ETV Bharat / bharat

ವಾಮಾಚಾರ ಆರೋಪ: ಅತ್ತಿಗೆಯನ್ನು ಕತ್ತು ಕೊಯ್ದು ಬರ್ಬರವಾಗಿ ಕೊಲೆ ಮಾಡಿದ ಮೈದುನ! - ಧಾರ್ಮಿಕ ಕಾರ್ಯಕ್ರಮಕ್ಕೆ ತೆರಳಿದ್ದ ಅತ್ತಿಗೆ

ಮಹಾರಾಷ್ಟ್ರದ ಪುಣೆಯಲ್ಲಿ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮೈದುನ ತನ್ನ ಅತ್ತಿಗೆಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

killed his brother wife  killed his brother wife for practicing witchcraft  ಮಹಾರಾಷ್ಟ್ರದ ಪುಣೆಯಲ್ಲಿ ಆಘಾತಕಾರಿ ಪ್ರಕರಣ  ಮೈದುನಾ ತನ್ನ ಅತ್ತಿಗೆಯನ್ನು ಬರ್ಬರವಾಗಿ ಕೊಲೆ  ಕತ್ತು ಕೊಯ್ದು ಬರ್ಬರವಾಗಿ ಕೊಲೆ  ಧಾರ್ಮಿಕ ಕಾರ್ಯಕ್ರಮಕ್ಕೆ ತೆರಳಿದ್ದ ಅತ್ತಿಗೆ  ಘಟನಾ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು
ಅತ್ತಿಗೆಯನ್ನು ಕತ್ತು ಕೊಯ್ದು ಬರ್ಬರವಾಗಿ ಕೊಲೆ ಮಾಡಿದ ಮೈದುನ
author img

By

Published : Nov 12, 2022, 2:17 PM IST

ಪುಣೆ(ಮಹಾರಾಷ್ಟ್ರ): ಮಾಟಮಂತ್ರ ಮಾಡುತ್ತಿದ್ದಳೆಂದು ಅತ್ತಿಗೆಯನ್ನು ಮೈದುನೊಬ್ಬ ಕತ್ತು ಕೊಯ್ದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಇಲ್ಲಿನ ಚಂದನ್ ನಗರ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಶ್ರೀನಿವಾಸ್ ಶ್ರೀರಾಮ್ ಎಂಬಾತನನ್ನು ನಗರ ಪೊಲೀಸರು ಬಂಧಿಸಿದ್ದಾರೆ. ಕೊಲೆಯಾದ ಮಹಿಳೆಯ ಹೆಸರು ಲಕ್ಷ್ಮೀಬಾಯಿ ಶ್ರೀರಾಮ್ ಎಂದು ಗುರುತಿಸಲಾಗಿದೆ.

ಧಾರ್ಮಿಕ ಕಾರ್ಯಕ್ರಮಕ್ಕೆ ತೆರಳಿದ್ದ ಅತ್ತಿಗೆ: ಬಂಧಿತ ಆರೋಪಿ ಶ್ರೀನಿವಾಸ್ ಶ್ರೀರಾಮ್ ಈ ಹಿಂದೆ ಬೀಡಿ ಕಾರ್ಮಿಕರ ಕಾಲೋನಿಯಲ್ಲಿ ವಾಸವಾಗಿದ್ದರು. ನಂತರ ಅವರು ಪ್ರತ್ಯೇಕವಾಗಿ ವಾಸಿಸಲು ಪ್ರಾರಂಭಿಸಿದರು. ಶ್ರೀನಿವಾಸ್​ಗೆ ಸಾಗರ್​ ಎಂಬ ಸ್ನೇಹಿತನಿದ್ದಾರೆ. ಶುಕ್ರವಾರ (ನ.11) ಮಧ್ಯಾಹ್ನ ಸಾಗರ್ ಅವರ ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮವಿತ್ತು. ಈ ಹಿನ್ನೆಲೆ ಲಕ್ಷ್ಮೀಬಾಯಿಯನ್ನು ಸಾಗರ್​ ಮನೆಗೆ ಕರೆದಿದ್ದರು. ಸಾಗರ್ ಮತ್ತು ಆತನ ಪತ್ನಿ ಪೂಜಾ ಸಾಮಗ್ರಿಗಳನ್ನು ತರಲು ಹೊರಗೆ ಹೋಗಿದ್ದರು. ಆ ವೇಳೆ ಶ್ರೀನಿವಾಸ್ ಲಕ್ಷ್ಮೀಬಾಯಿಯನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

ಸಾಗರ್ ಮತ್ತು ಅವರ ಹೆಂಡತಿ ಮನೆಗೆ ವಾಪಸ್​ ಬಂದು ನೋಡಿದಾಗ ಲಕ್ಷ್ಮೀಬಾಯಿ ರಕ್ತದ ಮಡಿವಿನಲ್ಲಿ ಬಿದ್ದಿರುವುದು ಕಂಡಿದೆ. ಕೂಡಲೇ ಸಾಗರ್​ ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲನೆ ಕೈಗೊಂಡರು. ಪರಾರಿಯಾಗಿದ್ದ ಆರೋಪಿ ಶ್ರೀನಿವಾಸ್​ನನ್ನು ಪೊಲೀಸರು ಬಂಧಿಸಿದರು. ಆ ಮನೆಯಲ್ಲಿ ವಾಮಾಚಾರವೋ ಅಥವಾ ಧಾರ್ಮಿಕ ಪೂಜೆ ನಡೆಯುತ್ತಿತ್ತಾ ಎಂಬುದು ತನಿಖೆಯ ಮೂಲಕವೇ ತಿಳಿದು ಬರಬೇಕಾಗಿದೆ.

ಓದಿ: ಘೋರ ವಾಮಾಚಾರ.. ಮಹಿಳೆಯ ಖಾಸಗಿ ಅಂಗಕ್ಕೆ ಕೈಹಾಕಿ ಕರುಳು ಹೊರಗೆಳೆದು ಕೊಂದ್ರು ಅಕ್ಕ-ಬಾವ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.