ತಿರುವನಂತಪುರಂ (ಕೇರಳ): ದೇವರನಾಡಿನಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದು, ಸದ್ಯದ ಅಂಕಿ ಅಂಶಗಳ ಪ್ರಕಾರ ಆಡಳಿತಾರೂಢ ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್ (ಎಲ್‌ಡಿಎಫ್) ಮೈತ್ರಿಕೂಟ ಮೇಲುಗೈ ಸಾಧಿಸಿದೆ.
ಯುಡಿಎಫ್ ಬಹುತೇಕ ಯಥಾಸ್ಥಿತಿ ಹೊಂದಿದೆ. ಬಿಜೆಪಿಯ ಬಲ ತುಸು ಹೆಚ್ಚಾಗಿದೆ. ಈ ಮೂಲಕ ಕೇಸರಿ ಪಾಳಯ ಕೂಡಾ ಕೇರಳ ರಾಜಕೀಯದಲ್ಲಿ ಗಮನಾರ್ಹ ಪಕ್ಷವಾಗಿ ಹೊರಹೊಮ್ಮಿದೆ.
ಓದಿ: ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ: ಆಡಳಿತಾರೂಢ ಎಲ್‌ಡಿಎಫ್-ವಿರೋಧ ಪಕ್ಷಗಳ ಪೈಪೋಟಿ
ತಿರುವನಂತರಪುರ ಪಾಲಿಕೆಯನ್ನು ಉಳಿಸಿಕೊಂಡಿರುವ ಎಲ್‌ಡಿಎಫ್ ಮೈತ್ರಿಕೂಟ ನೂರು ವಾರ್ಡ್ಗಳಲ್ಲಿ 51ರಲ್ಲಿ ಜಯಭೇರಿ ಕಂಡಿದೆ. ಎನ್ಡಿಎ ಮೈತ್ರಿಕೂಟ 34 ವಾರ್ಡ್ಗಳಲ್ಲಿ, ಯುಡಿಎಫ್ 10 ವಾರ್ಡ್ಗಳಲ್ಲಿ ಹಾಗೂ ಇತರೇ ಪಕ್ಷಗಳು ಉಳಿದ ವಾರ್ಡ್ಗಳಲ್ಲಿ ಜಯ ದಾಖಲಿಸಿವೆ.
ಸ್ಥಳೀಯ ಸಂಸ್ಥೆಗಳ ಚುನಾವಣೆಯ ಇತ್ತೀಚಿನ ಫಲಿತಾಂಶ:
ಗ್ರಾಮ ಪಂಚಾಯತ್-941
- ಎಲ್‌ಡಿಎಫ್ -522
- ಯುಡಿಎಫ್ -363
- ಎನ್ಡಿಎ-23
- ಇತರೆ-32
ಬ್ಲಾಕ್ ಪಂಚಾಯತ್-152
- ಎಲ್‌ಡಿಎಫ್-108
- ಯುಡಿಎಫ್-44
ಜಿಲ್ಲಾ ಪಂಚಾಯತ್-14
- ಎಲ್‌ಡಿಎಫ್-10
- ಯುಡಿಎಫ್-4
ಮುನ್ಸಿಪಾಲಿಟಿ-86
- ಎಲ್‌ಡಿಎಫ್-35
- ಯುಡಿಎಫ್-45
- ಎನ್ಡಿಎ -2
- ಇತರೆ -4
ಕಾರ್ಪೋರೇಷನ್- 6
- ಎಲ್‌ಡಿಎಫ್-3
- ಯುಡಿಎಫ್-3
ಕೇರಳದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಮೂರು ಹಂತಗಳಲ್ಲಿ ನಡೆದಿದೆ. ಒಟ್ಟು 941 ಗ್ರಾಮ ಪಂಚಾಯತ್ ಸ್ಥಾನಗಳು, 152 ಬ್ಲಾಕ್ ಪಂಚಾಯತ್ ಸ್ಥಾನಗಳು, 14 ಜಿಲ್ಲಾ ಪಂಚಾಯತ್, 86 ಮುನ್ಸಿಪಾಲಿಟಿಗಳು ಹಾಗು ಆರು ಕಾರ್ಪೋರೇಶನ್‌ಗಳಿಗೆ ಮತದಾನ ನಡೆದಿತ್ತು. ಮೊದಲ ಹಂತದಲ್ಲಿ ಶೇ 72.67 ಮತದಾನವಾದರೆ, ಎರಡನೇ ಹಂತದಲ್ಲಿ ಶೇ 76.38, ಮೂರನೇ ಮತ್ತು ಅಂತಿಮ ಹಂತದಲ್ಲಿ ಶೇ 78.64 ರಷ್ಟು ಪೋಲಿಂಗ್ ಆಗಿತ್ತು. ಈಗ ಎಲ್ಲಾ ಚುನಾವಣೆಗಳ ಫಲಿತಾಂಶ ಬಹಿರಂಗವಾಗುತ್ತಿದೆ.