ETV Bharat / bharat

ನಮ್ಮ ಪ್ರಧಾನಿ ನೇಮಕಾತಿ ಪತ್ರಗಳನ್ನು ಕಂತುಗಳಲ್ಲಿ ವಿತರಿಸುತ್ತಿದ್ದಾರೆ.. ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ - ನೇಮಕಗೊಂಡ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ

ನಮ್ಮ ಪ್ರಧಾನಿ ಮೋದಿ ಅವರು ನೇಮಕಾತಿ ಪತ್ರಗಳನ್ನು ಕಂತುಗಳಲ್ಲಿ ವಿತರಿಸುತ್ತಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಖರ್ಗೆ ಅವರು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Kharge hits out at Centre  PM distributing appointment  PM distributing appointment letter in installments  ನೇಮಕಾತಿ ಪತ್ರಗಳನ್ನು ಕಂತುಗಳಲ್ಲಿ ವಿತರಿಸುತ್ತಿದ್ದಾರೆ  ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ  ಧಾನಿ ಮೋದಿ ಅವರು ನೇಮಕಾತಿ ಪತ್ರ  ಎಐಸಿಸಿ ಅಧ್ಯಕ್ಷ ಖರ್ಗೆ  ರ್ಗೆ ಅವರು ಕೇಂದ್ರದ ವಿರುದ್ಧ ವಾಗ್ದಾಳಿ  ಪ್ರಧಾನಿ ಮೋದಿ ಅವರು ವಿಡಿಯೋ ಕಾನ್ಫರೆನ್ಸಿಂಗ್  ನೇಮಕಗೊಂಡ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ  ಮೋದಿ ಸರ್ಕಾರದ ತಪ್ಪು ನೀತಿ
ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ
author img

By

Published : Jul 22, 2023, 3:52 PM IST

ನವದೆಹಲಿ: ಹೊಸದಾಗಿ ಸೇರ್ಪಡೆಗೊಂಡ 70,000 ಕ್ಕೂ ಹೆಚ್ಚು ನೇಮಕಾತಿ ಪತ್ರಗಳನ್ನು ವಿತರಿಸುವ ಕುರಿತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದರು. “ಬಿಜೆಪಿ ಒಂದು ವರ್ಷದಲ್ಲಿ ಎರಡು ಕೋಟಿ ಉದ್ಯೋಗಗಳನ್ನು ಒದಗಿಸುವ ಭರವಸೆ ಈಡೇರಿಸಿದೆ ಎಂದು ತೋರಿಸಲು ಪ್ರಧಾನಿ ಇದನ್ನು ಕಂತುಗಳ ರೂಪದಲ್ಲಿ ಹಂಚುತ್ತಿದ್ದಾರೆ” ಎಂದು ಹೇಳಿದರು.

ಶನಿವಾರ ಪ್ರಧಾನಿ ಮೋದಿ ಅವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಕೇಂದ್ರದ 'ರೋಜ್‌ಗಾರ್ ಮೇಳ'ದ ಮೂಲಕ ನೇಮಕಗೊಂಡ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರಗಳನ್ನು ವಿತರಿಸಿದ ನಂತರ ಖರ್ಗೆಯವರು ಈ ಆರೋಪವನ್ನು ಮಾಡಿದರು. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ದೇಶದಲ್ಲಿ ಕೇವಲ ಮೂರು ವರ್ಷಗಳಲ್ಲಿ ಸುಮಾರು 20,000 ಎಂಎಸ್‌ಎಂಇ ಉದ್ಯಮಗಳು ಮುಚ್ಚಿವೆ. ಸರ್ಕಾರಿ ಇಲಾಖೆಗಳಲ್ಲಿ ಬರೋಬ್ಬರಿ 30 ಲಕ್ಷ ಹುದ್ದೆಗಳು ಖಾಲಿ ಇವೆ. ಆದರೆ, ಮೋದಿ ಅವರು ಕಂತುಗಳಲ್ಲಿ ನೇಮಕಾತಿ ಪತ್ರಗಳನ್ನು ವಿತರಿಸುವ ಮೂಲಕ ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ನೀಡುವ ಭರವಸೆ ಈಡೇರಿಸುತ್ತಿದ್ದೇವೆ ಎಂದು ತೋರಿಸುತ್ತಿದ್ದಾರೆ ಎಂದು ಹೇಳಿದರು.

ರಾಜ್ಯಸಭೆಯ ವಿರೋಧ ಪಕ್ಷದ ನಾಯಕರೂ ಆಗಿರುವ ಖರ್ಗೆ ಮಾತನಾಡಿ, "ಅವುಗಳು ಸರ್ಕಾರದಿಂದ ಮಂಜೂರಾದ ಹುದ್ದೆಗಳು. ಅವುಗಳನ್ನು ಬಹಳ ಹಿಂದೆಯೇ ಭರ್ತಿ ಮಾಡಬೇಕಿತ್ತು. ಕಳೆದ ಒಂಬತ್ತು ವರ್ಷಗಳಲ್ಲಿ ಸ್ಟಾರ್ಟ್ - ಅಪ್ ಇಂಡಿಯಾ, ಸ್ಕಿಲ್ ಇಂಡಿಯಾ, ಸ್ಟ್ಯಾಂಡ್ - ಅಪ್ ಇಂಡಿಯಾ ಮುಂತಾದ ಕಾರ್ಯಕ್ರಮಗಳನ್ನು ಕಾರ್ಯಕ್ರಮಗಳಂತೆ ಆಯೋಜಿಸಲಾಗಿದೆ. ಆದರೆ, ಲಕ್ಷಗಟ್ಟಲೆ MSME ಗಳು ಮೋದಿ ಸರ್ಕಾರದ ತಪ್ಪು ನೀತಿಗಳ ಭಾರವನ್ನು ಹೊರಬೇಕಾಯಿತು" ಎಂದು ಆರೋಪಿಸಿದರು.

ಲಕ್ಷಾಂತರ ಯುವಕರು ಉದ್ಯೋಗ ಕಳೆದುಕೊಂಡಿದ್ದಾರೆ ಮತ್ತು ಅವರ ಭವಿಷ್ಯವು ಕತ್ತಲೆಯಾಗಿದೆ. ದೇಶದ ಯುವಕರು ಇನ್ನು ಮುಂದೆ ಸಹಿಸುವುದಿಲ್ಲ. ಈ ಯುವ ವಿರೋಧಿ ಸರ್ಕಾರ ಹೋಗಬೇಕು. ‘ಇಂಡಿಯಾ’ ಒಟ್ಟಾಗಿ ಬರುತ್ತದೆ, ‘ಇಂಡಿಯಾ’ ಗೆಲ್ಲುತ್ತದೆ" ಎಂದು ಖರ್ಗೆ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.

ಓದಿ: 81ನೇ ವಸಂತಕ್ಕೆ ಕಾಲಿಟ್ಟ ಮಲ್ಲಿಕಾರ್ಜುನ ಖರ್ಗೆ: ಪ್ರಧಾನಿ ಮೋದಿ ಸೇರಿ ಗಣ್ಯರಿಂದ ಶುಭಾಶಯ

ಮಧ್ಯಪ್ರದೇಶ ವಿಧಾನಸಭೆ ಚುನಾವಣೆ 2023: ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯಪ್ರದೇಶದ ವಿಧಾನಸಭಾ ಚುನಾವಣೆಗೆ ಸಜ್ಜಾಗಿದೆ. ಈ ಬಾರಿ ಎರಡೂ ಪಕ್ಷಗಳು ಬುಂದೇಲ್‌ಖಂಡದಲ್ಲಿ ಬೃಹತ್ ಯೋಜನೆಗಳನ್ನು ರೂಪಿಸುತ್ತಿವೆ. ಆಗಸ್ಟ್‌ನಲ್ಲಿ ಪ್ರಧಾನಿ ಮೋದಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರ ಭೇಟಿ ಈ ದಿಕ್ಕಿನತ್ತ ಬೊಟ್ಟು ಮಾಡುತ್ತಿವೆ.

ಆಗಸ್ಟ್ ತಿಂಗಳಲ್ಲಿ ಬುಂದೇಲ್‌ಖಂಡ್‌ಗೆ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಯನ್ನು ಪ್ರಸ್ತಾಪಿಸಲಾಗಿದೆ. ಇದರೊಂದಿಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಅದೇ ತಿಂಗಳಲ್ಲಿ ಸಾಗರಕ್ಕೆ ಆಗಮಿಸಲಿದ್ದಾರೆ. ಅಷ್ಟೇ ಅಲ್ಲ ಪ್ರಮುಖ ರಾಜಕೀಯ ಪಕ್ಷಗಳಲ್ಲದೇ ಪ್ರಾದೇಶಿಕ ಪಕ್ಷಗಳೂ ಈ ಕ್ಷೇತ್ರದ ಮೇಲೆ ಕಣ್ಣಿಟ್ಟಿವೆ. ಈ ಕಾರಣಕ್ಕಾಗಿ ಎಸ್ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಕೂಡ ಆಗಸ್ಟ್ ಮೊದಲ ವಾರದಲ್ಲಿಯೇ ಸಾಗರ ತಲುಪಲಿದ್ದಾರೆ.

ಸಾಗರಕ್ಕೆ ಭೇಟಿ ನೀಡಲಿರುವ ಗಣ್ಯರು: ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಆಗಸ್ಟ್ 5 ಮತ್ತು 6 ರಂದು ಸಾಗರಕ್ಕೆ ಭೇಟಿ ನೀಡಲಿದ್ದಾರೆ. ಆಗಸ್ಟ್ 12 ರಂದು ಪ್ರಧಾನಿ ನರೇಂದ್ರ ಮೋದಿಯವರ ಭೇಟಿ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಗಸ್ಟ್ 13 ರಂದು ಬುಂದೇಲ್‌ಖಂಡದ ಸಾಗರ ತಲುಪಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.