ಫಿರೋಜ್‌ಪುರ: ಭಾರತ-ಚೀನಾ ಗಡಿಯಲ್ಲಿ ಪಂಜಾಬ್ನ ಯೋಧ ಕುಲದೀಪ್ ಸಿಂಗ್ ಹುತಾತ್ಮರಾಗಿದ್ದಾರೆ. ಶಹೀದ್ ಕುಲದೀಪ್ ಸಿಂಗ್ ಫಿರೋಜ್‌ಪುರದ ಲೋಹ್ಕೆ ಕಲಾನ್ ಗ್ರಾಮದ ನಿವಾಸಿಯಾಗಿದ್ದಾರೆ. ಅವರು ಹುತಾತ್ಮರಾದ ಸುದ್ದಿ ತಿಳಿದ ಕುಟುಂಬಸ್ಥರು ಹಾಗೂ ಇಡೀ ಗ್ರಾಮದಲ್ಲಿ ದುಃಖ ಮಡುಗಟ್ಟಿದೆ.
ಶಹೀದ್ ಕುಲದೀಪ್ ಸಿಂಗ್ ಅವರು ಜುಲೈ 10, 1993 ರಂದು ಜನಿಸಿದ್ದು, ಜುಲೈ 10, 2022 ರಂದು ಮೃತಪಟ್ಟಿದ್ದಾರೆ. 2014ರಿಂದ ಭಾರತೀಯ ಸೇನೆಯಲ್ಲಿ 21ನೇ ಸಿಖ್ ರೆಜಿಮೆಂಟ್ನ ಚೀನಾ ಗಡಿಯಲ್ಲಿರುವ ಬುಮ್ಲಾ ಸೆಕ್ಟರ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕುಲದೀಪ್ ಸಿಂಗ್ (29) ನಿನ್ನೆ ಮಧ್ಯಾಹ್ನ 2 ಗಂಟೆ ಸುಮಾರಿಗೆ ನಡೆದ ದಾಳಿಯಲ್ಲಿ ಹುತಾತ್ಮರಾಗಿದ್ದಾರೆ.
ಇದನ್ನೂ ಓದಿ: ಇಪಿಎಸ್-ಒಪಿಎಸ್ ಗುಂಪಿನ ಗಲಾಟೆ: ಎಐಎಡಿಎಂಕೆ ಕಚೇರಿ ಸೀಲ್
ಶಹೀದ್ ಕುಲದೀಪ್ ಸಿಂಗ್ ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದು, ಒಂದೂವರೆ ವರ್ಷದ ಮಗನಿದ್ದಾನೆ. ಅವರು ತಾಯಿ, ಪತ್ನಿ, ಒಬ್ಬ ಸಹೋದರ ಮತ್ತು ಮೂವರು ಸಹೋದರಿಯರನ್ನು ಅಗಲಿದ್ದಾರೆ. ಶಹೀದ್ ಕುಲದೀಪ್ ಸಿಂಗ್ ಅವರ ಪಾರ್ಥಿವ ಶರೀರವನ್ನು ನಾಳೆ ಫಿರೋಜ್‌ಪುರ ಕ್ಷೇತ್ರದ ಜಿರಾ ಜಿಲ್ಲೆಯ ಲೋಹ್ಕೆ ಕಲಾನ್ ಗ್ರಾಮಕ್ಕೆ ತರಲಾಗುವುದು ಮತ್ತು ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ಮಾಡಲಾಗುವುದು ಎಂದು ತಿಳಿದುಬಂದಿದೆ.