ETV Bharat / bharat

ಹೋಳಿ ಬಳಿಕ ಜೀವಂತ ವ್ಯಕ್ತಿಯ ಅಂತಿಮ ಯಾತ್ರೆ: ಈ ವಿಶೇಷ ಆಚರಣೆಗಿದೆ 425 ವರ್ಷಗಳ ಇತಿಹಾಸ - ರಾಜಸ್ಥಾನದ ಭಿಲ್ವಾರ ಜಿಲ್ಲೆ

ರಾಜಸ್ಥಾನದ ಭಿಲ್ವಾರ ಜಿಲ್ಲೆಯಲ್ಲಿ ಹೋಳಿಯ ಎಂಟು ದಿನಗಳ ನಂತರ ಜೀವಂತ ವ್ಯಕ್ತಿಯ ಅಂತಿಮ ಯಾತ್ರೆ ನಡೆಸುವ ವಿಶೇಷ ಪದ್ಧತಿ ಇದ್ದು, ನೂರಾರು ಜನರು ಬಣ್ಣಗಳನ್ನು ಎರಚುತ್ತಾ ಸಾಗುತ್ತಾರೆ.

know-why-funeral-procession-of-alive-man-carried-out-in-bhilwara-on-sitalasthami
ಹೋಳಿ ಬಳಿಕ ಜೀವಂತ ವ್ಯಕ್ತಿಯ ಅಂತಿಮ ಯಾತ್ರೆ: ಈ ವಿಶೇಷ ಆಚರಣೆಗಿದೆ 425 ವರ್ಷಗಳ ಇತಿಹಾಸ
author img

By

Published : Mar 14, 2023, 10:05 PM IST

ಭಿಲ್ವಾರ (ರಾಜಸ್ಥಾನ): ರಾಜಸ್ಥಾನದಾದ್ಯಂತ ಶೀತಲ ಅಷ್ಟಮಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ. ಹೋಳಿ ನಂತರ ಎಂಟು ದಿನಗಳ ಕಾಲ ಆಚರಿಸುವ ಈ ಹಬ್ಬವನ್ನು ಭಿಲ್ವಾರ ಜಿಲ್ಲೆಯಲ್ಲಿ ವಿಶಿಷ್ಟ ರೀತಿಯಲ್ಲಿ ಆಚರಿಸಲಾಗುತ್ತದೆ. ಜೀವಂತವಾಗಿರುವ ವ್ಯಕ್ತಿಯ ಅಂತಿಮ ಯಾತ್ರೆಯನ್ನು ನಡೆಸಲಾಗುತ್ತದೆ. ಕಳೆದ 425 ವರ್ಷಗಳಿಂದ ಈ ಸಂಪ್ರದಾಯವನ್ನು ಅನುಸರಿಸಲಾಗುತ್ತಿದೆ.

ಹೋಳಿ ಆಟದ ಎಂಟು ದಿನಗಳ ನಂತರ ಸಾವಿನ ಮೆರವಣಿಗೆ ಹೊರತೆಗೆಯಲಾಗುತ್ತದೆ. ಇದು ನಗರದ 'ಚಿತ್ತೋರ್ ವಾಲೋನ್ ಕಿ ಹವೇಲಿ' ಸ್ಥಳದಿಂದ ಪ್ರಾರಂಭವಾಗುತ್ತದೆ. ಈ ಸಂದರ್ಭದಲ್ಲಿ ಜೀವಂತ ಯುವಕನನ್ನು ಹೊತ್ತುಕೊಂಡು ಬಣ್ಣದ ಎರಚುತ್ತಾ ಸಾಗಲಾಗುತ್ತದೆ. ನಂತರ ಸಾಂಕೇತಿಕ ದಹನ ಮಾಡಲಾಗುತ್ತಿದೆ. ಇದರಿಂದ ವರ್ಷವಿಡೀ ಯಾವುದೇ ತಪ್ಪುಗಳನ್ನು ಮಾಡುವುದು ತಡೆಯುವುದು ಮತ್ತು ತಮ್ಮೊಳಗಿರುವ ಯಾವುದೇ ಕೆಟ್ಟತನವು ಈ ಆಚರಣೆಯಿಂದ ತೊಡೆದು ಹೋಗುತ್ತದೆ. ಶಾಂತಿ, ನೆಮ್ಮದಿ ನೆಲೆಸುತ್ತದೆ ಎಂದು ಇಲ್ಲಿನ ಜನರ ನಂಬಿಕೆಯಾಗಿದೆ.

ಈ ಮೆರವಣಿಗೆಯಲ್ಲಿ ಭಿಲ್ವಾರ ಜನತೆ ಮಾತ್ರವಲ್ಲದೇ ಸುತ್ತಮುತ್ತಲಿನ ಜಿಲ್ಲೆಗಳಿಂದಲೂ ಜನರು ಪಾಲ್ಗೊಂಡು ಬಣ್ಣ ಹಚ್ಚಿಕೊಂಡು ಸಾಗುತ್ತಾರೆ. ಜೊತೆಗೆ ನಿಂದನೀಯ ಪದಗಳನ್ನು ಬಳಸಲಾಗುತ್ತದೆ. ಇದರಿಂದಾಗಿ ಮಹಿಳೆಯರ ಭಾಗವಹಿಸುವಿಕೆಗೆ ನಿಷೇಧ ಹೇರಲಾಗುತ್ತದೆ. ಈ ಮೆರವಣಿಗೆಯು ಭಿಲ್ವಾರ ರೈಲ್ವೆ ನಿಲ್ದಾಣ, ಗೋಲ್ ಪಯೌ ವೃತ್ತ, ಭೀಮಗಂಜ್ ಪೋಲೀಸ್ ಸ್ಟೇಷನ್ ಮೂಲಕ ಬಡಾ ಮಂದಿರದವರೆಗೆ ತಲುಪುತ್ತದೆ. ಇಲ್ಲಿಗೆ ತಲುಪಿದ ಕೂಡಲೇ ಮಲಗಿದವನು ಕೆಳಗೆ ಹಾರಿ ಓಡಿ ಹೋಗುತ್ತಾನೆ. ಬಳಿಕ ಸಂಕೇತವಾಗಿ ದೇವಾಲಯದ ಹಿಂದೆ ಚಟ್ಟವನ್ನು ಸುಡಲಾಗುತ್ತದೆ.

425 ವರ್ಷಗಳ ಇತಿಹಾಸ: ಭಿಲ್ವಾರ ನಗರದಲ್ಲಿ 425 ವರ್ಷಗಳಿಂದ ಅನುಸರಿಸುತ್ತಿರುವ ಸಂಪ್ರದಾಯ ಇದಾಗಿದೆ. 1655ರಲ್ಲಿ ಈ ಪದ್ಧತಿ ಆಚರಣೆಗೆ ಬಂದು ಎಂದು ನಮ್ಮ ಪೂರ್ವಜರು ನಮಗೆ ಹೇಳುತ್ತಿದ್ದರು ಎಂದು ಭಿಲ್ವಾರ ನಿವಾಸಿ ಜಾಂಕಿ ಲಾಲ್ ಸುಖ್ವಾಲ್ ತಿಳಿಸಿದ್ದಾರೆ. ನಂತರ ಮೇವಾರದ ರಾಜಪ್ರಭುತ್ವದ ರಾಜ ಭೋಮಿಯ (ಭೋಮಿಯಾ ಸಮುದಾಯದ ನಾಯಕ) ರಾವ್ಲಾ ಠಾಕೂರ್‌ಗೆ ತಾಮ್ರದ ತಟ್ಟೆ ಹಾಗೂ ಪಟ್ಟಾ (ಭೂಮಿ ಒಪ್ಪಂದ) ನೀಡಿದ್ದನು. ಇದರ ಪುರಾವೆ ಇನ್ನೂ ರಾವ್ಲಾದಲ್ಲಿ ಇದೆ ಎಂದರು.

ಸಂಪ್ರದಾಯದ ಪ್ರಕಾರ ಶೀತಲ ಅಷ್ಟಮಿಯ ಮೊದಲು ನಗರದ ಎರಡು ಸ್ಥಳಗಳಲ್ಲಿ ಭೈರವನಾಥವನ್ನು ಸ್ಥಾಪಿಸಲಾಗುತ್ತದೆ. ಇದಾದ ನಂತರ ಬಡಾ ಮಂದಿರದಲ್ಲಿ ಪಂಚ ಪಟೇಲರ ಸಭೆ ನಡೆಯುತ್ತದೆ. ಅಲ್ಲಿ ಈ ಮೆರವಣಿಗೆಗಾಗಿ ಜನರಿಂದ ದೇಣಿಗೆ ಸಂಗ್ರಹಿಸಲಾಗುತ್ತದೆ. ಇದರಲ್ಲಿ ಯಾರು ದಾನ ಮಾಡುತ್ತಾರೋ ಅವರ ಮನೆಯಲ್ಲಿ ಸಂತೋಷ, ಶಾಂತಿ ಮತ್ತು ಕ್ಷೇಮ ನೆಲೆಸುತ್ತದೆ ಎಂಬ ನಂಬಿಕೆ ಇದೆ ಎಂದು ಸುಖ್ವಾಲ್ ಹೇಳಿದರು.

ಭಿಲ್ವಾರಾ ನಗರದಲ್ಲಿ ಶೀತಲ ಅಷ್ಟಮಿಯ ದಿನ ನಡೆಯುವ ಜೀವಂತ ವ್ಯಕ್ತಿಯ ಅಂತಿಮ ಯಾತ್ರೆಯು ಇಂದಿಗೂ ವಿಶೇಷವಾಗಿ ಉಳಿದಿದೆ. ಈ ಮೆರವಣಿಗೆಯಲ್ಲಿ ಜನರು ಒಂಟೆಗಳು ಮತ್ತು ಕುದುರೆಗಳ ಮೇಲೆ ಬರುತ್ತಾರೆ. ಬಣ್ಣಗಳನ್ನು ಎರಚುತ್ತಾರೆ. ಪ್ರತಿವರ್ಷ ಕೂಡ ಈ ದಿನದಂದು ಜಿಲ್ಲಾದ್ಯಂತ ಜಿಲ್ಲಾಧಿಕಾರಿಗಳು ರಜೆ ಘೋಷಿಸುತ್ತಾರೆ. ಹೀಗಾಗಿ ಶೀತಲ ಅಷ್ಟಮಿ ಹಬ್ಬವನ್ನು ಬಹಳ ಸಂತೋಷ ಹಾಗೂ ಉತ್ಸಾಹದಿಂದ ಆಚರಿಸಲಾಗುತ್ತದೆ. ಮನೆಯಲ್ಲಿ ರುಚಿಕರವಾದ ಭಕ್ಷ್ಯಗಳನ್ನು ಸಹ ತಯಾರಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ಗುಂಡು ಹಾರಿಸಿ ಹೋಳಿ ಆಚರಣೆ; 450 ವರ್ಷಗಳಷ್ಟು ಹಳೆಯ ಪದ್ಧತಿ! ವಿಡಿಯೋ ನೋಡಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.