ETV Bharat / bharat

ಭಾರತದಲ್ಲಿ ವೈದ್ಯಕೀಯ ಮೂಲಸೌಕರ್ಯ ಕೊರತೆ; ಯಾವ ರಾಜ್ಯದ ಸ್ಥಿತಿ ಹೇಗಿದೆ? - ಕರ್ನಾಟಕ ವೈದ್ಯಕೀಯ ಮೂಲಸೌಕರ್ಯ

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಪ್ರತಿ 1000 ಜನಸಂಖ್ಯೆಗೆ ಒಬ್ಬ ವೈದ್ಯರು ಇರಬೇಕು. ಆದರೆ ದೇಶದ ಯಾವುದೇ ರಾಜ್ಯದಲ್ಲಿ ಈ ಮಾನದಂಡಗಳಿಗೆ ತಕ್ಕಂತೆ ವೈದ್ಯಕೀಯ ವ್ಯವಸ್ಥೆ ಇಲ್ಲ.

Lack of medical infrastructure in India; states condition
ಭಾರತದಲ್ಲಿ ವೈದ್ಯಕೀಯ ಮೂಲಸೌಕರ್ಯ ಕೊರತೆ; ಯಾವ ರಾಜ್ಯದ ಸ್ಥಿತಿ ಹೇಗಿದೆ?
author img

By

Published : May 10, 2021, 10:02 PM IST

ಹೈದರಾಬಾದ್: ಕೊರೊನಾ ಮಹಾಮಾರಿಯ ಬಿಕ್ಕಟ್ಟಿನ ಮಧ್ಯೆ ದೇಶದಲ್ಲಿ ಆರೋಗ್ಯ ಮೂಲಸೌಕರ್ಯಗಳ ಕೊರತೆ ಎಷ್ಟು ಭೀಕರವಾಗಿದೆ ಎಂಬುದು ಎಳೆಎಳೆಯಾಗಿ ಬಹಿರಂಗವಾಗುತ್ತಿದೆ. ಆಸ್ಪತ್ರೆಯಲ್ಲಿ ಹಾಸಿಗೆ, ಆಮ್ಲಜನಕದ ಕೊರತೆ ಮತ್ತು ಔಷಧಗಳ ಕೊರತೆ ಹೇಳತೀರದಂತಾಗಿದೆ. ವಿಶ್ವದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಆರೋಗ್ಯ ಸೌಲಭ್ಯಗಳ ಹೀನಾಯ ಸ್ಥಿತಿಗೆ ಇದು ಸಾಕ್ಷಿಯಾಗಿದೆ. ದೇಶದ ವಿವಿಧ ರಾಜ್ಯಗಳಲ್ಲಿ ವೈದ್ಯರ ಸಂಖ್ಯೆ ಎಷ್ಟಿದೆ, ಎಷ್ಟು ಜನಸಂಖ್ಯೆಗೆ ಎಷ್ಟು ವೈದ್ಯರಿದ್ದಾರೆ, ಹಾಸಿಗೆಗಳಿವೆ, ಎಷ್ಟು ಆರೋಗ್ಯ ಸಂಸ್ಥೆಗಳಿವೆ ಎಂಬುದರ ಮೇಲೆ ದೇಶವೊಂದರ ಆರೋಗ್ಯ ಮೂಲಸೌಕರ್ಯಗಳನ್ನು ಅಳೆಯಲಾಗುತ್ತದೆ.

Lack of medical infrastructure in India; states condition
ಭಾರತದಲ್ಲಿ ವೈದ್ಯಕೀಯ ಮೂಲಸೌಕರ್ಯ ಕೊರತೆ; ಯಾವ ರಾಜ್ಯದ ಸ್ಥಿತಿ ಹೇಗಿದೆ?

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಪ್ರತಿ 1000 ಜನಸಂಖ್ಯೆಗೆ ಒಬ್ಬ ವೈದ್ಯರು ಇರಬೇಕು. ಆದರೆ, ದೇಶದ ಯಾವುದೇ ರಾಜ್ಯದಲ್ಲಿ ಈ ಮಾನದಂಡಗಳಿಗೆ ತಕ್ಕಂತೆ ವೈದ್ಯಕೀಯ ವ್ಯವಸ್ಥೆ ಇಲ್ಲ. ದೇಶದ ವಿವಿಧ ರಾಜ್ಯಗಳಲ್ಲಿ ವೈದ್ಯರು, ಹಾಸಿಗೆ ಕೊರತೆ ಸೇರಿದಂತೆ ಇನ್ನಿತರ ವೈದ್ಯಕೀಯ ಸೌಲಭ್ಯಗಳ ಸ್ಥಿತಿಗತಿ ಹೇಗಿದೆ ಎಂಬುದನ್ನು ತಿಳಿಯೋಣ.

ರಾಜಸ್ಥಾನ

Rajasthan
ರಾಜಸ್ಥಾನ

ರಾಜಸ್ಥಾನದ ಜನಸಂಖ್ಯೆ ಸುಮಾರು 7 ಕೋಟಿ ಇದ್ದು ರಾಜ್ಯದಲ್ಲಿ ಸುಮಾರು 50 ಸಾವಿರ ವೈದ್ಯರಿದ್ದಾರೆ. ಇದರ ಪ್ರಕಾರ ರಾಜ್ಯದಲ್ಲಿ ಸುಮಾರು 1400 ಜನರಿಗೆ ಓರ್ವ ವೈದ್ಯರಿದ್ದಾರೆ. ರಾಜ್ಯದಲ್ಲಿ 16 ಸರ್ಕಾರಿ ಮತ್ತು 8 ಖಾಸಗಿ ವೈದ್ಯಕೀಯ ಕಾಲೇಜುಗಳಿವೆ. ರಾಜ್ಯಾದ್ಯಂತ ಆಸ್ಪತ್ರೆಗಳಲ್ಲಿ ಸುಮಾರು 1.5 ಲಕ್ಷ ಹಾಸಿಗೆಗಳಿವೆ. ಅಂದರೆ, 466 ಜನರಿಗೆ ಒಂದು ಹಾಸಿಗೆ ಲಭ್ಯವಿದೆ. ಏಮ್ಸ್ ಆಸ್ಪತ್ರೆ ರಾಜಸ್ಥಾನದ ಜೋಧಪುರ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದೆ.

ಬಿಹಾರ

Bihar
ಬಿಹಾರ

ಆರೋಗ್ಯ ಸೌಲಭ್ಯಗಳ ವಿಷಯದಲ್ಲಿ ಬಿಹಾರ ಅತ್ಯಂತ ಕೆಟ್ಟ ರಾಜ್ಯಗಳಲ್ಲಿ ಒಂದಾಗಿದೆ. ರಾಜ್ಯದಲ್ಲಿ 28 ಸಾವಿರಕ್ಕೂ ಹೆಚ್ಚು ಜನಸಂಖ್ಯೆಗೆ ಓರ್ವ ವೈದ್ಯರಿದ್ದಾರೆ ಎಂಬ ಅಂಶದಿಂದ ಇದನ್ನು ಅರಿಯಬಹುದು. ಬಿಹಾರದ ಜನಸಂಖ್ಯೆ 13 ಕೋಟಿಗಿಂತ ಹೆಚ್ಚಾಗಿದ್ದರೂ ರಾಜ್ಯದ ಆರೋಗ್ಯ ಬಜೆಟ್ 13,264 ಕೋಟಿ ಮಾತ್ರವಾಗಿದೆ. ಪಾಟ್ನಾದ ಏಮ್ಸ್ ಆಸ್ಪತ್ರೆ ರಾಜ್ಯದ ಅತ್ಯುತ್ತಮ ಆಸ್ಪತ್ರೆ ಎಂದು ಪರಿಗಣಿಸಲಾಗಿದೆ.

ಮಧ್ಯಪ್ರದೇಶ

Madhya Pradesh
ಮಧ್ಯ ಪ್ರದೇಶ

ಮಧ್ಯಪ್ರದೇಶದ ಆರೋಗ್ಯ ಬಜೆಟ್ 15 ಸಾವಿರ ಕೋಟಿಗಿಂತ ಹೆಚ್ಚು. ಸುಮಾರು 7.5 ಕೋಟಿ ಜನಸಂಖ್ಯೆ ಹೊಂದಿರುವ ರಾಜ್ಯದಲ್ಲಿ ಪ್ರತಿ 2000 ಜನರಿಗೆ ಒಬ್ಬ ವೈದ್ಯರಿದ್ದಾರೆ. ಏಮ್ಸ್ ಹೊರತುಪಡಿಸಿ, ಭೋಪಾಲ್‌ನಲ್ಲಿ 20 ವೈದ್ಯಕೀಯ ಕಾಲೇಜುಗಳು, 1199 ಪಿಎಚ್‌ಸಿ ಮತ್ತು 334 ಸಿಎಚ್‌ಸಿಗಳಿವೆ.

ಜಾರ್ಖಂಡ್

Jarkhand
ಜಾರ್ಖಂಡ್

ಜಾರ್ಖಂಡ್ ಸುಮಾರು 4 ಕೋಟಿ ಜನಸಂಖ್ಯೆಯನ್ನು ಹೊಂದಿದೆ. ಸುಮಾರು 18,518 ಜನರಿಗೆ ಓರ್ವ ವೈದ್ಯರನ್ನು ಮತ್ತು ಸುಮಾರು 2500 ಜನರಿಗೆ ಒಂದು ಹಾಸಿಗೆಯನ್ನು ಹೊಂದಿದೆ. ಈ ಮಾಹಿತಿಯು ರಾಜ್ಯದ ಆರೋಗ್ಯ ಸೌಲಭ್ಯಗಳ ಕೊರತೆಯನ್ನು ಬಿಚ್ಚಿಡುತ್ತದೆ. ಜಾರ್ಖಂಡ್‌ನಲ್ಲಿ 24 ಜಿಲ್ಲಾ ಆಸ್ಪತ್ರೆಗಳು, 3 ಸರ್ಕಾರಿ ಮತ್ತು ಖಾಸಗಿ ವೈದ್ಯಕೀಯ ಕಾಲೇಜು ಇವೆ. ದೇವಘರ್​ನಲ್ಲಿ ಏಮ್ಸ್ ನಿರ್ಮಾಣ ಕಾರ್ಯಗಳು ನಡೆಯುತ್ತಿದ್ದು, ಇಲ್ಲಿ ಈಗಾಗಲೇ ಓಪಿಡಿ ಸೇವೆಗಳನ್ನು ಆರಂಭಿಸಲಾಗಿದೆ.

ಛತ್ತೀಸಗಢ

Chhattisgadh
ಛತ್ತೀಸಗಢ

ಛತ್ತೀಸಗಢದಲ್ಲಿ ಸುಮಾರು 11 ಸಾವಿರ ವೈದ್ಯರಿದ್ದು, ಎರಡೂವರೆ ಕೋಟಿಗೂ ಹೆಚ್ಚು ಜನಸಂಖ್ಯೆ ಇದೆ. ಇದರ ಪ್ರಕಾರ ಇಲ್ಲಿ ಪ್ರತಿ 2500 ಜನರಿಗೆ ಒಬ್ಬ ವೈದ್ಯರಿದ್ದಾರೆ. ಇಲ್ಲಿ 369 ಸರ್ಕಾರಿ ಮತ್ತು 62 ಖಾಸಗಿ ಆಸ್ಪತ್ರೆಗಳಿವೆ. ರಾಜ್ಯದಲ್ಲಿ ಹಾಸಿಗೆಗಳ ಸಂಖ್ಯೆ 31,649 ಆಗಿದ್ದು, ಇದರ ಪ್ರಕಾರ ರಾಜ್ಯದಲ್ಲಿ ಸುಮಾರು 800 ಜನರಿಗೆ ಒಂದು ಹಾಸಿಗೆ ಲಭ್ಯವಿದೆ.

ಕರ್ನಾಟಕ

Karnataka
ಕರ್ನಾಟಕ

ಏಳು ಕೋಟಿಗಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ಕರ್ನಾಟಕ ರಾಜ್ಯದ ಆರೋಗ್ಯ ಬಜೆಟ್ ಸುಮಾರು 12 ಸಾವಿರ ಕೋಟಿಗಳು. ರಾಜ್ಯದಲ್ಲಿ ಒಟ್ಟು 57,844 ವೈದ್ಯರು ಮತ್ತು 70 ಸಾವಿರ ಹಾಸಿಗೆಗಳಿವೆ. ಅದರಂತೆ ಕರ್ನಾಟಕದಲ್ಲಿ ಪ್ರತಿ 1200 ಜನರಿಗೆ ಓರ್ವ ವೈದ್ಯ ಮತ್ತು ಪ್ರತಿ 1000 ಜನರಿಗೆ ಒಂದು ಹಾಸಿಗೆ ಇದೆ.

ತಮಿಳುನಾಡು

Tamil Nadu
ತಮಿಳು ನಾಡು

ತಮಿಳುನಾಡಿನಲ್ಲಿ ಸುಮಾರು 7 ಕೋಟಿ ಜನಸಂಖ್ಯೆ ಇದೆ ಮತ್ತು ಪ್ರತಿ ಸಾವಿರ ಜನರಿಗೆ ಸುಮಾರು ಇಬ್ಬರು ವೈದ್ಯರಿದ್ದಾರೆ. 15 ವೈದ್ಯಕೀಯ ಕಾಲೇಜುಗಳು ಸೇರಿದಂತೆ 44 ಆಸ್ಪತ್ರೆಗಳಿದ್ದು, 29 ಜಿಲ್ಲಾ ಆಸ್ಪತ್ರೆಗಳು, 235 ಎಸ್‌ಡಿಎಚ್‌ಎಸ್, 8706 ಸಿಎಚ್‌ಸಿ, 1421 ಪಿಎಚ್‌ಸಿ ಸಹ ಇವೆ. ರಾಜ್ಯದಲ್ಲಿ 61000 ಕ್ಕೂ ಹೆಚ್ಚು ಹಾಸಿಗೆಗಳಿವೆ. ರಾಜ್ಯದ ಆರೋಗ್ಯ ಬಜೆಟ್ 19420 ಕೋಟಿ. ತಮಿಳುನಾಡಿನಲ್ಲಿ ಏಮ್ಸ್ ನಿರ್ಮಾಣ ಇನ್ನೂ ಪ್ರಾರಂಭವಾಗಿಲ್ಲ.

ಕೇರಳ

Kerala
ಕೇರಳ

ಆರೋಗ್ಯ ಸೌಲಭ್ಯಗಳು ಮತ್ತು ಪ್ರತಿ ಸಾವಿರ ಜನರಿಗೆ ವೈದ್ಯರ ಸಂಖ್ಯೆಯ ವಿಷಯದಲ್ಲಿ ದಕ್ಷಿಣ ಭಾರತದ ರಾಜ್ಯ ಕೇರಳ ಪ್ರಥಮ ಸ್ಥಾನದಲ್ಲಿದೆ. ಕೇರಳದ ಜನಸಂಖ್ಯೆಯು ಸುಮಾರು ಮೂರೂವರೆ ಕೋಟಿ ಇದ್ದು, ಪ್ರತಿ 400 ಜನರಿಗೆ ಓರ್ವ ವೈದ್ಯರಿದ್ದಾರೆ. ಕೇರಳದಲ್ಲಿ 7 ಸರ್ಕಾರಿ ವೈದ್ಯಕೀಯ ಕಾಲೇಜು, 58 ಸರ್ಕಾರಿ ಆಸ್ಪತ್ರೆ, 225 ಕ್ಕೂ ಹೆಚ್ಚು ಖಾಸಗಿ ಆಸ್ಪತ್ರೆಗಳಿವೆ.

ಹಿಮಾಚಲ ಪ್ರದೇಶ

Himachal
ಹಿಮಾಚಲ ಪ್ರದೇಶ

ಬೆಟ್ಟ ರಾಜ್ಯ ಹಿಮಾಚಲ ಪ್ರದೇಶದ ಜನಸಂಖ್ಯೆ ಸುಮಾರು 70 ಲಕ್ಷ ಮತ್ತು ಅದರ ಆರೋಗ್ಯ ಬಜೆಟ್ 3 ಸಾವಿರ ಕೋಟಿಗಳಿಗಿಂತ ಹೆಚ್ಚು. ರಾಜ್ಯದಲ್ಲಿ ಸುಮಾರು 3470 ಜನಸಂಖ್ಯೆಗೆ ಓರ್ವ ವೈದ್ಯರಿದ್ದಾರೆ. ಹಿಮಾಚಲ ಪ್ರದೇಶದ ಬಿಲಾಸ್ಪುರದಲ್ಲಿ ಏಮ್ಸ್ ನಿರ್ಮಾಣ ಕಾರ್ಯ ನಡೆಯುತ್ತಿದೆ.

ಮಹಾರಾಷ್ಟ್ರ

Maharashtra
ಮಹಾರಾಷ್ಟ್ರ

12 ಕೋಟಿಗಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ಮಹಾರಾಷ್ಟ್ರದಲ್ಲಿ 1,10,000 ವೈದ್ಯರಿದ್ದಾರೆ. ಇದರ ಪ್ರಕಾರ ಮಹಾರಾಷ್ಟ್ರದಲ್ಲಿ ಪ್ರತಿ 1100 ಜನರಿಗೆ ಒಬ್ಬ ವೈದ್ಯರಿದ್ದಾರೆ. ಮಹಾರಾಷ್ಟ್ರದಲ್ಲಿ, ಒಂದೂವರೆ ಕೋಟಿ ಜನಸಂಖ್ಯೆಗೆ 30 ಸಾವಿರ ಹಾಸಿಗೆಗಳಿವೆ. ರಾಜ್ಯದಲ್ಲಿ 72 ಸರ್ಕಾರಿ ಮತ್ತು 142 ಖಾಸಗಿ ಆಸ್ಪತ್ರೆಗಳಿವೆ. ಮಹಾರಾಷ್ಟ್ರದ ಆರೋಗ್ಯ ಬಜೆಟ್ 7500 ಕೋಟಿ. ಏಮ್ಸ್ ಆಸ್ಪತ್ರೆ ಮಹಾರಾಷ್ಟ್ರದ ನಾಗ್ಪುರದಲ್ಲಿದೆ.

ಉತ್ತರಾಖಂಡ

Uttarakhand
ಉತ್ತರಾಖಂಡ್

ಬೆಟ್ಟ ರಾಜ್ಯ ಉತ್ತರಾಖಂಡದ ಆರೋಗ್ಯ ಬಜೆಟ್ 3320 ಕೋಟಿ ರೂ. ರಾಜ್ಯದಲ್ಲಿ ಸುಮಾರು 2500 ರಿಂದ 3000 ವೈದ್ಯರಿದ್ದಾರೆ. ಇದರ ಪ್ರಕಾರ, ಸುಮಾರು 5000 ಜನಸಂಖ್ಯೆಗೆ ಓರ್ವ ವೈದ್ಯರಿದ್ದಾರೆ. ರಾಜ್ಯದ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳ ಸಂಖ್ಯೆ 135 ಆಗಿದ್ದು, 11,600 ಹಾಸಿಗೆಗಳಿವೆ. ಏಮ್ಸ್ ಉತ್ತರಾಖಂಡದ ರಿಷಿಕೇಶದಲ್ಲಿದೆ.

ಜಮ್ಮು ಕಾಶ್ಮೀರ

ಜಮ್ಮು ಮತ್ತು ಕಾಶ್ಮೀರದಲ್ಲಿ ಒಟ್ಟು 3,289 ಆರೋಗ್ಯ ಕೇಂದ್ರಗಳಿವೆ. 20 ಜಿಲ್ಲಾ ಆಸ್ಪತ್ರೆಗಳು, 77 ಸಮುದಾಯ ಕೇಂದ್ರಗಳು, 6 ತುರ್ತು ಆಸ್ಪತ್ರೆಗಳು, 427 ಪ್ರಾಥಮಿಕ, 2013 ಉಪ ಕೇಂದ್ರಗಳು ಮತ್ತು 9 ಹೆರಿಗೆ ಮತ್ತು ಮಕ್ಕಳ ಕೇಂದ್ರಗಳಿವೆ. ಇದಲ್ಲದೇ ಸುಮಾರು 50 ಖಾಸಗಿ ಆರೋಗ್ಯ ಕೇಂದ್ರಗಳಿವೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಒಟ್ಟು 3225 ವೈದ್ಯರು ಮತ್ತು ಸುಮಾರು 1,300 ಹಾಸಿಗೆಗಳಿವೆ. ಜಮ್ಮು ಮತ್ತು ಕಾಶ್ಮೀರದ ಜನಸಂಖ್ಯೆಯ ಪ್ರಕಾರ, ಇಲ್ಲಿ 1880 ಜನರಿಗೆ ಓರ್ವ ವೈದ್ಯರಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.