ್ರದೇಶ: ಬುಧವಾರ ಚಂದ್ರನ ಅಂಗಳಕ್ಕೆ ವಿಕ್ರಮ್ ಲ್ಯಾಂಡರ್ ಕಾಲಿಡಲಿದೆ. ಸಂಜೆ 6.04 ನಿಮಿಷಕ್ಕೆ ಚಂದ್ರನ ಅಂತರಿಕ್ಷದಿಂದ ವಿಕ್ರಮ್ ಲ್ಯಾಂಡರ್ ಸುರಕ್ಷಿತವಾಗಿ ಕಾಲೂರಲಿದ್ದಾನೆ. ಈ ವಿದ್ಯಮಾನಗಳನ್ನು ಕಣ್ತುಂಬಿಕೊಳ್ಳುವ ಉದ್ದೇಶದಿಂದ ಉತ್ತರ ಪ್ರದೇಶದ ಎಲ್ಲಾ ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳಿಗೆ, ಇಸ್ರೋದ ನೇರಪ್ರಸಾರವನ್ನು ತೋರಿಸಲಾಗುವುದು. ಇದಕ್ಕಾಗಿ ಎಲ್ಲ ಶಾಲೆಗಳನ್ನು ಆಗಸ್ಟ್ 23 ರಂದು ಸಂಜೆ 5:15 ರಿಂದ 6:15 ರವರೆಗೆ ತೆರೆಯಲು ಅಲ್ಲಿನ ಶಿಕ್ಷಣ ಇಲಾಖೆಗೆ ಸೂಚನಗೆಳನ್ನು ನೀಡಲಾಗಿದೆ. ಶಾಲಾ ಶಿಕ್ಷಣ ನಿರ್ದೇಶಕ ವಿಜಯ್ ಕಿರಣ್ ಆನಂದ್ಈ ಸಂಬಂಧ ಸುತ್ತೋಲೆಯನ್ನು ಕೂಡಾ ಹೊರಡಿಸಿದ್ದಾರೆ. ಈ ಬಗ್ಗೆ ಎಲ್ಲ ಜಿಲ್ಲೆಗಳ ಮೂಲ ಶಿಕ್ಷಣಾಧಿಕಾರಿ ಹಾಗೂ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲರಿಗೆ ಸೂಚನೆ ನೀಡಲಾಗಿದೆ.
ಚಂದ್ರನ ಮೇಲೆ ವಿಕ್ರಂ ಲ್ಯಾಂಡರ್ ಲ್ಯಾಂಡ್ ಆಗುವುದನ್ನು ನೋಡಲು ದೇಶ ಹಾಗೂ ವಿಶ್ವದ ಬಾಹ್ಯಾಕಾಶ ಅಭಿಮಾನಿಗಳು ಕಾತರರಾಗಿದ್ದಾರೆ. ಚಂದ್ರಯಾನ 2 ಕೊನೆ ಕ್ಷಣದಲ್ಲಿ ವಿಫಲವಾಗಿತ್ತು. ಈ ಬಾರಿ ಅದರಿಂದ ಕಲಿತ ಪಾಠದಿಂದ ಎಚ್ಚೆತ್ತುಕೊಂಡಿರುವ ಭಾರತೀಯ ವಿಜ್ಞಾನ ಸಂಶೋಧನಾ ಸಂಸ್ಥೆ ಇಸ್ರೋ ಚಂದ್ರಯಾನ -3 ಯಶಸ್ಸಿಗೆ ಕಂಕಣತೊಟ್ಟು ನಿಂತಿದೆ. ವಿಕ್ರಂ ಲ್ಯಾಂಡರ್, ಲ್ಯಾಂಡಿಂಗ್ ಆಗುತ್ತಿದ್ದಂತೆ ಭಾರತದ ವಿಜ್ಞಾನ ಸಂಸ್ಥೆ ಗಮನಾರ್ಹ ಮೈಲಿಗಲ್ಲಿಗೆ ಸಾಕ್ಷಿ ಆಗಲಿದೆ.
ಇದನ್ನು ಓದಿ: 'ಸ್ವಾಗತ ಗೆಳೆಯ': ಚಂದ್ರಯಾನ-3 ವಿಕ್ರಮ್ ಲ್ಯಾಂಡರ್ ಜೊತೆ ಚಂದ್ರಯಾನ-2 ಆರ್ಬಿಟರ್ ಸಂವಹನ
ಭಾರತೀಯ ವಿಜ್ಞಾನ, ಎಂಜಿನಿಯರಿಂಗ್, ತಂತ್ರಜ್ಞಾನ ಮತ್ತು ಉದ್ಯಮಕ್ಕೆ ಈ ಚಂದ್ರಯಾನ-3 ಪ್ರಮುಖ ಹೆಜ್ಜೆಯಾಗಿದೆ. ಇಂತಹ ಸಂದರ್ಭದಲ್ಲಿ ಶಾಲಾ ಮಕ್ಕಳು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಬೇಕು. ಹಾಗಾಗಿ ಚಂದ್ರಯಾನ-3 ಲ್ಯಾಂಡಿಂಗ್‌ಗೆ ಸಂಬಂಧಿಸಿದ ಎಲ್ಲಾ ನೇರ ಪ್ರಸಾರವನ್ನು ಮಕ್ಕಳಿಗೆ ತೋರಿಸಲು ಶಿಕ್ಷಣ ಇಲಾಖೆಯಿಂದ ಸೂಚನೆ ನೀಡಲಾಗಿದೆ.
ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಮಿಷನ್‌ನ ಹೆಚ್ಚುವರಿ ಕಾರ್ಯದರ್ಶಿ ಅವರು ಚಂದ್ರಯಾನದ ನೇರ ಪ್ರಸಾರವನ್ನು ಮಕ್ಕಳಿಗೆ ತೋರಿಸುವಂತೆ ಆದೇಶ ಹೊರಡಿಸಿದ್ದಾರೆ ಎಂದು ಮಹಾನಿರ್ದೇಶಕ ವಿಜಯ್ ಕಿರಣ್ ಆನಂದ್ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ. ಆಗಸ್ಟ್ 23 ರಂದು ಸಂಜೆ 5:27 ಕ್ಕೆ ಚಂದ್ರಯಾನ -3 ರ ಚಂದ್ರನ ಲ್ಯಾಂಡಿಂಗ್ ಪ್ರಕ್ರಿಯೆ ಆರಂಭವಾಗಲಿದೆ. ಈ ಸಂಬಂಧ ಇಸ್ರೋ ವೆಬ್‌ಸೈಟ್ ಮತ್ತು ಇಸ್ರೋದ ಅಧಿಕೃತ ಯೂಟ್ಯೂಬ್ ಚಾನೆಲ್ ಮತ್ತು ಡಿಡಿ ನ್ಯಾಷನಲ್‌ನಲ್ಲಿ ಚಂದ್ರಯಾನ- 3 ರ ನೇರ ಪ್ರಸಾರ ಆಗಲಿದೆ ಎಂದು ಸರ್ಕಾರದ ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಭಾರತೀಯ ವಿಜ್ಞಾನ ಮತ್ತು ತಂತ್ರಜ್ಞಾನದ ಶಕ್ತಿಯ ಅನಾವರಣ ಆಗುತ್ತಿದ್ದು, ಇಂತಹ ಮಹತ್ವದ ವಿದ್ಯಮಾನಕ್ಕೆ ಎಲ್ಲರೂ ಸಾಕ್ಷಿಯಾಗಬೇಕು. ಈ ಸಂದರ್ಭದಲ್ಲಿ ಪ್ರಧಾನಿಯವರು ದೇಶವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಆಗಸ್ಟ್ 23 ರಂದು ಸಂಜೆ 5:15 ರಿಂದ 6:15 ರವರೆಗೆ ಎಲ್ಲ ಶಾಲೆಗಳು ಮತ್ತು ಕ್ಷೇತ್ರ ಸಂಸ್ಥೆಗಳ ವಿದ್ಯಾರ್ಥಿನಿಯರು ಮತ್ತು ಶಿಕ್ಷಕರೊಂದಿಗೆ ವಿಶೇಷ ಸಭೆ ಆಯೋಜಿಸಬೇಕು ಮತ್ತು ಚಂದ್ರಯಾನ -3 ಚಂದ್ರನ ಮೇಲೆ ಇಳಿಯುವ ನೇರ ಪ್ರಸಾರವನ್ನು ಮಕ್ಕಳಿಗೆ ತೋರಿಸಬೇಕು ಎಂದು ಮಹಾನಿರ್ದೇಶಕರು ತಮ್ಮ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.
ಇದನ್ನು ಓದಿ: ಚಂದ್ರನ ದಕ್ಷಿಣ ಧ್ರುವದ ಅಧ್ಯಯನದ ಮಹತ್ವವೇನು? ಇಲ್ಲಿದೆ ಉಪಯುಕ್ತ ಮಾಹಿತಿ