ಇಡುಕ್ಕಿ/ಕೇರಳ : ಮುನ್ನಾರ್ನಿಂದ ಉಡುಮಲ್‌ಪೇಟೆ ಮಾರ್ಗವಾಗಿ ತೆರಳುತ್ತಿದ್ದ ಕೇರಳ ರಸ್ತೆ ಸಾರಿಗೆ ಬಸ್‌ಗೆ ಮುನ್ನಾರ್ ಡಿವೈಎಸ್‌ಪಿ ಕಚೇರಿ ಬಳಿ ಕಾಡಾನೆಯೊಂದು ಎದುರಾಗಿದೆ. ಕೂಡಲೇ ಸಮಯ ಪ್ರಜ್ಞೆ ಮೆರೆದ ಚಾಲಕ, ಯಾವುದೇ ರೀತಿ ಹಾರ್ನ್ ಮಾಡದೆ ಆನೆ ಸ್ಥಳದಿಂದ ತೆರಳುವವರೆಗೆ ಕಾದು ಒಂಟಿ ಸಲಗ ಪಕ್ಕಕ್ಕೆ ಹೋದ ಬಳಿಕ ವಾಹನ ಚಲಾಯಿಸಿದ್ದಾರೆ.
ಸರ್ಕಾರಿ ಸಾರಿಗೆ ಬಸ್ ಸಂಚರಿಸುತ್ತಿದ್ದ ವೇಳೆ ಒಂಟಿ ಸಲಗವೊಂದು ಮಾರ್ಗಮಧ್ಯೆ ನಿಂತಿತ್ತು. ಆನೆಯನ್ನು ನೋಡಿದ ಚಾಲಕ ಬಸ್ ನಿಲ್ಲಿಸಿದ್ದಾರೆ. ನಂತರ ನಿಧಾನವಾಗಿ ಬಸ್ಸಿನವರೆಗೆ ನಡೆದುಕೊಂಡು ಬಂದ ಕಾಡಾನೆ, ತನ್ನ ದಂತದಿಂದ ಬಸ್ ಗಾಜನ್ನು ತಳ್ಳಿದೆ. ಪರಿಣಾಮ ಬಸ್ನ ಮುಂಭಾಗದ ಗಾಜು ಜಖಂಗೊಂಡಿದೆ.
ಈ ವೇಳೆ ಚಾಲಕ ಹಾರ್ನ್ ಮತ್ತು ಆನೆಯನ್ನು ಓಡಿಸಲು ಪ್ರಚೋದಿಸದೆ ಸುಮ್ಮನೆ ಇದ್ದರು. ಸ್ವಲ್ಪ ಸಮಯದ ನಂತರ ಪಾದಯಪ್ಪ ರಸ್ತೆ ಬದಿಗೆ ಒಂಟಿ ಸಲಗ ತೆರಳಿದ್ದು, ಪ್ರಯಾಣಿಕರು ನಿಟ್ಟುಸಿರು ಬಿಟ್ಟರು. ಬಳಿಕ ಆನೆ ರಸ್ತೆ ಪಕ್ಕಕ್ಕೆ ಹೋಗುತ್ತಿದ್ದಂತೆ ಬಸ್ ಸ್ಟಾರ್ಟ್ ಮಾಡಲಾಯಿತು.
ಇದನ್ನೂ ಓದಿ: ಸ್ಥಳೀಯರೊಂದಿಗೆ ಫುಟ್ಬಾಲ್ ಆಡುತ್ತಿರುವ ಆನೆ ಮರಿ: ವಿಡಿಯೋ ನೋಡಿ