ಬೆಂಗಳೂರು : ಕೊರೊನಾ ಸಾಂಕ್ರಾಮಿಕ ಹಿನ್ನೆಲೆ ಕೆಎಸ್‌ಆರ್‌ಟಿಸಿ ಹಲವು ರಾಜ್ಯಗಳ ಬಸ್ ಸಂಚಾರವನ್ನ ಸ್ಥಗಿತಗೊಳಿಸಿತ್ತು. ಆದರೆ, ನಿಧಾನವಾಗಿ ಎಲ್ಲ ರಾಜ್ಯಗಳು ಅನ್ಲಾಕ್ ಆದ ಕಾರಣ ಅಂತಾರಾಜ್ಯ ಬಸ್ಗಳ ಸಂಚಾರ ಶುರುವಾಗಿದೆ.
ಕಳೆದ ಏಪ್ರಿಲ್ 27ರಂದು ಕೋವಿಡ್ ನಿರ್ಬಂಧದಿಂದಾಗಿ ತಮಿಳುನಾಡಿಗೆ ಬಸ್ ಸೇವೆಗಳನ್ನು ನಿಲ್ಲಿಸಲಾಗಿತ್ತು. ಇದೀಗ, ನಾಳೆಯಿಂದ ತಮಿಳುನಾಡಿಗೆ ಕೆಎಸ್‌ಆರ್‌ಟಿಸಿ ಬಸ್ ಸೇವೆಗಳು ಪುನಾರಂಭಗೊಳ್ಳಲಿವೆ.
ಹೊಸೂರು, ವೆಲ್ಲೂರು, ತಿರುವಣ್ಣಾಮಲೈ, ವಿಲ್ಲುಪುರಂ, ತಿರುಕೋಯಿಲೂರ್, ಕೊಯಮತ್ತೂರು, ತಿರುನಲ್ಲರ್,ತಿರುಚಿ, ಮಧುರೈ ಹಾಗೂ ಕುಂಭಕೋಣಂ, ಕಾಂಚೀಪುರಂ, ಚೆನ್ನೈ ಹಾಗೂ ಊಟಿ ಸೇರಿದಂತೆ ವಿವಿಧ ಸ್ಥಳಗಳಿಗೆ ಬಸ್ಗಳು ಓಡಾಡಲಿವೆ. ನಾಳೆಯಿಂದ ಸುಮಾರು 250 ಬಸ್ಗಳು ಕಾರ್ಯ ನಿರ್ವಹಿಸಲಿವೆ.
ಓದಿ: ಶ್ರೀಲಂಕಾದ ಕರಾವಳಿಯಲ್ಲಿ ವಾಯುಭಾರ ಕುಸಿತ : ರಾಜ್ಯದಲ್ಲಿ ಆ.26ರವರೆಗೆ ಭಾರಿ ಮಳೆ ಸಾಧ್ಯತೆ