ETV Bharat / bharat

LACಯಲ್ಲಿ ಚೀನಾ ಸೈನಿಕರ ಚಟುವಟಿಕೆ ಹೆಚ್ಚಾಗಿದೆ.. ನಮ್ಮ ಸೇನೆ ಹದ್ದಿನ ಕಣ್ಣಿಟ್ಟಿದೆ: ಮನೋಜ್ ಪಾಂಡೆ - Eastern Army Commander Lieutenant General Manoj Pande

ಎಲ್​​ಎಸಿ ಬಳಿ ಆಳವಾದ ಪ್ರದೇಶಗಳಲ್ಲಿ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ನಡೆಸುವ ವಾರ್ಷಿಕ ಸಮರಾಭ್ಯಾಸ ಚಟುವಟಿಕೆಗಳಲ್ಲಿ, ಗಸ್ತು ತಿರುಗುವ ಪ್ರಮಾಣದಲ್ಲಿ, ಸೈನಿಕರ ನಿಯೋಜನೆಯಲ್ಲಿ ಹೆಚ್ಚಳ ಕಂಡು ಬಂದಿದೆ ಎಂದು ಕಮಾಂಡರ್ ಲೆಫ್ಟಿನೆಂಟ್ ಜನರಲ್ ತಿಳಿಸಿದ್ದಾರೆ.

ಮನೋಜ್ ಪಾಂಡೆ
ಮನೋಜ್ ಪಾಂಡೆ
author img

By

Published : Oct 19, 2021, 1:17 PM IST

ರುಪಾ (ಅರುಣಾಚಲ ಪ್ರದೇಶ): ವಾಸ್ತವ ನಿಯಂತ್ರಣ ರೇಖೆ (LAC) ಉದ್ದಕ್ಕೂ ಚೀನಾ ಸೈನಿಕರ ಚಟುವಟಿಕೆಗಳು ಹೆಚ್ಚಾಗಿದ್ದು, ಭಾರತೀಯ ಸೇನೆ ಹದ್ದಿನ ಕಣ್ಣಿಟ್ಟಿದೆ ಎಂದು ಕಮಾಂಡರ್ ಲೆಫ್ಟಿನೆಂಟ್ ಜನರಲ್ (ಪೂರ್ವ ಸೇನೆ) ಮನೋಜ್ ಪಾಂಡೆ ಹೇಳಿದ್ದಾರೆ.

ಆಳವಾದ ಪ್ರದೇಶಗಳಲ್ಲಿ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (PLA) ನಡೆಸುವ ವಾರ್ಷಿಕ ಸಮರಾಭ್ಯಾಸ ಚಟುವಟಿಕೆಗಳಲ್ಲಿ, ಗಸ್ತು ತಿರುಗುವ ಪ್ರಮಾಣದಲ್ಲಿ, ಸೈನಿಕರ ನಿಯೋಜನೆಯಲ್ಲಿ ಹೆಚ್ಚಳ ಕಂಡು ಬಂದಿದೆ. ಹೀಗಾಗಿ ನಾವು ಎಲ್​​ಎಸಿ ಮತ್ತು ಆಳದ ಪ್ರದೇಶಗಳಲ್ಲಿ ನಮ್ಮ ಕಣ್ಗಾವಲನ್ನು ಹೆಚ್ಚಿಸಿದ್ದೇವೆ ಎಂದು ಮನೋಜ್ ಪಾಂಡೆ ಮಾಹಿತಿ ನೀಡಿದರು.

ಭಾರತ ಮತ್ತು ಚೀನಾ, ಎರಡೂ ಕಡೆಯವರು ವಾಸ್ತವ ನಿಯಂತ್ರಣ ರೇಖೆ ಬಳಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಪ್ರಯತ್ನಿಸುತ್ತಿದ್ದಾರೆ. ಇದು ಕೆಲವೊಮ್ಮೆ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಗ್ರಾಮಗಳು ಗಡಿ ರೇಖೆಗೆ ಸಮೀಪವಾಗುತ್ತಿರುವುದು ಕಳವಳಕಾರಿ ವಿಷಯವಾಗಿದೆ ಎಂದು ಅವರು ತಿಳಿಸಿದರು.

ಯಾವುದೇ ವಲಯದಲ್ಲಿ ಉದ್ಭವಿಸಬಹುದಾದ ಅನಿಶ್ಚಿತತೆಗಳನ್ನು ನಿಭಾಯಿಸಲು ಪ್ರತಿಯೊಂದು ವಲಯದಲ್ಲೂ ನಮ್ಮ ಸಾಕಷ್ಟು ಸೈನಿಕರು ಇದ್ದಾರೆ. ಕೆಲವು ಪ್ರದೇಶಗಳಲ್ಲಿ ಮಾತ್ರ ಹೆಚ್ಚುವರಿ ಸೈನಿಕರನ್ನು ನಾವು ನಿಯೋಜಿಸಿದ್ದೇವೆ. ಅಷ್ಟೇ ಅಲ್ಲ, ಡ್ರೋನ್‌ ಹಾಗೂ ರಾಡಾರ್‌ ಕಣ್ಗಾವಲನ್ನೂ ಹೆಚ್ಚಿಸಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ: ಬಂಗಾಳ ಕೊಲ್ಲಿಯಲ್ಲಿ ನೌಕಾಪಡೆ ಆಪರೇಷನ್ ಮಲಬಾರ್ ಸಮರಾಭ್ಯಾಸ; ಚೀನಾಗೆ ಕಠಿಣ ಸಂದೇಶ

ಈ ಹಿಂದೆ ಭಾರತದ ಪೂರ್ವ ಲಡಾಖ್ ಸಮೀಪವಿರುವ ಚೀನಾದ ಕ್ಸಿನ್‌ಜಿಯಾಂಗ್ ಮಿಲಿಟರಿ ಜಿಲ್ಲೆಯ ಎತ್ತರದ ಪ್ರದೇಶದಲ್ಲಿ ಚೀನಾ ಸೇನೆಯು ನೈಟ್ ಡ್ರಿಲ್‌ ಸೇರಿದಂತೆ ಸೇನಾ ಸಮರಾಭ್ಯಾಸವನ್ನು ಹೆಚ್ಚಿಸಿದೆ. ರಾತ್ರಿ ವೇಳೆ ಸುಮಾರು 5,000 ಮೀಟರ್ (16,400 ಅಡಿ) ಎತ್ತರದ ಪ್ರದೇಶದಲ್ಲಿ ಲೈವ್-ಫೈರ್ ಮಷಿನ್ ಗನ್ ಡ್ರಿಲ್‌ಗಳನ್ನು ಪಿಎಲ್‌ಎ ಅಭ್ಯಾಸ ಮಾಡುತ್ತಿದೆ ಎಂದು ವರದಿಯಾಗಿತ್ತು.

ಪೂರ್ವ ಲಡಾಖ್‌ನಲ್ಲಿ ಭಾರತ-ಚೀನಾ ನಡುವಿನ ಗಡಿ ಸಂಘರ್ಷ ಸಂಬಂಧ ಉಭಯ ರಾಷ್ಟ್ರಗಳ ನಡುವೆ ಅಕ್ಟೋಬರ್​ 10 ರಂದು ನಡೆದ 13ನೇ ಸುತ್ತಿನ ಮಾತುಕತೆಯೂ ವಿಫಲವಾಗಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.