ETV Bharat / bharat

ಮುಂಬೈ ಕ್ರೂಸ್‌ ಶಿಪ್‌ ಡ್ರಗ್ಸ್‌ ಪ್ರಕರಣದ ಸ್ವತಂತ್ರ ಸಾಕ್ಷಿ ಕಿರಣ್‌ ಗೋಸಾವಿ ಪೊಲೀಸ್ ವಶ - ಕಿರಣ್ ಗೋಸಾವಿ ವಶಕ್ಕೆ

2018ರ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿರಣ್ ಗೋಸಾವಿಯನ್ನು ವಶಕ್ಕೆ ಪಡೆಯಲಾಗಿದ್ದು, ಅಕ್ಟೋಬರ್ 14ರಂದು ಪುಣೆ ಪೊಲೀಸರು ಆತನ ವಿರುದ್ಧ ಲುಕೌಟ್ ನೋಟಿಸ್ ಹೊರಡಿಸಿದ್ದರು.

Kiran Gosavi, Probe Agency's Witness In Aryan Khan Case, Detained In Pune
ಕ್ರೂಸ್ ಶಿಪ್​ ಡ್ರಗ್ಸ್ ಕೇಸ್: ಸೆಲ್ಪಿ ಮ್ಯಾನ್ ಕಿರಣ್ ಗೋಸಾವಿ ಪೊಲೀಸರ ವಶಕ್ಕೆ
author img

By

Published : Oct 28, 2021, 8:35 AM IST

Updated : Oct 28, 2021, 9:15 AM IST

ಪುಣೆ(ಮಹಾರಾಷ್ಟ್ರ): ಬಾಲಿವುಡ್ ನಟ ಶಾರೂಕ್ ಖಾನ್ ಪುತ್ರ ಆರ್ಯನ್ ಖಾನ್ ಜೊತೆಗೆ ಸೆಲ್ಫಿ ತೆಗೆಸಿಕೊಂಡ ನಂತರ ನಾಪತ್ತೆಯಾಗಿದ್ದ, ಮುಂಬೈ ಡ್ರಗ್ಸ್ ಪ್ರಕರಣದಲ್ಲಿ ಸ್ವತಂತ್ರ ಸಾಕ್ಷಿಯಾಗಿರುವ ಕಿರಣ್​ ಗೋಸಾವಿಯನ್ನು ಪುಣೆಯಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

2018ರ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿರಣ್ ಗೋಸಾವಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಎನ್​ಐ ಸುದ್ದಿಸಂಸ್ಥೆ ವರದಿ ಮಾಡಿದೆ. ಕಿರಣ್ ಗೋಸಾವಿ 2019ರಿಂದ ನಾಪತ್ತೆಯಾಗಿದ್ದಾನೆ ಎಂದು ಪುಣೆ ನಗರ ಪೊಲೀಸರು ಘೋಷಿಸಿದ್ದರು. ಕಾಣೆಯಾಗಿದ್ದ ಕಿರಣ್ ಗೋಸಾವಿ ಕ್ರೂಸ್ ಶಿಪ್​ ಮೇಲೆ ಎನ್​ಸಿಬಿ ದಾಳಿ ನಡೆಸಿದ ನಂತರ ಪತ್ತೆಯಾಗಿದ್ದ. ಅಕ್ಟೋಬರ್ 14ರಂದು ಪೊಲೀಸರು ಆತನ ವಿರುದ್ಧ ಲುಕೌಟ್ ನೋಟಿಸ್ ಹೊರಡಿಸಿದ್ದರು.

Kiran Gosavi, Probe Agency's Witness In Aryan Khan Case, Detained In Pune
ಕಿರಣ್ ಗೋಸಾವಿ

ಉತ್ತರ ಪ್ರದೇಶದ ರಾಜಧಾನಿ ಲಖನೌ ಪೊಲೀಸರಿಗೆ ಶರಣಾಗುವುದಾಗಿ ಹೇಳಿದ್ದರೆನ್ನಲಾದ ಮೂರು ದಿನಗಳ ನಂತರ ಸೆಲ್ಫಿ ಮ್ಯಾನ್ ಕಿರಣ್ ಗೋಸಾವಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಹಾರಾಷ್ಟ್ರದಲ್ಲಿ ನನಗೆ ಜೀವ ಬೆದರಿಕೆ ಇದೆ, ಆದ್ದರಿಂದ ಮಹಾರಾಷ್ಟ್ರ ಪೊಲೀಸರ ಬದಲಿಗೆ ಉತ್ತರಪ್ರದೇಶ ಪೊಲೀಸರ ಮುಂದೆ ಶರಣಾಗುತ್ತೇನೆ ಎಂದು ಕಿರಣ್ ಗೋಸಾವಿ ಹೇಳಿದ್ದರೆನ್ನಲಾದ ಆಡಿಯೋ ವೈರಲ್ ಆಗಿತ್ತು.

ಖಾಸಗಿ ತನಿಖಾಧಿಕಾರಿ (ಪ್ರೈವೇಟ್ ಡಿಟೆಕ್ಟಿವ್) ಆಗಿರುವ ಕಿರಣ್ ಗೋಸಾವಿ ಶಾರೂಖ್ ಖಾನ್ ಮ್ಯಾನೇಜರ್​ನನ್ನೂ ಕೂಡಾ ಭೇಟಿಯಾಗಿದ್ದು, ಎನ್​ಸಿಬಿ ಮುಂಬೈ ವಲಯ ನಿರ್ದೇಶಕ ಸಮೀರ್​ ವಾಂಖೆಡೆ ಎದುರಲ್ಲೇ 9ರಿಂದ 10 ಪುಟಗಳಷ್ಟು ಖಾಲಿ ಹಾಳೆಗಳಿಗೆ ಸಹಿ ಹಾಕುವಂತೆ ಕೇಳಿದ್ದನ್ನು ನಾನು ನೋಡಿದ್ದೇನೆ ಎಂದು ಪ್ರಭಾಕರ್ ಸೈಲ್ ಆರೋಪಿಸಿದ್ದಾರೆ. ಇನ್ನು ಪ್ರಭಾಕರ್ ಸೈಲ್ ಕಿರಣ್ ಗೋಸಾವಿಯ ಪರ್ಸನಲ್ ಬಾಡಿಗಾರ್ಡ್ ಕೂಡಾ ಆಗಿದ್ದಾರೆ.

'ಪ್ರಭಾಕರ್ ಸುಳ್ಳು ಹೇಳುತ್ತಿದ್ದಾನೆ'

ಪುಣೆ ಪೊಲೀಸರು ಕಿರಣ್ ಗೋಸಾವಿಯನ್ನು ವಶಕ್ಕೆ ಪಡೆಯುವ ಮುನ್ನ ವಿಡಿಯೋವೊಂದರಲ್ಲಿ ಮಾತನಾಡಿರುವ ಕಿರಣ್ ಗೋಸಾವಿ, 'ಪ್ರಭಾಕರ್ ಸೈಲ್ ಸುಳ್ಳು ಹೇಳುತ್ತಿದ್ದಾರೆ. ಸೈಲ್ ಅವರ ಸಿಡಿಆರ್ (CDR- Call Detail Record) ಅನ್ನು ಬಿಡುಗಡೆ ಮಾಡುವಂತೆ ನಾನು ಮನವಿ ಮಾಡುತ್ತೇನೆ. ಪ್ರಭಾಕರ್ ಸೈಲ್ ಮತ್ತು ಆತನ ಸಹೋದರ ಸಿಡಿಆರ್, ಚಾಟಿಂಗ್ ಅನ್ನು ಬಹಿರಂಗಗೊಳಿಸಬೇಕು. ಆಗ ಎಲ್ಲವೂ ಸ್ಪಷ್ಟವಾಗಲಿದೆ ಎಂದಿದ್ದಾರೆ.

'ಯಾರಾದರೊಬ್ಬರು ನನ್ನ ಪರವಾಗಿ ನಿಲ್ಲಿ'

'ಕನಿಷ್ಠ ಪಕ್ಷ ಮಹಾರಾಷ್ಟ್ರದ ಸಚಿವರೊಬ್ಬರು ಅಥವಾ ವಿರೋಧ ಪಕ್ಷದ ನಾಯಕರೊಬ್ಬರು ನನ್ನೊಂದಿಗೆ ನಿಲ್ಲಿ. ಕಡೇ ಪಕ್ಷ ಪ್ರಭಾಕರ್ ಸೈಲ್​ಗೆ ಸಂಬಂಧಿಸಿದ ಸಿಡಿಆರ್ ಅನ್ನು ಬಿಡುಗಡೆ ಮಾಡುವಂತೆ ಮಹಾರಾಷ್ಟ್ರ ಪೊಲೀಸರಿಗೆ ಮನವಿ ಮಾಡಿ. ಈ ಕುರಿತ ವರದಿಗಳು ಬಂದ ಮೇಲೆ ಎಲ್ಲವೂ ಗೊತ್ತಾಗುತ್ತದೆ ಎಂದು ಕಿರಣ್ ಗೋಸಾವಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಕ್ರೂಸ್ ಶಿಪ್​ ಡ್ರಗ್ಸ್ ಕೇಸ್: 4 ಗಂಟೆ ಸಮೀರ್​ ವಾಂಖೆಡೆ ವಿಚಾರಣೆ, ಹೇಳಿಕೆ ದಾಖಲು

Last Updated : Oct 28, 2021, 9:15 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.