ETV Bharat / bharat

ದೇಶದ ಹಲವೆಡೆ ಕಾಂಗ್ರೆಸ್‌ ದುರ್ಬಲ, ರಾಜ್ಯವಾರು ರೀತಿ ಬಿಜೆಪಿ ಮಣಿಸಬೇಕು: ಕೇರಳ ಸಿಎಂ ಪಿಣರಾಯಿ

ಕರ್ನಾಟಕ ಚುನಾವಣೆಯ ಫಲಿತಾಂಶವು ಬಿಜೆಪಿ ಮತ್ತು ಸಂಘ ಪರಿವಾರಕ್ಕೆ ಜನರು ನೀಡಿದ ಉತ್ತರ ಎಂದು ಪಿಣರಾಯಿ ವಿಜಯನ್​ ಹೇಳಿದರು.

ಪಿಣರಾಯಿ ವಿಜಯನ್
ಪಿಣರಾಯಿ ವಿಜಯನ್
author img

By

Published : May 15, 2023, 8:06 AM IST

ತ್ರಿಶ್ಶೂರ್​ (ಕೇರಳ): ಕರ್ನಾಟಕ ವಿಧಾನಸಭೆ ಚುನಾವಣೆಯ ಫಲಿತಾಂಶದ ಕುರಿತು ಭಾನುವಾರ ಪ್ರತಿಕ್ರಿಯಿಸಿದ ಕೇರಳ ಸಿಎಂ ಪಿಣರಾಯಿ ವಿಜಯನ್, "ಈ ಫಲಿತಾಂಶ ದೇಶದ ಧನಾತ್ಮಕ ಭವಿಷ್ಯವನ್ನು ಸೂಚಿಸುತ್ತದೆ. ಜನರು ಬಿಜೆಪಿಗೆ ತಕ್ಕ ಉತ್ತರ ನೀಡಿದ್ದಾರೆ" ಎಂದರು. ಆಡಳಿತಾರೂಢ ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್‌ನ (ಎಲ್‌ಡಿಎಫ್​) 2ನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ಸಾರ್ವಜನಿಕ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

"ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬಾರದು ಎಂಬ ಬಲವಾದ ಭಾವನೆ ದೇಶದಲ್ಲಿ ಮೂಡಿದೆ. ಕಾಂಗ್ರೆಸ್ ದೀರ್ಘಕಾಲ ದೇಶವನ್ನು ಏಕಾಂಗಿಯಾಗಿ ಆಳಿತ್ತು. ಪ್ರಸ್ತುತ ರಾಜಕೀಯ ಪರಿಸ್ಥಿತಿ ಹಾಗಿಲ್ಲ. ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯುವುದೇ ನಮ್ಮ ಗುರಿಯಾಗಬೇಕು. ಕಾಂಗ್ರೆಸ್ ಕೂಡ ಅದರಲ್ಲಿ ಪಾತ್ರ ವಹಿಸಬೇಕು. ಕಾಂಗ್ರೆಸ್ ಹಿಂದಿನಂತೆ ಪ್ರಬಲವಾಗಿಲ್ಲ ಎಂಬುದನ್ನೂ ಅರಿತುಕೊಳ್ಳಬೇಕು".

"ಬಿಜೆಪಿ ವಿರೋಧ ಪಕ್ಷದಲ್ಲಿ ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಚುನಾವಣೆಯಲ್ಲಿ ಸೋತರೂ ಅಧಿಕಾರಕ್ಕೆ ಬರಲು ಆ ಪಕ್ಷ ಪ್ರಯತ್ನಿಸುತ್ತದೆ. ಈ ಹಿಂದೆ ಕಾಂಗ್ರೆಸ್ ಶಾಸಕರು ಅವರ ಪ್ರಯತ್ನಕ್ಕೆ ಬೆಂಬಲ ನೀಡಿದ್ದರು. ಎಚ್ಚರಿಕೆ ವಹಿಸಬೇಕು" ಎಂದು ಸಿಎಂ ಕಿವಿಮಾತು ಹೇಳಿದ್ದಾರೆ.

"ದೇಶದಲ್ಲಿ ಏನು ಬೇಕಾದರೂ ಮಾಡಬಹುದು ಎಂಬುದು ಬಿಜೆಪಿ, ಆರ್‌ಎಸ್‌ಎಸ್ ಮತ್ತು ಸಂಘ ಪರಿವಾರದ ನಿಲುವಾಗಿತ್ತು. ಇದಕ್ಕೆ ಕರ್ನಾಟಕದ ಜನತೆ ಪ್ರತ್ಯುತ್ತರ ನೀಡಿದ್ದಾರೆ. ಹೀಗೇ ಮುಂದುವರಿಯಲು ಬಿಡುವುದಿಲ್ಲ ಎಂದು ತೋರಿಸಿಕೊಟ್ಟಿದ್ದಾರೆ. ಈಗ ದಕ್ಷಿಣ ಭಾರತದ ಯಾವುದೇ ರಾಜ್ಯದಲ್ಲಿಯೂ ಬಿಜೆಪಿ ಆಡಳಿತವಿಲ್ಲ" ಎಂದು ಪಿಣರಾಯಿ ಸಂತಸ ವ್ಯಕ್ತಪಡಿಸಿದರು.

"ಬದಲಾಗುತ್ತಿರುವ ಸನ್ನಿವೇಶಕ್ಕೆ ಅನುಗುಣವಾಗಿ ನಾವೂ ಕೆಲಸ ಮಾಡಬೇಕು. ಕಾಂಗ್ರೆಸ್ ಪಕ್ಷ ಅದನ್ನು ಅರಿತುಕೊಳ್ಳಬೇಕು. ಹಲವಾರು ವರ್ಷಗಳಿಂದ ದೇಶದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್, ಇಂದು ದೇಶದ ಹಲವಾರು ಭಾಗಗಳಲ್ಲಿ ದುರ್ಬಲವಾಗಿದೆ. ಬಿಜೆಪಿ ರಾಜ್ಯವಾರು ರೀತಿಯಲ್ಲಿ ಸಂಪೂರ್ಣವಾಗಿ ಸೋಲಿಸುವ ಪ್ರಾಯೋಗಿಕ ತಂತ್ರ ಅನುಸರಿಸಬೇಕು. ಎಲ್ಲ ಗುಂಪುಗಳನ್ನು ಒಗ್ಗೂಡಿಸಿ ರಾಜ್ಯವಾರು ಬಿಜೆಪಿಯನ್ನು ಎದುರಿಸಬೇಕು" ಎಂದು ಅವರು ಸಲಹೆ ನೀಡಿದ್ದಾರೆ.

"ಬಿಜೆಪಿಯನ್ನು ಸಂಪೂರ್ಣವಾಗಿ ಸೋಲಿಸಲು ಈ ತಂತ್ರವನ್ನು ಅಳವಡಿಸಿಕೊಳ್ಳುವುದು ಪ್ರಾಯೋಗಿಕ ಮಾರ್ಗ. ಮೈತ್ರಿಕೂಟದ ಬಿಜೆಪಿ ವಿರೋಧಿ ಗುಂಪುಗಳ ನಡುವೆ ಅನಗತ್ಯ ವಾದ ಮತ್ತು ಸಂಘರ್ಷಗಳನ್ನು ತಪ್ಪಿಸಬೇಕು" ಎಂದು ಕಿವಿಮಾತು ಹೇಳಿದ್ದಾರೆ.

ಮೇ 10 ರಂದು ನಡೆದ 224 ಸದಸ್ಯ ಬಲದ ಕರ್ನಾಟಕ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 135 ಸ್ಥಾನಗಳನ್ನು ಗೆದ್ದರೆ, ಬಿಜೆಪಿ ಮತ್ತು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ನೇತೃತ್ವದ ಜನತಾ ದಳ (ಜಾತ್ಯತೀತ) ಕ್ರಮವಾಗಿ 66 ಮತ್ತು 19 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.

ಇದನ್ನೂ ಓದಿ: ಅತಿಯಾದ ಆತ್ಮವಿಶ್ವಾಸ, ಹೊಸ ಪ್ರಯೋಗ ಸೋಲಿಗೆ ಕಾರಣ: ಸಿ.ಟಿ.ರವಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.