ETV Bharat / bharat

ಕೇರಳ ವೈದ್ಯೆ ಕೊಂದ ಕುಡುಕ ಹಂತಕನಿಗೆ 14 ದಿನ ನ್ಯಾಯಾಂಗ ಬಂಧನ, ಕೊಲೆ ಕಾರಣ ನಿಗೂಢ

ಕೇರಳದಲ್ಲಿ ಯುವ ವೈದ್ಯೆಯ ಹತ್ಯೆ ಪ್ರಕರಣದ ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಪೊಲೀಸರು ಕೊಲೆಗೆ ಕಾರಣ ತಿಳಿಯಲು ವಿಚಾರಣೆ ನಡೆಸುತ್ತಿದ್ದಾರೆ.

ಕೇರಳ ವೈದ್ಯೆ ಹಂತಕ
ಕೇರಳ ವೈದ್ಯೆ ಹಂತಕ
author img

By

Published : May 11, 2023, 9:56 AM IST

ತಿರುವನಂತಪುರಂ (ಕೇರಳ): ಚಿಕಿತ್ಸೆ ನೀಡುತ್ತಿದ್ದ ವೈದ್ಯೆಯನ್ನು ಸರ್ಜಿಕಲ್ ಬ್ಲೇಡ್​ ಮತ್ತು ವೈದ್ಯಕೀಯ ಸಲಕರಣೆಗಳಿಂದ ಕೊಂದ ಕುಡುಕ ಆರೋಪಿಗೆ ಕೊಟ್ಟಾರಕ್ಕರ ಮ್ಯಾಜಿಸ್ಟ್ರೇಟ್ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಆರೋಪಿಯನ್ನು ಪೂಜಾಪುರ ಜೈಲಿಗೆ ಸ್ಥಳಾಂತರಿಸಲಾಗಿದೆ.

ಪ್ರಕರಣವೇನು?: ಬುಧವಾರ ಕೊಲೆ ಆರೋಪಿ ಸಂದೀಪ್​ ತನ್ನ ಮೇಲೆ ಹಲ್ಲೆಯಾಗಿದೆ, ರಕ್ಷಿಸಿ ಎಂದು ಪೊಲೀಸರಿಗೆ ಕರೆ ಮಾಡಿದ್ದ. ಪೊಲೀಸರು ಆತನನ್ನು ಮನೆಯಿಂದ ರಕ್ಷಣೆ ಮಾಡಿದ್ದರು. ಗಾಯಗೊಂಡ ಸ್ಥಿತಿಯಲ್ಲಿದ್ದ ಸಂದೀಪ್​ನನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಿಸಲಾಗುತ್ತಿತ್ತು. ಈ ವೇಳೆ ಆರೋಪಿ ಚಿಕಿತ್ಸೆ ನೀಡುತ್ತಿದ್ದ 22 ವರ್ಷದ ವೈದ್ಯೆ ವಂದನಾ ದಾಸ್ ಅವರ ಮೇಲೆ ಏಕಾಏಕಿ ದಾಳಿ ಮಾಡಿದ್ದ.

ಚಿಕಿತ್ಸೆಗೆಂದು ಬಳಸಲು ಇಟ್ಟಿದ್ದ ಸರ್ಜಿಕಲ್​ ಬ್ಲೇಡ್​ನಿಂದ ವೈದ್ಯೆಯ ಕತ್ತಿಗೆ ಇರಿದಿದ್ದ. ಎದೆಭಾಗಕ್ಕೂ ಚಾಕುವಿನಿಂದ ಚುಚ್ಚಿದ್ದ. ವೈದ್ಯೆ ಅಲ್ಲಿಂದ ಹೊರಗೋಡಿ ಬಂದರೂ ಬಿಡದ ಕಿರಾತಕ ದಾಳಿ ಮಾಡಿದ್ದ. ಬಿಡಿಸಲು ಬಂದ ನಾಲ್ವರ ಮೇಲೂ ಚಾಕುವಿನಿಂದ ಗಾಯಗೊಳಿಸಿದ್ದಾನೆ. ಪೊಲೀಸರು ಹರಸಾಹಸಪಟ್ಟು ಆತನನ್ನು ಬಂಧಿಸಿದ್ದರು.

ತೀವ್ರವಾಗಿ ಗಾಯಗೊಂಡಿದ್ದ ವೈದ್ಯೆ ವಂದನಾರನ್ನು ತುರ್ತು ಚಿಕಿತ್ಸೆ ನೀಡಿ, ಬಳಿಕ ಬೇರೊಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಕ್ತಸ್ರಾವದಿಂದ ಆಕೆ ಮೃತಪಟ್ಟಿದ್ದಳು. ಮೃತ ವೈದ್ಯ ವಂದನಾ ಅವರು ಕೊಲ್ಲಂನ ಅಜೀಜಿಯಾ ವೈದ್ಯಕೀಯ ಕಾಲೇಜಿನಲ್ಲಿ ಹೌಸ್​ ಸರ್ಜನ್​ ಆಗಿ ಕೆಲಸ ಮಾಡುತ್ತಿದ್ದರು. ಕೊಲ್ಲಂ ಜಿಲ್ಲೆಯ ಕಡುಂತುರಿಟಿ ನಿವಾಸಿಗಳಾದ ಮೋಹನ್‌ದಾಸ್ ಮತ್ತು ವಸಂತ ಕುಮಾರಿ ದಂಪತಿಯ ಏಕೈಕ ಪುತ್ರಿಯಾಗಿದ್ದರು.

ವೈದ್ಯೆಯ ಮರಣೋತ್ತರ ಪರೀಕ್ಷೆ ಪೂರ್ಣಗೊಂಡಿದ್ದು, ತಿರುವನಂತಪುರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳು ಶ್ರದ್ಧಾಂಜಲಿ ಸಲ್ಲಿಸಿದರು. ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್, ಮುಖ್ಯಮಂತ್ರಿ ಪಿಣರಾಯಿ ವಿಜಯನ್, ವೈದ್ಯಕೀಯ ಶಿಕ್ಷಣ ಸಚಿವ ವಾಸವನ್ ಸೇರಿದಂತೆ ಹಲವರು ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ವಂದನಾ ಅವರಿಗೆ ನಮನ ಸಲ್ಲಿಸಿದರು.

ಮದ್ಯ ವ್ಯಸನಿಯಾಗಿದ್ದ ಆರೋಪಿ: ವೈದ್ಯೆಯ ಮೇಲೆ ದಾಳಿ ಮಾಡಿ ಕೊಂದ ಆರೋಪಿ ಸಂದೀಪ್ ಪ್ರಾಥಮಿಕ ಶಾಲಾ ಶಿಕ್ಷಕನಾಗಿದ್ದ. ಅತಿಯಾದ ಮದ್ಯವ್ಯಸನಿಯಾಗಿದ್ದು ಈತನನ್ನು ಹುದ್ದೆಯಿಂದ ವಜಾ ಮಾಡಲಾಗಿತ್ತು. ಕೆಲವು ದಿನಗಳ ಹಿಂದಷ್ಟೇ ಡಿ ಅಡಿಕ್ಟ್​ ಕೇಂದ್ರದಿಂದ ಹೊರಬಂದಿದ್ದ ಎಂದು ತಿಳಿದು ಬಂದಿದೆ. ವೈದ್ಯೆಯ ಮೇಲೆ ಕೊಲೆ ಮಾಡಿದ ಬಗ್ಗೆ ನಿಖರ ಕಾರಣ ತಿಳಿದುಬಂದಿಲ್ಲ. ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ಹಂತಕನನ್ನು ಪೊಲೀಸರು ವಿಚಾರಣೆ ನಡೆಸಿದ ಬಳಿಕ ವಿಷಯ ತಿಳಿದು ಬರಲಿದೆ.

ವೈದ್ಯರ ಪ್ರತಿಭಟನೆ: ಹತ್ಯೆ ನಡೆದ ಬಳಿಕ ವೈದ್ಯಲೋಕ ಅಚ್ಚರಿಗೆ ಒಳಗಾಗಿದೆ. ಇಂತಹ ಘಟನೆಗಳು ಮರುಕಳಿಸುತ್ತಿದ್ದರೂ, ಸರ್ಕಾರ ಯಾವುದೇ ಗಂಭೀರ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಆಸ್ಪತ್ರೆಯ ಮುಂಭಾಗ ಪ್ರತಿಭಟನೆ ವೈದ್ಯರು ನಡೆಸಿದರು. ವೈದ್ಯೆಯ ಮೇಲೆ ದಾಳಿ ನಡೆದಾಗ ಆಸ್ಪತ್ರೆಯಲ್ಲಿ ಪೊಲೀಸರು ಇದ್ದರು. ಈ ವೇಳೆಯೇ ಘಟನೆ ನಡೆದಿರುವುದು ಅಚ್ಚರಿ ಉಂಟು ಮಾಡಿದೆ.

ಇದನ್ನೂ ಓದಿ: ಚಿಕಿತ್ಸೆ ನೀಡ್ತಿದ್ದ ವೈದ್ಯೆಯನ್ನೇ ಚಾಕುವಿನಿಂದ ಇರಿದು ಕೊಂದ ಕೇಸ್​ ಆರೋಪಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.