ಎರ್ನಾಕುಲಂ(ಕೇರಳ): ಬೇಸಿಗೆಯ ದಿನಗಳಲ್ಲಿ ಸುಡುವ ಬಿಸಿಲಿನಲ್ಲಿ ಸಂಚಾರ ದಟ್ಟಣೆ ನಿರ್ವಹಿಸುವುದು ಟ್ರಾಫಿಕ್ ಪೊಲೀಸರಿಗೆ ನೋವಿನ ಸಂಗತಿಯೇ ಸರಿ. ಈ ಸಮಸ್ಯೆಗೆ ಕೇರಳ ಪೊಲೀಸರು ಪರಿಹಾರವೊಂದನ್ನು ಕಂಡು ಕೊಂಡಿದ್ದಾರೆ.
ಹೌದು, ಸೌರಶಕ್ತಿಯನ್ನು ಬಳಸಿಕೊಂಡು ಒಳಗೆ ಫ್ಯಾನ್‌ಗಳನ್ನು ಹೊಂದಿರುವ ಸೋಲಾರ್ ಟ್ರಾಫಿಕ್ ಅಂಬ್ರೆಲಾವನ್ನು ಪರಿಚಯಿಸಿದ್ದಾರೆ. ಆ ಛತ್ರಿಯಲ್ಲಿ ನೀರಿನ ಬಾಟಲ್ ಇಡುವ ವ್ಯವಸ್ಥೆ ಕೂಡಾ ಇದೆ. ಎರ್ನಾಕುಲಂ ಪಟ್ಟಣದಲ್ಲಿ ಇಂತಹ ಐದು ಛತ್ರಿಗಳನ್ನು ಇರಿಸಲಾಗಿದೆ.
ಈ ಛತ್ರಿಯ ಮೇಲ್ಭಾಗದಲ್ಲಿ ಸೌರ ಫಲಕಗಳನ್ನು ಜೋಡಿಸಲಾಗಿದ್ದು, ಸೌರ ಶಕ್ತಿಯನ್ನು ಬಳಸಿಕೊಂಡು ಛತ್ರಿಯಲ್ಲಿನ ಫ್ಯಾನ್ ಕಾರ್ಯ ನಿರ್ವಹಿಸುತ್ತದೆ. ಬ್ಯಾಟರಿ ಸಹ ಅಳಡಿಸಲಾಗಿದೆ. ಛತ್ರಿಯೊಳಗೆ ಆಸನ ಮತ್ತು ಲೈಟ್ ಒದಗಿಸುವ ಸಾಧ್ಯತೆಗಳನ್ನು ಅಧಿಕಾರಿಗಳು ಅನ್ವೇಷಿಸುತ್ತಿದ್ದಾರೆ. ಇದರಿಂದ ಪೊಲೀಸರು ಸ್ವಲ್ಪ ಸಮಯ ಕುಳಿತುಕೊಂಡು ವಿಶ್ರಮಿಸಬಹುದು ಅಂತಾರೆ ಈ ಛತ್ರಿ ಬಳಕೆ ಮಾಡಿದ ಟ್ರಾಫಿಕ್ ಪೊಲೀಸರು.
ಇದನ್ನೂ ಓದಿ: ಅಡುಗೆ ಕೋಣೆ ಕಿಟಕಿ ಮುರಿದು ಸೊಂಡಲಿನಿಂದಲೇ ಆಹಾರ ಹುಡುಕಾಡಿದ ಆನೆ - ವಿಡಿಯೋ
ಇಂತಹ ಛತ್ರಿಗಳನ್ನು ನಗರದ ಇನ್ನೂ ಅನೇಕ ಸ್ಥಳಗಳಲ್ಲಿ ಒದಗಿಸಲಾಗುವುದು ಮತ್ತು ಯೋಜನೆಯ ಯಶಸ್ಸಿನ ಆಧಾರದ ಮೇಲೆ ಇದನ್ನು ಇತರ ಜಿಲ್ಲೆಗಳಿಗೂ ವಿಸ್ತರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.