ಕೋವಿಡ್ ಪ್ರಕರಣಗಳ ಉಲ್ಭಣದಿಂದಾಗಿ ಭಾರತ ಪ್ರಸ್ತುತ ಭೀಕರ ಸಾರ್ವಜನಿಕ ಆರೋಗ್ಯ ಬಿಕ್ಕಟ್ಟನ್ನು ಎದುರಿಸುವಂತಾಗಿದೆ. ಈ ವರ್ಷದ ಮಾರ್ಚ್‌ನಿಂದ ದೈನಂದಿನ ಸೋಂಕಿನ ಪ್ರಕರಣಗಳ ಸಂಖ್ಯೆಯಲ್ಲಿನ ಹೆಚ್ಚಳದಿಂದಾಗಿ ರಾಷ್ಟ್ರದಲ್ಲಿ 2021ರ ಮೇ 1 ರಂದು ನಿತ್ಯ 4,00,000 ಕ್ಕೂ ಹೆಚ್ಚು ಹೊಸ ಕೋವಿಡ್ ಪ್ರಕರಣಗಳು ವರದಿ ಆಗಿದೆ. ಆಗಸ್ಟ್ 1 ರ ವೇಳೆಗೆ ಭಾರತವು ದಿನಕ್ಕೆ 1 ಮಿಲಿಯನ್‌ಗಿಂತಲೂ ಹೆಚ್ಚು ಕೊರೊನಾ ವೈರಸ್ ಪ್ರಕರಣಗಳನ್ನು ದಾಖಲಿಸಬಹುದು ಎಂದು ಅಂದಾಜಿಸಲಾಗಿದೆ. ಕೋವಿಡ್ ಸೋಂಕಿನ ಎರಡನೇ ಅಲೆಯನ್ನು ನಿಭಾಯಿಸಲು ವೇಗವಾಗಿ ಕಾರ್ಯನಿರ್ವಹಿಸುವಂತೆ ಭಾರತ ಸರ್ಕಾರಕ್ಕೆ ಸೂಚಿಸಿ, ಲ್ಯಾನ್ಸೆಟ್ ಕೋವಿಡ್ -19 ಕಮಿಷನ್ ಇಂಡಿಯಾ ಟಾಸ್ಕ್ ಫೋರ್ಸ್ ರಾಷ್ಟ್ರೀಯ ಕ್ರಿಯಾ ಯೋಜನೆಯನ್ನು ರೂಪಿಸಿದೆ.
ಆಯೋಗವು ತನ್ನ ಕೆಲವು ಶಿಫಾರಸುಗಳನ್ನು ಈ ಕೆಳಗಿನಂತೆ ಸಂಕ್ಷೇಪಿಸಿದೆ:
ವೈದ್ಯಕೀಯ ಸನ್ನದ್ಧತೆ ಹೆಚ್ಚಿಸಿ :
- ವೈದ್ಯಕೀಯ ಸೇವೆಗಳ ಬೇಡಿಕೆ ಅಂದಾಜುಗಳನ್ನು ತಯಾರಿಸಿ
- ಮನೆಯಲ್ಲಿ ರೋಗಿಗಳ ಆರೈಕೆ ಮತ್ತು ಚಿಕಿತ್ಸೆಯ ನಿರ್ಧಾರವನ್ನು ಮೇಲ್ವಿಚಾರಣೆ ಮಾಡಲು ಪ್ರಾಥಮಿಕ ಆರೈಕೆಯನ್ನು ಬಳಸಿ
- ಕೋವಿಡ್ ಪ್ರಕರಣದ ಭವಿಷ್ಯದ ಹೆಚ್ಚಳಕ್ಕೆ ತಯಾರಾಗಲು ವೈದ್ಯಕೀಯ ಸರಬರಾಜುಗಳನ್ನು ಹೆಚ್ಚಿಸಿ
- ವೈದ್ಯಕೀಯ ತರಬೇತುದಾರರಿಗೆ ಬ್ಯಾಕಪ್ ಸಿಬ್ಬಂದಿಯಾಗಿ ತರಬೇತಿ ನೀಡಿ
- ಆಮ್ಲಜನಕ ಉತ್ಪಾದಿಸುವ ಪ್ಲಾಂಟ್ಗಳನ್ನು ಸ್ಥಾಪಿಸಿ
- ಹೊರರೋಗಿಗಳನ್ನು ಸದ್ಯಕ್ಕೆ ನಿರ್ಬಂಧಿಸಿ
- ಆಸ್ಪತ್ರೆಗಳು, ಪರೀಕ್ಷಾ ಕೇಂದ್ರಗಳು ಮತ್ತು ವ್ಯಾಕ್ಸಿನೇಷನ್ ಕೇಂದ್ರಗಳು ಕೊರೊನಾ ಹರಡುವ ಸೂಪರ್ - ಸ್ಪ್ರೆಡರ್ ತಾಣಗಳಾಗದಂತೆ ತಡೆಯಿರಿ
- ಉತ್ತಮ ಗುಣಮಟ್ಟದ ವೈಯಕ್ತಿಕ ರಕ್ಷಣಾ ಸಾಧನಗಳೊಂದಿಗೆ(ಪಿಪಿಇ ಕಿಟ್) ಸಿಬ್ಬಂದಿಯನ್ನು ಸಜ್ಜುಗೊಳಿಸಿ
- ಖಾಸಗಿ ವಲಯದ ಸಹಭಾಗಿತ್ವದಲ್ಲಿ ತಾತ್ಕಾಲಿಕ, ಮೀಸಲಾದ ಕೋವಿಡ್ ಸೌಲಭ್ಯಗಳನ್ನು ಸ್ಥಾಪಿಸಿ
ಸಾಮೂಹಿಕ ವ್ಯಾಕ್ಸಿನೇಷನ್ ಅಭಿಯಾನಗಳನ್ನು ಸಂಘಟಿಸಿ:
- ಲಸಿಕೆ ಪೂರೈಕೆ ಕಡಿಮೆ ಇದ್ದಾಗ ಅತೀ ಅವಶ್ಯಕತೆ ಇರುವ ಜನರಿಗೆ ಆದ್ಯತೆ ನೀಡಿ
- ಬೇಡಿಕೆಯ ರಾಜ್ಯ ಮಟ್ಟದ ಅಂದಾಜುಗಳನ್ನು ಬೆಂಬಲಿಸಿ
- ಲಸಿಕೆ ಸಂಗ್ರಹ ಕುರಿತು ರಾಜ್ಯಗಳೊಂದಿಗೆ ಸಮಾಲೋಚಿಸಿ ಮತ್ತು ಸಂಯೋಜಿಸಿ
- ಲಸಿಕೆಗಳ ಪೇಟೆಂಟ್ ಮನ್ನಾ ಮತ್ತು ಉತ್ಪಾದನಾ ಅನುಮತಿಗಳ ಬಗ್ಗೆ ಮಾತುಕತೆ ನಡೆಸಿ
- ಸ್ಥಳೀಯ ಉತ್ಪಾದನಾ ಸಾಮರ್ಥ್ಯವನ್ನು ಪ್ರೋತ್ಸಾಹಿಸಿ ಮತ್ತು ಬೆಂಬಲಿಸಿ
- ಸುಗಮ ಪೂರೈಕೆ ಮಾರ್ಗ ಕಂಡುಕೊಳ್ಳಿ
- ರಾಜ್ಯಗಳ ನಡುವೆ ಸಂಘಟಿತ ಕಾರ್ಯತಂತ್ರ ಜಾರಿಗೊಳಿಸಿ
- ಹತ್ತಕ್ಕೂ ಹೆಚ್ಚು ಜನ ಸೇರುವುದನ್ನು ತಾತ್ಕಾಲಿಕವಾಗಿ ನಿಷೇಧಿಸಿ ಮತ್ತು ಹೆಚ್ಚು ಜನ ಸೇರುವ ಎಲ್ಲ ಸ್ಥಳಗಳನ್ನು ಬಂದ್ ಮಾಡಿ
- ಅಗತ್ಯ ಸೇವೆಗಳನ್ನು ಒದಗಿಸುವ ಸಂಸ್ಥೆಗಳನ್ನು ಹೊರತುಪಡಿಸಿ,ಉಳಿದ ಸಾರ್ವಜನಿಕ ಸ್ಥಳಗಳನ್ನು ಬಂದ್ ಮಾಡಿ
- ಸೀಮಿತ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದರೊಂದಿಗೆ ದೈಹಿಕ ದೂರ ಮತ್ತು ನೈರ್ಮಲ್ಯ ಕಾಪಾಡಿ
ಅಂತಾರಾಷ್ಟ್ರೀಯ ಮತ್ತು ದೇಶೀಯ ಚಲನಶೀಲತೆ:
- ಹೊರ ದೇಶಗಳಿಂದ ಬರುವವರಿಗೆ 7 ದಿನಗಳ ಸಾಂಸ್ಥಿಕ ಕ್ವಾರಂಟೈನ್ ಮತ್ತು ಅದಾದ ಬಳಿಕ ಹೋಮ್ ಕ್ವಾರಂಟೈನ್ನಲ್ಲಿರುವುದು ಸೂಕ್ತ( ಜೊತೆಗೆ ನಿತ್ಯ ಅವರ ಆರೋಗ್ಯ ತಪಾಸಣೆ ಹಾಗೂ 8ನೇ ದಿನ ಅವರಿಗೆ ಆರ್ಟಿಪಿಸಿಆರ್ ಟೆಸ್ಟ್ ಮಾಡಿ)
- ಆದಷ್ಟು ಪ್ರಯಾಣಿಕರ ಎಲ್ಲಾ ಪ್ರಯಾಣಗಳ ಹಂತಗಳಲ್ಲಿ ಕಡಿಮೆ ಅಪಾಯದ ಪ್ರದೇಶಗಳಲ್ಲಿ ರ್ಯಾಪಿಡ್ ಆ್ಯಂಟಿಜನ್ ಪರೀಕ್ಷೆಯನ್ನು ಮಾಡುವ ವ್ಯವಸ್ಥೆ ಮಾಡಿ.( ಉದಾಹರಣೆಗೆ ಬಸ್)
SARS-CoV-2 ಪರೀಕ್ಷೆ ಪರಿಶೀಲಿಸಿ:
- ಆರ್ಟಿಪಿಸಿಆರ್ ಟೆಸ್ಟ್ ಸೌಲಭ್ಯ ಹೆಚ್ಚಿಸಿ
- ರೋಗಲಕ್ಷಣಗಳು ಅಥವಾ ಆರ್‌ಡಿಟಿಯನ್ನು ಆಧರಿಸಿ ಕೋವಿಡ್ ರೋಗಿಗಳನ್ನು ಆಸ್ಪತ್ರೆಗಳಿಗೆ ದಾಖಲಿಸಲು ಅನುಮತಿಸಿ
- ಫಲಿತಾಂಶಗಳ ವಿಸ್ತೃತ ಪರೀಕ್ಷೆ ಮತ್ತು ತ್ವರಿತ, ಪಾರದರ್ಶಕ ವರದಿ
ವಿಕೇಂದ್ರೀಕೃತ ಸಂಪರ್ಕ ಪತ್ತೆ ಮತ್ತು ಐಸೋಲೇಷನ್:
- ಸ್ಥಳೀಯ ಮಟ್ಟದಲ್ಲಿ 2 ವಾರಗಳ ಕಾಲ ಕ್ವಾರಂಟೈನ್ ಮತ್ತು ಐಸೋಲೇಷನ್ ಮಾಡಿ
- ತಕ್ಷಣ ಸೋಂಕಿತರ ಕುಟುಂಬಸ್ಥರು ಮತ್ತು ಅವರ ಸಂಪರ್ಕಕ್ಕೆ ಬಂದವರನ್ನು ಪ್ರತ್ಯೇಕಿಸಿ ಟೆಸ್ಟ್ ಮಾಡಿ
ಸಾಮೂಹಿಕ ಜವಾಬ್ದಾರಿ ಮತ್ತು ಕಾರ್ಯ ನಿರೂಪಣೆಗಾಗಿ ಡೇಟಾ ನೀಡುವಲ್ಲಿ ಪಾರದರ್ಶಕತೆ ಸಾರ್ವಜನಿಕ ಸಂವಹನ:
- ಕೋವಿಡ್ ಪ್ರಕರಣಗಳು, ಆಸ್ಪತ್ರೆಗೆ ದಾಖಲಾದವರ ಸಂಖ್ಯೆ ಮತ್ತು ಸಾವುಗಳ ಸಂಖ್ಯೆಯನ್ನು ವರದಿ ಮಾಡುವಲ್ಲಿ ಪಾರದರ್ಶಕತೆ
- ಬಡ ಮತ್ತು ಹೆಚ್ಚು ದುರ್ಬಲ ಜನರ ಮೇಲೆ ಕೋವಿಡ್ ಸಾಂಕ್ರಾಮಿಕ ಪ್ರಭಾವ ಹೆಚ್ಚಿರುವುದನ್ನು ಒಪ್ಪಿಕೊಳ್ಳಿ
- ಕೇಂದ್ರ ಮತ್ತು ರಾಜ್ಯಗಳ ನಡುವೆ ಸಂವಹನ ಮತ್ತು ನಾಗರಿಕ ಸಮಾಜ ಮತ್ತು ಸರ್ಕಾರೇತರ ಸಂಸ್ಥೆಗಳೊಂದಿಗೆ ತೊಡಗಿಸಿಕೊಳ್ಳುವುದು
ರಾಜಕೀಯ ನಾಯಕತ್ವ:
- ಕೋವಿಡ್ ಕೇಂದ್ರ ಮತ್ತು ರಾಜ್ಯ ಮಟ್ಟದ ವಾರ್ ರೂಮ್ ಕೊಠಡಿಯವರನ್ನು ಕ್ಯಾಬಿನೆಟ್ ನಾಯಕರು ಪ್ರತಿದಿನ ಭೇಟಿಯಾಗಬೇಕು
ನಿರ್ಧಾರ ತೆಗೆದುಕೊಳ್ಳುವ ಡೇಟಾ:
- ಸಾಂಕ್ರಾಮಿಕದ ಹಾದಿಯ ವಿಶ್ವಾಸಾರ್ಹ ಮತ್ತು ನಿಯಮಿತ ಪ್ರಕ್ಷೇಪಗಳು
- ಅನಾಮಧೇಯ ಮೈಕ್ರೊ ಡೇಟಾದ ಹಂಚಿಕೆ
- ಎಲ್ಲಾ ಪರೀಕ್ಷೆಗಳಲ್ಲಿ 5% ಜೀನೋಮ್ ಅನುಕ್ರಮ ಹೆಚ್ಚಿಸಿ
- ಸರಿಯಾದ ಸಮಯದ ಡೇಟಾ ಸಂಗ್ರಹಣೆಗಾಗಿ ಡೇಟಾಸೆಟ್ ತೆರೆಯಿರಿ
- ಡೇಟಾದ ಮೂಲಗಳಲ್ಲಿ ಪಾರದರ್ಶಕತೆ
- ಕೊರೊನಾ ಸಂಬಂಧಿತ ಮರಣ ಮತ್ತು ವಯಸ್ಸು ಮತ್ತು ಲಿಂಗ ವಿತರಣೆಯ ಡೇಟಾವನ್ನು ಬಿಡುಗಡೆ ಮಾಡಿ
ಏಪ್ರಿಲ್ 2021 ರಲ್ಲಿ ಭಾರತದಲ್ಲಿ ಕೋವಿಡ್ ಪ್ರಕರಣಗಳನ್ನು ಕಡಿಮೆ ಮಾಡಲು ದೇಶಾದ್ಯಂತದ ಕಂಟೇನ್‌ಮೆಂಟ್ ಸ್ಟ್ರಾಟಜೀಸ್‌ನ ಲ್ಯಾನ್ಸೆಟ್ ಕೋವಿಡ್-19 ಕಮಿಷನ್ ಆಫ್ ಇಂಡಿಯಾ ಟಾಸ್ಕ್ ಫೋರ್ಸ್‌ನ ವರದಿಯಿಂದ ಇವುಗಳನ್ನು ರೂಪಿಸಲಾಗಿದೆ.