ಕೊಟ್ಟಾಯಂ (ಕೇರಳ) : ಕೇರಳದ ಖ್ಯಾತ ಉರಗ ತಜ್ಞ ವಾವಾ ಸುರೇಶ್ ಅವರಿಗೆ ಜನವರಿ 31(ಸೋಮವಾರ)ರಂದು ನಾಗರಹಾವು ಕಡಿದು ಅವರ ಆರೋಗ್ಯ ಸ್ಥಿತಿ ಗಂಭೀರವಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಕೊಟ್ಟಾಯಂ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಾವಾ ಸುರೇಶ್ ಇದೀಗ ಚೇತರಿಸಿಕೊಂಡಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಸೋಮವಾರದಂದು ಕೊಟ್ಟಾಯಂನ ಕುರಿಚಿಯಲ್ಲಿ ಕಂಡು ಬಂದಿದ್ದ ನಾಗರ ಹಾವನ್ನು ಹಿಡಿಯುವ ವೇಳೆ ಹಾವು ಸುರೇಶ್‌ಗೆ ಕಚ್ಚಿತ್ತು. ತಕ್ಷಣ ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಯಿತು. ಬಳಿಕ ಆರೋಗ್ಯ ಸ್ಥಿತಿ ಗಂಭೀರವಾದ ಕಾರಣ ಕೊಟ್ಟಾಯಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಿ, ಚಿಕಿತ್ಸೆ ಮುಂದುವರಿಸಲಾಯಿತು.
ಇದನ್ನೂ ಓದಿ: Video- ವಾವಾ ಸುರೇಶ್‌ಗೆ ಕಚ್ಚಿದ ನಾಗರಹಾವು.. ಉರಗ ತಜ್ಞನ ಸ್ಥಿತಿ ಗಂಭೀರ
ಅವರ ದೇಹವೀಗ ಹಾವಿನ ವಿಷದಿಂದ ಮುಕ್ತವಾಗಿದೆ. ಹಾವು ಕಚ್ಚಿದ ಗಾಯವನ್ನು ಒಣಗಿಸಲು ಮಾತ್ರ ಈಗ ಔಷಧ ನೀಡಲಾಗುತ್ತಿದೆ. ಅವರ ಜ್ಞಾಪಕ ಶಕ್ತಿ ಮತ್ತು ಮಾತನಾಡುವ ಸಾಮರ್ಥ್ಯ ಚೆನ್ನಾಗಿದೆ. ಅವರು ಈಗ ನಡೆಯಬಹುದು. ಎರಡು ದಿನಗಳ ವೀಕ್ಷಣೆಯ ನಂತರ ಅವರನ್ನು ಬಹುಶಃ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುತ್ತದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.