ಕೊಲ್ಹಾಪುರ : ವಿಶ್ವದ ಅತ್ಯಂತ ಪ್ರತಿಷ್ಠಿತ ಆಟ ಎಂದರೆ ಅದು ಇಂಗ್ಲೆಂಡ್‌ನ ವಿಂಬಲ್ಡನ್ ಸ್ಪರ್ಧೆಯಾಗಿದ್ದು, ಕೊಲ್ಲಾಪುರದ 14 ವರ್ಷದ ಐಶ್ವರ್ಯಾ ಜಾಧವ್ ಈ ಸ್ಪರ್ಧೆಯಲ್ಲಿ ಭಾರತದ ಧ್ವಜ ಹಾರಿಸಿದ ಮೊದಲ ಬಾಲಕಿ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
ಗ್ರೀನ್ಸ್‌ನಲ್ಲಿ ಆಡಿದ ಈ ಟೂರ್ನಿಯಲ್ಲಿ 4 ಪಂದ್ಯಗಳಲ್ಲಿ ಸೋಲನುಭವಿಸಬೇಕಾಗಿ ಬಂದಿದ್ದರೂ, ಒಳ್ಳೆಯ ಅನುಭವದೊಂದಿಗೆ ಮುಂದಿನ ಪಯಣಕ್ಕೆ ಹೊರಟಿದ್ದಾಳೆ ಐಶ್ವರ್ಯಾ. ಲೋಕರಾಜ ರಾಜರ್ಷಿ ಛತ್ರಪತಿ ಶಾಹು ಮಹಾರಾಜರ ಬಲವಾದ ಪ್ರೋತ್ಸಾಹ ಮತ್ತು ಬೆಂಬಲದಿಂದಾಗಿ ಕೊಲ್ಲಾಪುರದ ಕ್ರೀಡಾ ಸಂಪ್ರದಾಯವು ಅಭಿವೃದ್ಧಿಗೊಂಡಿದ್ದು, ಇಲ್ಲಿನ ಅನೇಕ ಕ್ರೀಡಾಪಟುಗಳು ಕೊಲ್ಹಾಪುರದ ಹೆಸರನ್ನು ದೇಶ ಮತ್ತು ವಿದೇಶಗಳಲ್ಲಿ ಪ್ರಸಿದ್ಧಿ ಮಾಡಿದ್ದಾರೆ. ಈ ಆಟಗಾರ್ತಿಯರ ಹೆಸರಿಗೆ ಈಗ ಹೊಸ ಮಿಂಚು ತಾರೆ ಅಂದರೆ ಲಾನ್ ಟೆನಿಸ್ ಆಟಗಾರ್ತಿ ಐಶ್ವರ್ಯಾ ಜಾಧವ್ ಸೇರ್ಪಡೆಯಾಗಿದ್ದಾರೆ. ಈಕೆ ಇಂದು ಕೊಲ್ಹಾಪುರಕ್ಕೆ ವಾಪಸ್ ಆಗಿದ್ದಾಳೆ.
ಐಶ್ವರ್ಯ ಅವರು ಅಕ್ಟೋಬರ್ 4, 2008 ರಂದು ಪನ್ಹಾಳ ತಾಲೂಕಿನ ಯಾವಲುಜ್‌ನಲ್ಲಿ ವಾಸಿಸುವ ರೈತ ಕುಟುಂಬದಲ್ಲಿ ಜನಿಸಿದ್ದಾರೆ. ಐಶ್ವರ್ಯಾ ಜಾಧವ್ ರಾಜ್ಯ ಮತ್ತು ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಗೆಲುವು ಸಾಧಿಸುವ ಮೂಲಕ ಕಡಿಮೆ ಅವಧಿಯಲ್ಲಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಹಾರಿದ್ದಾರೆ.
ತಂದೆ - ತಾಯಿಯ ಪ್ರೋತ್ಸಾಹದಿಂದಾಗಿ ಸೀನಿಯರ್ ಕೆ.ಜಿ.ಯಲ್ಲಿ ಲಾನ್ ಟೆನಿಸ್ ಆಡಲು ಆರಂಭಿಸಿದ್ದರು. ಜಾಧವ್ ಕುಟುಂಬವು ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಮತ್ತು ಐಶ್ವರ್ಯಾ ಟೆನಿಸ್ ವೃತ್ತಿಯನ್ನು ಮುಂದುವರಿಸಲು ಯವ್ಲುಜ್ ಗ್ರಾಮವನ್ನು ತೊರೆದು ನಗರದಲ್ಲಿ ವಾಸಿಸಲು ನಿರ್ಧರಿಸಿದೆ.
ಜಾಧವ್ ಕುಟುಂಬ ಪ್ರಸ್ತುತ ಸರ್ಕ್ಯೂಟ್ ಹೌಸ್ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದೆ. ಮನೆಯಲ್ಲಿ ಎಲ್ಲೆಂದರಲ್ಲಿ ಕಣ್ಣಾಡಿಸಿದರೆ ಟ್ರೋಫಿಗಳು, ಪದಕಗಳೆ ಇವೆ. ಐಶ್ವರ್ಯಾ ಅವರ ತಂದೆ ದಯಾನಂದ್ ಜಾಧವ್ ಭೂಮಾಪಕರು ಮತ್ತು ಅವರ ತಾಯಿ ಅಂಜಲಿ ಜಾಧವ್ ಗೃಹಿಣಿ.
ಲಾನ್ ಟೆನಿಸ್ ಅನ್ನು ಹೆಚ್ಚು ಇಷ್ಟಪಡುವ ಐಶ್ವರ್ಯಾ ಬಾಲ್ಯದಿಂದಲೂ ಈ ಆಟವನ್ನು ಅಭ್ಯಾಸ ಮಾಡುತ್ತಿದ್ದರು. ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ವಿಂಬಲ್ಡನ್ ಟೂರ್ನಮೆಂಟ್‌ನ 14 ವರ್ಷದೊಳಗಿನವರ ವಿಭಾಗದಲ್ಲಿ ಐಶ್ವರ್ಯಾ ಆಡುವ ಅವಕಾಶವನ್ನು ಪಡೆದಿದ್ದರು. ಅಲ್ಲಿ ಏಷ್ಯನ್ ತಂಡವನ್ನು ಪ್ರತಿನಿಧಿಸಿದ್ದಳು. ಅಷ್ಟೇ ಅಲ್ಲ, ಚಿಕ್ಕ ವಯಸ್ಸಿನಲ್ಲಿಯೇ ಈ ಟೂರ್ನಿಯಲ್ಲಿ ಭಾಗವಹಿಸಿದ ಏಕೈಕ ಭಾರತೀಯ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ವಿಂಬಲ್ಡನ್ ಟೂರ್ನಿಯಲ್ಲಿ ಐಶ್ವರ್ಯಾ 5 ಪಂದ್ಯಗಳನ್ನು ಆಡುವ ಅವಕಾಶ ಪಡೆದಿದ್ದರು. ಪಂದ್ಯದಲ್ಲಿ ಸೋತರು ಅವರು ವೃತ್ತಿಪರ ಮತ್ತು ಅನುಭವಿ ಆಟಗಾರರ ವಿರುದ್ಧ ಸೋಲು ಎದುರಿಸಿದ್ದು ಖುಷಿಯಾಗಿದೆ ಎನ್ನುತ್ತಾರೆ.
ಇದನ್ನೂ ಓದಿ: ಬೆಳಗಾವಿಯಲ್ಲಿ ನಿರಂತರ ಮಳೆ: ಜನವಸತಿ ಪ್ರದೇಶಗಳಿಗೆ ನುಗ್ಗಿದ ನೀರು, ಗಣಪತಿ ಮಂದಿರ ಜಲಾವೃತ