ETV Bharat / bharat

ಬಿಹಾರದಲ್ಲಿ ನಿತೀಶ್ ಕುಮಾರ್ ಭೇಟಿ ಮಾಡಿದ ತೆಲಂಗಾಣ ಸಿಎಂ ಕೆಸಿಆರ್‌: ಹೊಸ ರಾಜಕೀಯ ಸಮೀಕರಣ - ಮುಂದಿನ ಲೋಕಸಭೆ ಚುನಾವಣೆ

ಬಿಹಾರದಲ್ಲಿ ಆಡಳಿತದ ಚುಕ್ಕಾಣಿ ಬದಲಾಗುತ್ತಿದ್ದಂತೆ ತೆಲಂಗಾಣ ಸಿಎಂ ಕೆಸಿಆರ್​ ಆ ರಾಜ್ಯಕ್ಕೆ ಭೇಟಿ ನೀಡಿರುವುದು ಹೊಸ ರಾಜಕೀಯ ಲೆಕ್ಕಾಚಾರಗಳಿಗೆ ನಾಂದಿ ಹಾಡಿದೆ.

kcr-lands-in-patna-cm-nitish-kumar-receives-him
ಬಿಹಾರದಲ್ಲಿ ಬದಲಾದ ಆಡಳಿತದ ಚುಕ್ಕಾಣಿ: ಕುತೂಹಲ ಮೂಡಿಸಿದ ಕೆಸಿಆರ್​ ಭೇಟಿ
author img

By

Published : Aug 31, 2022, 3:41 PM IST

ಪಾಟ್ನಾ (ಬಿಹಾರ): ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್​ ಬಿಹಾರ ಪ್ರವಾಸದಲ್ಲಿದ್ದಾರೆ. ಇಂದು ರಾಜಧಾನಿ ಪಾಟ್ನಾಕ್ಕೆ ಆಗಮಿಸಿದ ಅವರನ್ನು ಬಿಹಾರ ಮುಖ್ಯಮುಂತ್ರಿ ನಿತೀಶ್​ ಕುಮಾರ್ ಹಾಗೂ ಉಪ ಮುಖ್ಯಮಂತ್ರಿ ತೇಜಶ್ವಿ ಯಾದವ್​ ಆತ್ಮೀಯವಾಗಿ ಬರಮಾಡಿಕೊಂಡರು. ಬಳಿಕ ಸಿಎಂ ಕಚೇರಿಯಲ್ಲಿ ಉಭಯ ನಾಯಕರು ಮಾತುಕತೆ ನಡೆಸಿದ್ದಾರೆ.

ಈ ಸಂದರ್ಭದಲ್ಲಿ ಕೆಸಿಆರ್ ಇತ್ತೀಚೆಗೆ ರಾಜ್ಯದಲ್ಲಿ ನಡೆದ ಅಗ್ನಿ ದುರಂತದ 12 ಸಂತ್ರಸ್ತ ಕುಟುಂಬಸ್ಥರು ಹಾಗೂ ಗಾಲ್ವಾನ್​ ಕಣಿವೆಯ ಐವರು ಹುತಾತ್ಮ ಯೋಧರ ಕುಟುಂಬಗಳಿಗೆ ಪರಿಹಾರದ ಚೆಕ್​ಗಳನ್ನು ವಿತರಿಸಿದರು.

  • Patna, Bihar | Telangana CM K Chandrashekar Rao along with Bihar CM Nitish Kumar & Dy CM Tejashwi Yadav provides financial assistance to the families of Indian soldiers who lost their lives in Galwan valley &to the families of 12 Bihar workers who died in a fire accident recently pic.twitter.com/P3CYpEOy8L

    — ANI (@ANI) August 31, 2022 " class="align-text-top noRightClick twitterSection" data=" ">

ಭೇಟಿ ರಾಜಕೀಯ ಮಹತ್ವವೇನು?: ಮುಂದಿನ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿ ಅವರನ್ನು ಎದುರಿಸಲು ಪ್ರತಿಪಕ್ಷಗಳ ನಾಯಕರನ್ನು ಒಗ್ಗೂಡಿಸಬೇಕೆಂಬ ಪ್ರಯತ್ನದಲ್ಲಿ ಕೆಸಿಆರ್ ಇದ್ದಾರೆ. ಇದರ ಭಾಗವಾಗಿಯೇ ಬಿಹಾರಕ್ಕೂ ಅವರು ಭೇಟಿ ಕೊಟ್ಟಿದ್ದಾರೆ. ಈ ಹಿಂದೆ ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​, ತಮಿಳುನಾಡು ಸಿಎಂ ಎಂ ಕೆ ಸ್ವಾಲಿನ್​, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಜಾರ್ಖಂಡ್​ ಸಿಎಂ ಹೇಮಂತ್​ ಸೊರೇನ್​ ಹಾಗೂ ಮಹಾರಾಷ್ಟ್ರದ ಮಾಜಿ ಸಿಎಂ ಉದ್ಧವ್​ ಠಾಕ್ರೆ ಅವರನ್ನು ಕೆಸಿಆರ್​ ಭೇಟಿ ಮಾಡಿದ್ದರು. ಈಗ ನಿತೀಶ್​ ಕುಮಾರ್​ ಬಿಜೆಪಿ ಮೈತ್ರಿಯಿಂದ ಹೊರ ಬರುತ್ತಿದ್ದಂತೆ ಬಿಹಾರಕ್ಕೂ ಕಾಲಿಟ್ಟಿದ್ದು, ಹೊಸ ರಾಜಕೀಯ ಸಮೀಕರಣದ ಕುತೂಹಲ ಮೂಡಿಸಿದೆ.

ಇದನ್ನೂ ಓದಿ: ಸ್ಪೀಕರ್​​, ಡೆಪ್ಯೂಟಿ ಸ್ಪೀಕರ್​ ವಿರುದ್ಧ ಜಾಮೀನು ರಹಿತ ವಾರಂಟ್​... ಕಾರಣ ಏನು ಗೊತ್ತಾ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.