ಶಬರಿಮಲೆ (ಕೇರಳ): ಉತ್ತರಂ ಹಬ್ಬದ ಪ್ರಯುಕ್ತ ಶಬರಿಮಲೆ ದೇವಸ್ಥಾನದ ಬಾಗಿಲು ತೆಗೆದಿವೆ.
ಇಂದಿನಿಂದ ಕೇರಳದಲ್ಲಿ ಉತ್ತರಂ ಹಬ್ಬ ಸಂಭ್ರಮ ನಡೆಯಲಿದೆ. ಹೀಗಾಗಿ ಇಂದು ಬೆಳಗ್ಗೆಯಿಂದಲೇ ಸುಪ್ರಸಿದ್ಧಿಯಾದ ಶಬರಿಮಲೆ ದೇವಸ್ಥಾನದ ಬಾಗಿಲು ತೆರೆದಿವೆ.
ಕೋವಿಡ್ ಮಾರ್ಗ ಸೂಚಿಗಳ ಪ್ರಕಾರ ಭಕ್ತರು ಶಬರಿಮಲೆ ಅಯ್ಯಪ್ಪನ ದರ್ಶನ ಪಡೆಯುತ್ತಿದ್ದಾರೆ. ಇನ್ನು ಅಯ್ಯಪ್ಪ ಸ್ವಾಮಿಯ ಮಾರ್ಚ್ 28ರವರೆಗೆ ಮಾತ್ರ ಸಿಗಲಿದ್ದು, ಆ ಬಳಿಕ ಮತ್ತೆ ಅಯ್ಯಪ್ಪನ ದೇಗುಲ ಬಂದ್ ಆಗುವುದಾಗಿ ದೇವಾಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.
ಇನ್ನು ಭಕ್ತರು ಅಯ್ಯಪ್ಪನ ದರ್ಶನ ಪಡೆಯಬೇಕಾದರೆ ಕೋವಿಡ್ ನೆಗೆಟಿವ್ ಪತ್ರ ಕಡ್ಡಾಯವಾಗಿ ತೆಗೆದುಕೊಂಡು ಹೋಗಬೇಕಾಗಿದೆ. ಇಲ್ಲವಾದಲ್ಲಿ ದರ್ಶನಕ್ಕೆ ನಿರಾಕರಿಸುವುದಾಗಿ ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.