ETV Bharat / bharat

ಲಾಲೂ ಪ್ರಸಾದ್​ ಯಾದವ್​ ಆರೋಗ್ಯ ಸ್ಥಿತಿ ಗಂಭೀರ.. ಪಾಟ್ನಾದಿಂದ ದೆಹಲಿ ಏಮ್ಸ್​​​ಗೆ ಏರ್​ಲಿಫ್ಟ್​

ಪಾಟ್ನಾದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಆರ್​ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್​ ಯಾದವ್​ ಆರೋಗ್ಯದಲ್ಲಿ ಮತ್ತಷ್ಟು ಏರುಪೇರು ಕಂಡು ಬಂದಿದೆ. ಇದರ ಬೆನ್ನಲ್ಲೇ ಅವರನ್ನ ದೆಹಲಿ ಏಮ್ಸ್​​ಗೆ ಏರ್​ಲಿಫ್ಟ್ ಮಾಡಲಾಗಿದೆ.

author img

By

Published : Jul 6, 2022, 8:28 PM IST

Lalu prasad yadav airlifted to dehli AIIMS

ಪಾಟ್ನಾ(ಬಿಹಾರ): ರಾಷ್ಟ್ರೀಯ ಜನತಾ ದಳ(ಆರ್​ಜೆಡಿ) ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್​ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗೋಸ್ಕರ ಪಾಟ್ನಾದಿಂದ ದೆಹಲಿಯ ಏಮ್ಸ್​​ಗೆ ಏರ್​ಲಿಫ್ಟ್ ಮಾಡಲಾಗಿದೆ.

ಕಳೆದ ಕೆಲ ದಿನಗಳ ಹಿಂದೆ ಮೆಟ್ಟಿಲಿನಿಂದ ಕೆಳಗೆ ಬಿದ್ದಿರುವ ಲಾಲೂ ಪ್ರಸಾದ್​ ಯಾದವ್​ ಸದ್ಯ ಪಾಟ್ನಾದ ಪಾರಸ್​ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಆದರೆ, ಇದೀಗ ಆರೋಗ್ಯದಲ್ಲಿ ಮತ್ತಷ್ಟು ಏರುಪೇರು ಕಂಡು ಬಂದಿರುವ ಕಾರಣ ಏಮ್ಸ್​​​ಗೆ ಸ್ಥಳಾಂತರ ಮಾಡಲಾಗಿದೆ.

ಇದನ್ನೂ ಓದಿರಿ: ಬೂಸ್ಟರ್ ಡೋಸ್ ಪಡೆದುಕೊಳ್ಳುವ ಅಂತರದಲ್ಲಿ 9 ರಿಂದ 6 ತಿಂಗಳಿಗೆ ಇಳಿಕೆ.. ಕೇಂದ್ರದ ನಿರ್ಧಾರ

ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದುಕೊಂಡು ಕಳೆದ ಭಾನುವಾರ ಲಾಲೂ ಪ್ರಸಾದ್ ಯಾದವ್ ಮನೆಗೆ ತೆರಳಿದ್ದರು. ಆದರೆ, ಆರೋಗ್ಯ ಸ್ಥಿತಿ ಹದಗೆಟ್ಟ ಕಾರಣ ಸೋಮವಾರ ಬೆಳಗ್ಗೆ ಪಾರಸ್​ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅವರ ಆರೋಗ್ಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ದೂರವಾಣಿ ಕರೆ ಮೂಲಕ ವಿಚಾರಿಸಿದ್ದಾರೆ. ಇನ್ನೂ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್​ ಆಸ್ಪತ್ರೆಗೆ ಭೇಟಿ ನೀಡಿ, ಆರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.