ಹರಿಯಾಣ: ಕೃಷಿ ಕಾನೂನುಗಳ ವಿರುದ್ಧದ ರೈತರ ಪ್ರತಿಭಟನೆ ಮುಂದುವರೆದಿದ್ದು, ದೆಹಲಿ- ಹರಿಯಾಣ ಗಡಿಭಾಗವಾದ ಟಿಕ್ರಿ ಗಡಿಯಲ್ಲಿ ಅನ್ನದಾತರು ತಂಗಲು ಶಾಶ್ವತ ಆಶ್ರಯ ಕೇಂದ್ರವನ್ನು ನಿರ್ಮಿಸಲಾಗಿದೆ.
ಕಿಸಾನ್ ಸೋಷಿಯಲ್ ಆರ್ಮಿ ರೈತ ಸಂಘಟನೆಯು ಈ ಆಶ್ರಯ ಕೇಂದ್ರವನ್ನು ನಿರ್ಮಿಸಿದೆ. ಇಲ್ಲಿ ಒಟ್ಟು 25 ಮನೆಗಳನ್ನು ನಿರ್ಮಿಸಲಾಗಿದ್ದು, ಈ ಮನೆಗಳು ರೈತರ ಇಚ್ಛೆಯಂತೆಯೇ ಗಟ್ಟಿಮುಟ್ಟಾಗಿವೆ. ಮುಂಬರುವ ದಿನಗಳಲ್ಲಿ ಇಂತಹ 1000-2000 ಮನೆಗಳನ್ನು ಕಟ್ಟಲಾಗುವುದು ಎಂದು ಕಿಸಾನ್ ಸೋಷಿಯಲ್ ಆರ್ಮಿ ಮುಖಂಡ ಅನಿಲ್ ಮಲಿಕ್ ಹೇಳಿದ್ದಾರೆ.
ಇದನ್ನೂ ಓದಿ: ನೇಣು ಬಿಗಿದುಕೊಂಡು ಒಂದೇ ಕುಟುಂಬದ ಐವರು ಆತ್ಮಹತ್ಯೆ
ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶದ ಸಾವಿರಾರು ರೈತರು ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ದೆಹಲಿಯ ಗಡಿಭಾಗಗಳಲ್ಲಿ ನಡೆಸುತ್ತಿರುವ ಧರಣಿ ನೂರು ದಿನ ದಾಟಿದೆ. ಪ್ರತಿಭಟನೆ ವೇಳೆ 240ಕ್ಕೂ ಹೆಚ್ಚು ರೈತರು ಸಾವನ್ನಪ್ಪಿದ್ದಾರೆ. ಸರ್ಕಾರ ಹಾಗೂ ರೈತ ಮುಖಂಡರ ನಡುವಿನ ಹಲವು ಸುತ್ತಿನ ಮಾತುಕತೆಗಳೂ ವಿಫಲವಾಗಿವೆ. ಆದರೂ ಪಟ್ಟುಬಿಡದ ಅನ್ನದಾತರು ಪ್ರತಿಭಟನೆ ಮುಂದುವರೆಸಿದ್ದಾರೆ.