ETV Bharat / bharat

ಮಂಗಳಮುಖಿಯರ ದೂರುಗಳನ್ನು ಶೀಘ್ರ ಬಗೆಹರಿಸಿ: ಕೇರಳ ಪೊಲೀಸ್ ಮಹಾನಿರ್ದೇಶಕ - ಕೇರಳ ಪೊಲೀಸ್ ಮಹಾನಿರ್ದೇಶಕ ಲೋಕನಾಥ್ ಬೆಹೆರಾ

ಮಂಗಳಮುಖಿಯರಿಂದ ಬರುವ ದೂರಗಳನ್ನು ಶೀಘ್ರ ವಿಲೇವಾರಿ ಮಾಡುವಂತೆ ಜಿಲ್ಲಾ ಪೊಲೀಸರಿಗೆ ಕೇರಳ ಪೊಲೀಸ್ ಮಹಾನಿರ್ದೇಶಕ ಲೋಕನಾಥ್ ಬೆಹೆರಾ ಸೂಚಿಸಿದ್ದಾರೆ.

loknath behera
ಲೋಕನಾಥ್ ಬೆಹೆರಾ
author img

By

Published : Nov 10, 2020, 5:34 PM IST

ತಿರುವನಂತಪುರಂ: ಮಂಗಳ ಮುಖಿಯರ ಮೇಲಿನ ದೂರುಗಳನ್ನು ಪರಿಹರಿಸಲು ಯಾವುದೇ ರೀತಿಯಲ್ಲಿ ವಿಳಂಬ ಮಾಡಬಾರದು ಎಂದು ಕೇರಳ ಪೊಲೀಸ್ ಮಹಾನಿರ್ದೇಶಕ ಲೋಕನಾಥ್ ಬೆಹೆರಾ ಸೂಚಿಸಿದ್ದಾರೆ.

ತೃತೀಯ ಲಿಂಗಿಗಳು ದೂರು ನೀಡುವಾಗ ಪೊಲೀಸ್ ಸಿಬ್ಬಂದಿ ತಪ್ಪು ನಡವಳಿಕೆ ತೋರಿದರೆ ಅಂಥ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಎಲ್ಲಾ ಜಿಲ್ಲೆಯ ಪೊಲೀಸ್ ಮುಖ್ಯಸ್ಥರಿಗೆ ಲೋಕನಾಥ್ ಬೆಹೆರಾ ಸೂಚಿಸಿದ್ದಾರೆ. ತೃತೀಯ ಲಿಂಗಿಗಳಿಂದ ದೂರು ದಾಖಲಾದಾಗ ಅದನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಕೆಲವು ಬಾರಿ ಅವರಿಗೆ ನ್ಯಾಯ ದೊರಕುವುದಿಲ್ಲ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ಲೋಕನಾಥ್ ಬೆಹೆರಾ ಈ ಸೂಚನೆ ನೀಡಿದ್ದಾರೆ.

ಕೆಲವು ತೃತೀಯಲಿಂಗಿ ಹೋರಾಟಗಾರರು ಪೊಲೀಸ್ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ದೂರು ನೀಡಿದ್ದರು. ಹೀಗಾಗಿ ಅವರ ದೂರುಗಳನ್ನು ಸ್ವೀಕರಿಸದ ಹಾಗೂ ಬೇಜವಾಬ್ದಾರಿ ತೋರುವ ಪೊಲೀಸರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಡಿಜಿಪಿ ಎಚ್ಚರಿಕೆ ನೀಡಿದ್ದಾರೆ.

ದೇಶದಲ್ಲಿ ಮಂಗಳಮುಖಿಯರಿಗಾಗಿ ಹೊಸ ನೀತಿಯನ್ನು ಅನಾವರಣಗೊಳಿಸಿದ ಮೊದಲ ರಾಜ್ಯ ಕೇರಳ ಆಗಿದ್ದು, ಮಂಗಳಮುಖಿಯರಿಗೆ ಇರುವ ಸಾಮಾಜಿಕ ಕಳಂಕವನ್ನು ಕೊನೆಗೊಳಿಸಲು ಯತ್ನಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.