ತಿರುವನಂತಪುರಂ(ಕೇರಳ): ದೇಶದ ಮೊದಲ ಡ್ರೋನ್ ಫೋರೆನ್ಸಿಕ್ ಲ್ಯಾಬ್ ಅನ್ನು ಕೇರಳದಲ್ಲಿ ಸ್ಥಾಪಿಸಲಾಗಿದ್ದು, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿರುವನಂತಪುರಂನಲ್ಲಿ ಪ್ರಯೋಗಾಲಯವನ್ನು ಉದ್ಘಾಟಿಸಿದರು.
ಈ ಫೋರೆನ್ಸಿಕ್ ಲ್ಯಾಬ್ನ ಮುಖಾಂತರ ಅವಶೇಷಗಳಿಂದಲೂ ಡ್ರೋನ್ ಅನ್ನು ಗುರ್ತಿಸಬಹುದಾಗಿದೆ ಮತ್ತು ಅದರಿಂದ ಡೇಟಾವನ್ನು ಸಂಗ್ರಹಿಸಬಹುದಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಯೋಗಾಲಯವನ್ನು ಉದ್ಘಾಟಿಸಿ ಮಾತನಾಡಿದ ಸಿಎಂ ಪಿಣರಾಯಿ ವಿಜಯನ್, ದೇಶವಿರೋಧಿ ಚಟುವಟಿಕೆಗಳಿಗೆ ಡ್ರೋನ್‌ಗಳ ಬಳಕೆ ಹೆಚ್ಚುತ್ತಿರುವುದರಿಂದ ಮತ್ತು ಇಂತಹ ಸವಾಲುಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಈ ವಿಧಿವಿಜ್ಞಾನ ಪ್ರಯೋಗಾಲಯವು ನಮಗೆ ಸಹಾಯ ಮಾಡುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
-
കേരള പോലീസ് ഡ്രോണ് ഫോറന്സിക് ലാബ്:
— Kerala Police (@TheKeralaPolice) August 13, 2021 " class="align-text-top noRightClick twitterSection" data="
ഇന്ത്യയിൽ ഡ്രോണ് ഫോറന്സിക് മേഖലയിൽ ലാബിനു തുടക്കം കുറിക്കുന്ന
ആദ്യ സംസ്ഥാനമായി കേരളം മാറുകയാണ്. pic.twitter.com/a8WKDKZqK8
">കേരള പോലീസ് ഡ്രോണ് ഫോറന്സിക് ലാബ്:
— Kerala Police (@TheKeralaPolice) August 13, 2021
ഇന്ത്യയിൽ ഡ്രോണ് ഫോറന്സിക് മേഖലയിൽ ലാബിനു തുടക്കം കുറിക്കുന്ന
ആദ്യ സംസ്ഥാനമായി കേരളം മാറുകയാണ്. pic.twitter.com/a8WKDKZqK8കേരള പോലീസ് ഡ്രോണ് ഫോറന്സിക് ലാബ്:
— Kerala Police (@TheKeralaPolice) August 13, 2021
ഇന്ത്യയിൽ ഡ്രോണ് ഫോറന്സിക് മേഖലയിൽ ലാബിനു തുടക്കം കുറിക്കുന്ന
ആദ്യ സംസ്ഥാനമായി കേരളം മാറുകയാണ്. pic.twitter.com/a8WKDKZqK8
ಕೇರಳ ಪೊಲೀಸ್ ಸೈಬರ್ ಡೋಮ್ ಅಡಿಯಲ್ಲಿ ಡ್ರೋನ್ ಫೋರೆನ್ಸಿಕ್ ಲ್ಯಾಬ್ ಅನ್ನು ಸ್ಥಾಪಿಸಲಾಗಿದ್ದು, ಇಲ್ಲಿನ ತಂತ್ರಜ್ಞಾನದ ಮೂಲಕ ವಿವಿಧ ಡ್ರೋನ್‌ಗಳನ್ನು ಗುರ್ತಿಸಬಹುದಾಗಿದೆ ಮತ್ತು ಅವುಗಳಿಂದ ಡೇಟಾವನ್ನು ಸಂಗ್ರಹಿಸಬಹುದಾಗಿದೆ.
ಪ್ರಯೋಗಾಲಯವು ಡ್ರೋನ್ ಮೆಮೊರಿ, ಅದರ ಸಾಫ್ಟ್‌ವೇರ್ ಡೇಟಾ, ಹಾರ್ಡ್‌ವೇರ್ ಡೇಟಾ ಮತ್ತು ಡ್ರೋನ್ ಹಾರಿದ ಮಾರ್ಗಗಳು ಮತ್ತು ಹಾರಿಸಿದ ಮಾರ್ಗಗಳನ್ನು ವಿಶ್ಲೇಷಿಸುವ ಸಾಮರ್ಥ್ಯ ಹೊಂದಿದೆ.
ಕಾನೂನು ಮತ್ತು ಸುವ್ಯವಸ್ಥೆ ನಿರ್ವಹಣೆ ಹಾಗೂ ಕ್ರೌಡ್ ಮ್ಯಾನೇಜ್‌ಮೆಂಟ್‌ಗಾಗಿ ಬಳಸಬಹುದಾದ ಡ್ರೋನ್‌ಗಳನ್ನು ಅಭಿವೃದ್ಧಿಪಡಿಸಲು ಕೇರಳ ಪೊಲೀಸರು ಯೋಜನ ರೂಪಿಸುತ್ತಿದ್ದಾರೆ ಎಂದು ಸಿಎಂ ಪಿಣರಾಯಿ ವಿಜಯನ್ ಹೇಳಿದ್ದಾರೆ.
ಸಿಎಂ ಪಿಣರಾಯಿ ವಿಜಯನ್, ಡಿಜಿಪಿ ಮತ್ತು ಇತರ ಹಿರಿಯ ಪೊಲೀಸ್ ಅಧಿಕಾರಿಗಳು ಪ್ರಯೋಗಾಲಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ಭಾಗವಾಗಿ ಡ್ರೋನ್ ಪ್ರದರ್ಶನ ಮತ್ತು ಏರ್ ಶೋ ಕೂಡಾ ನಡೆಸಲಾಯಿತು.
ಇದನ್ನೂ ಓದಿ: ಅಮರಾವತಿಯಲ್ಲಿ ಅಪೌಷ್ಟಿಕತೆ: ಮೂರೇ ತಿಂಗಳಲ್ಲಿ 49 ಮಕ್ಕಳ ಮರಣ ಮೃದಂಗ!