ನವದೆಹಲಿ: ಉತ್ತರಾಖಂಡದ ಹರಿದ್ವಾರದಲ್ಲಿ ನಡೆಯುತ್ತಿರುವ ಕುಂಭಮೇಳ ಕೊರೊನಾ ಹೆಚ್ಚಳಕ್ಕೆ ಕಾರಣವಾಗುತ್ತಿದೆ ಎಂಬ ಆರೋಪಗಳ ಬೆನ್ನಲ್ಲೇ ಪ್ರಧಾನಿ ಮೋದಿ ಸಾಂಕೇತಿಕ ಕುಂಭಮೇಳ ನಡೆಸಲು ಮೋದಿ ಮನವಿ ಮಾಡಿದ್ದಾರೆ.
ಈ ಸಂಬಂಧ ಹಿಂದೂ ಆಚಾರ್ಯ ಸಭಾದ ಅಧ್ಯಕ್ಷ ಸ್ವಾಮಿ ಅವಧೇಶಾನಂದ ಗಿರಿ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿರುವುದಾಗಿ ಪ್ರಧಾನಿ ಮೋದಿ ತಿಳಿಸಿದ್ದಾರೆ. ಹೆಚ್ಚುತ್ತಿರುವ ಕೋವಿಡ್ 19 ಪ್ರಕರಣಗಳಿಂದಾಗಿ ಕುಂಭಮೇಳವನ್ನು ಸಾಂಕೇತಿಕವಾಗಿರಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಕೋವಿಡ್ ಹೆಚ್ಚಾಗುತ್ತಿದ್ದರೂ ಕುಂಭಮೇಳ ಯಾಕೆ ನಿಲ್ಲಿಸುತ್ತಿಲ್ಲಾ?
ಕುಂಭಮೇಳದ ಬಗ್ಗೆ ಪ್ರಧಾನಿ ಮೋದಿ ಟ್ವೀಟ್: ತಮ್ಮಿಬ್ಬರ ನಡುವಿನ ದೂರವಾಣಿ ಸಂಭಾಷಣೆ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, "ಸ್ವಾಮಿ ಅವಧೇಶಾನಂದ ಗಿರಿ ಜಿ ಅವರೊಂದಿಗೆ ಇಂದು ಫೋನ್ ಮೂಲಕ ಮಾತನಾಡಿದ್ದಾನೆ. ಈ ವೇಳೆ, ಎಲ್ಲಾ ಸಂತರ ಆರೋಗ್ಯದ ಬಗ್ಗೆ ವಿಚಾರಿಸಿದ್ದೇನೆ. ಕುಂಭಮೇಳ ಹಾಗೂ ಕೊರೊನಾ ನಿಮಯಗಳ ಪಾಲನೆ ನಡೆಸಲು ಎಲ್ಲಾ ಸಂತರು ಅಲ್ಲಿನ ಆಡಳಿತ ವಿಭಾಗಕ್ಕೆ ಬೆಂಬಲ ನೀಡುತ್ತಿದ್ದಾರೆ. ಅದಕ್ಕಾಗಿ ನಾನು ಅವರಿಗೆ ಧನ್ಯವಾದ ಅರ್ಪಿಸಿದ್ದೇನೆ" ಎಂದು ಹೇಳಿದ್ದಾರೆ.
"ಇದೇ ವೇಳೆ ನಾನು ಸಾಂಕೇತಿಕ ಕುಂಭಮೇಳ ನಡೆಸಲು ಸ್ವಾಮೀಜಿ ಬಳಿ ವಿನಂತಿ ಮಾಡಿಕೊಂಡಿದ್ದೇನೆ. ಈಗಾಗಲೇ ಎರಡು ಶಾಹಿ ಸ್ನಾನಗಳು ನಡೆದಿವೆ. ಕೊರೊನಾದ ಆತಂಕದ ಸಮಯದಲ್ಲಿ ಕುಂಭಮೇಳವನ್ನು ಸಾಂಕೇತಿಕವಾಗಿ ನಡೆಸಿ. ಈ ಬಿಕ್ಕಟ್ಟಿನ ವಿರುದ್ಧದ ಹೋರಾಟಕ್ಕೆ ಇದು ಒಂದು ಬಲವನ್ನು ನೀಡುತ್ತದೆ" ಎಂದು ಪಿಎಂ ಮೋದಿ ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಟ್ರಾಮಾಕೇರ್ ಸೆಂಟರ್ನಲ್ಲಿ ಅವ್ಯವಸ್ಥೆ ಆರೋಪ : ವಿಡಿಯೋ ಹರಿಬಿಟ್ಟ ಸೋಂಕಿತರು
ಪ್ರಧಾನಿ ಮನವಿಗೆ ಸ್ವಾಮಿ ಅವಧೇಶಾನಂದ ಗಿರಿ ಪ್ರತಿಕ್ರಿಯೆ: ಪ್ರಧಾನಿ ನರೇಂದ್ರ ಮೋದಿ ಮನವಿಗೆ ಹಿಂದೂ ಆಚಾರ್ಯ ಸಭಾ ಅಧ್ಯಕ್ಷ ಸ್ವಾಮಿ ಅವಧೇಶಾನಂದ ಗಿರಿ ಅವರು ಪ್ರತಿಕ್ರಿಯೆ ನೀಡಿದ್ದು, "ಪ್ರಧಾನಮಂತ್ರಿ ಅವರ ಮನವಿಯನ್ನು ನಾವು ಗೌರವಿಸುತ್ತೇವೆ. ಕೋವಿಡ್ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಶಾಹಿ ಸ್ನಾನಕ್ಕೆ ಬರದಂತೆ ನಾನು ವಿನಂತಿಸುತ್ತೇನೆ. ಎಲ್ಲಾ ಕೊರೊನಾ ಮುನ್ನೆಚ್ಚರಿಕಾ ನಿಯಮಗಳನ್ನು ಎಲ್ಲರೂ ಪಾಲಿಸುವಂತೆ ವಿನಂತಿಸುತ್ತೇನೆ." ಎಂದು ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ.
ಸಂತರಿಗೆ ತಗುಲಿದ ಕೊರೊನಾ: ಹಿರಿಯ ಸಾಧು ಸಂತರಿಗೆ ಕೊರೊನಾ ದೃಢಪಟ್ಟಿದ್ದು, ಏಪ್ರಿಲ್ 10 ರಿಂದ 14 ರವರೆಗೆ ಒಟ್ಟು 1,701 ಕೋವಿಡ್ ಪ್ರಕರಣಗಳು ವರದಿಯಾಗಿವೆ. ಅಲ್ಲದೇ ಈಗಾಗಲೇ ಒಬ್ಬರು ಸಾಧು ಕೊರೊನಾಗೆ ಬಲಿಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.
ಪ್ರಧಾನಿ ಕರೆ ಸ್ವಾಗತಿಸಿದ ಜುನಾ ಅಖಾರಾ: ಮಹಾಕುಂಭವನ್ನು ಸಾಂಕೇತಿಕವಾಗಿ ಆಚರಿಸಬೇಕೆಂಬ ಪ್ರಧಾನಿ ಮನವಿಯನ್ನು ಜುನಾ ಅಖರಾ ಸ್ವಾಗತಿಸಿದೆ. ರಾಷ್ಟ್ರದಾದ್ಯಂತ ವೇಗವಾಗಿ ಹರಡುತ್ತಿರುವ ಕೊರೊನಾ ಸಾಂಕ್ರಾಮಿಕವನ್ನು ಗಮನದಲ್ಲಿಟ್ಟುಕೊಂಡು ಮಹಾಕುಂಭವನ್ನು ಸಾಂಕೇತಿಕವಾಗಿ ಆಚರಿಸಲಾಗುವುದು ಎಂದು ಜುನಾ ಅಖರಾ ನಾರಾಯಣ್ ಗಿರಿ ಮಹಾರಾಜ್ ಹೇಳಿದರು. ಕುಂಬ್ ಮೇಳದ ಆರಂಭದಿಂದಲೂ ಜುನಾ ಅಖಾರ ಯಾವಾಗಲೂ ಸರ್ಕಾರದ ಪರ ನಿಂತಿದೆ.