ತಿರುವನಂತಪುರಂ (ಕೇರಳ): ಯಾವುದೇ ದೂಷಣೆ ಕೇಳಿ ಬಂದರೆ ಅದಕ್ಕೆ ಶಿರಚ್ಛೇದವೇ ಶಿಕ್ಷೆ ಎಂಬುದನ್ನು ಮಕ್ಕಳಿಗೆ ಮದರಸಾಗಳಲ್ಲಿ ಕಲಿಸಿಕೊಡಲಾಗುತ್ತದೆ. ಇದೇ ದೇವರ ನಿಯಮ ಎಂದೂ ಹೇಳಿಕೊಡಲಾಗುತ್ತದೆ ಎಂದು ಕೇರಳ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ತಿಳಿಸಿದ್ದಾರೆ.
ರಾಜಸ್ಥಾನದ ಉದಯಪುರದಲ್ಲಿ ಇಬ್ಬರು ಮುಸ್ಲಿಂ ಮತಾಂಧರು ಟೈಲರ್ ಕನ್ಹಯ್ಯ ಲಾಲ್ ಅವರ ಶಿರಚ್ಛೇದ ಮಾಡಿದ ದುಷ್ಕೃತ್ಯದ ಬಗ್ಗೆ ಪ್ರತಿಕ್ರಿಯಿಸಿರುವ ಅವರು, "ಇಂತಹ ರೋಗಲಕ್ಷಣಗಳು ಕಂಡು ಬಂದಾಗ ಮಾತ್ರವೇ ನಾವು ಚಿಂತಿಸುತ್ತೇವೆ. ಆದರೆ, ಅದರ ಆಳವನ್ನು ತಿಳಿದುಕೊಳ್ಳಲು ನಾವು ನಿರಾಕರಿಸುತ್ತೇವೆ. ಆದ್ದರಿಂದ ಮದರಸಾಗಳಲ್ಲಿ ಮಕ್ಕಳಿಗೆ ಏನು ಕಲಿಸಿಕೊಡುತ್ತಾರೆ ಎಂಬುವುದನ್ನು ಪರಿಶೀಲಿಸುವ ಅಗತ್ಯವಿದೆ" ಎಂದು ಹೇಳಿದರು.
ಮೊಹಮ್ಮದ್ ಪೈಗಂಬರ್ ಬಗೆಗಿನ ವಿವಾದಿತ ಹೇಳಿಕೆ ನೀಡಿದ್ದ ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಪೋಸ್ಟ್ ಹಂಚಿಕೊಂಡ ಕಾರಣಕ್ಕೆ ಇಬ್ಬರು ಮತಾಂಧರು ರಾಜಸ್ಥಾನದ ಟೈಲರ್ ಕನ್ಹಯ್ಯ ಲಾಲ್ ಅವರನ್ನು ಶಿರಚ್ಛೇದ ಮಾಡಿದ್ದರು. ಈಗಾಗಲೇ ಹಂತಕರಾದ ಗೌಸ್ ಮಹಮ್ಮದ್ ಮತ್ತು ರಿಯಾಜ್ ಅಖ್ತರ್ ಎಂಬಿಬ್ಬರನ್ನು ರಾಜಸ್ಥಾನ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: ಪೊಲೀಸ್ ಬಿಗಿ ಭದ್ರತೆ ನಡುವೆ ಕನ್ಹಯ್ಯ ಲಾಲ್ ಅಂತ್ಯಕ್ರಿಯೆ.. ಅಪಾರ ಸಂಖ್ಯೆಯ ಜನರು ಭಾಗಿ