ಬೆತುಲ್(ಮಧ್ಯಪ್ರದೇಶ): ರಾಜ್ಯದ ಬೇತುಲ್ ಜಿಲ್ಲೆಯ ಶಹಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪವರ್‌ಜಾಂಡದಡಿ ಜಮುಂಧಾನ ನದಿಗೆ ಸೇತುವೆ ಇಲ್ಲದೆ ಜನ ಸಂಚಾರಕ್ಕೆ ಭಾರಿ ಅಡ್ಡಿಯಾಗುತ್ತಿದೆ. ಬುಧವಾರ ಗ್ರಾಮಸ್ಥರು ಗರ್ಭಿಣಿಯನ್ನು ಮಂಚದ ಮೇಲೆ ಹೊತ್ತು ಪ್ರಾಣ ಪಣಕ್ಕಿಟ್ಟು ನದಿ ದಾಟಿ ಆಸ್ಪತ್ರೆಗೆ ಕರೆದೊಯ್ದರು. ಹಲವು ವರ್ಷಗಳಿಂದ ಈ ಸಮಸ್ಯೆ ಎದುರಿಸುತ್ತಿದ್ದರೂ ಇದುವರೆಗೂ ಸ್ಥಳೀಯಾಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುತ್ತಾರೆ ಇಲ್ಲಿನ ಜನರು.
ಇದನ್ನೂ ಓದಿ: ಸೂರತ್‌ನ ತಾಪಿ ನದಿಯಲ್ಲಿ 75 ದೋಣಿಗಳಲ್ಲಿ ತಿರಂಗಾ ಮೆರವಣಿಗೆ: ವಿಡಿಯೋ