ETV Bharat / bharat

ಶ್ರೀನಗರ ಎನ್​ಐಟಿಯಲ್ಲಿ ಸ್ಥಳೀಯೇತರ ವಿದ್ಯಾರ್ಥಿಯಿಂದ ಅವಹೇಳನಕಾರಿ ಪೋಸ್ಟ್​ ಆರೋಪ: ಭುಗಿಲೆದ್ದ ಪ್ರತಿಭಟನೆಗಳು

NIT Srinagar Blasphemous Post Row: ಶ್ರೀನಗರದ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯ ಸ್ಥಳೀಯೇತರ ವಿದ್ಯಾರ್ಥಿಯೊಬ್ಬ ಪ್ರವಾದಿ ವಿರುದ್ಧ ಅವಹೇಳನಕಾರಿ ಪೋಸ್ಟ್​ ಹಾಕಿರುವ ಬಗ್ಗೆ ಪ್ರಕರಣ ದಾಖಲಾಗಿದೆ. ಇದರ ವಿರುದ್ಧ ಭುಗಿಲೆದ್ದ ಪ್ರತಿಭಟನೆಗಳು ಭುಗಿಲೆದ್ದಿವೆ.

kashmiri-students-protest-against-blasphemous-post-by-non-local-student-at-nit-srinagar
ಶ್ರೀನಗರ ಎನ್​ಐಟಿಯಲ್ಲಿ ಸ್ಥಳೀಯೇತರ ವಿದ್ಯಾರ್ಥಿಯಿಂದ ಅವಹೇಳನಕಾರಿ ಪೋಸ್ಟ್​ ಆರೋಪ: ಭುಗಿಲೆದ್ದ ಪ್ರತಿಭಟನೆಗಳು
author img

By ETV Bharat Karnataka Team

Published : Nov 30, 2023, 4:17 PM IST

ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಕಣಿವೆ ನಾಡು ಜಮ್ಮು ಮತ್ತು ಕಾಶ್ಮೀರದ ಶ್ರೀನಗರ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ (National Institute of Technology - NIT)ಯಲ್ಲಿ ಪ್ರವಾದಿ ವಿರುದ್ಧ ಸ್ಥಳೀಯೇತರ ವಿದ್ಯಾರ್ಥಿಯೊಬ್ಬ ಅವಹೇಳನಕಾರಿ ಪೋಸ್ಟ್​ ಹಾಕಿರುವ ಆರೋಪ ಕೇಳಿ ಬಂದಿದ್ದು, ವಿವಾದ ಭುಗಿಲೆದ್ದಿದೆ. ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟನೆ ಶುರು ಮಾಡಿದ್ದಾರೆ. ಇದೇ ವೇಳೆ, ಗುರುವಾರ ಪೊಲೀಸ್ ಮಹಾನಿರ್ದೇಶಕ ಆರ್​.ಆರ್.ಸ್ವೈನ್​ ಅವರು ಈ ಬೀದಿ ಪ್ರತಿಭಟನೆಗಳ ಬಗ್ಗೆ ಎಚ್ಚರಿಕೆ ನೀಡಿದ್ದು, ಕಾಶ್ಮೀರದಲ್ಲಿ ಹಳೆಯ ಕೋಮು ಸೌಹಾರ್ದತೆ ಕದಡುವ ಉದ್ದೇಶ ಹೊಂದಾಗಲಿದೆ ಎಂದು ಹೇಳಿದ್ದಾರೆ.

ಎನ್​ಐಟಿಯಲ್ಲಿ ಸ್ಥಳೀಯನಲ್ಲದ ವಿದ್ಯಾರ್ಥಿ ಅವಹೇಳನಕಾರಿ ಪೋಸ್ಟ್​ ಹಾಕಿದ್ದಾನೆ ಎಂದು ಮಂಗಳವಾರ ಸಂಜೆಯೇ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಬುಧವಾರದಿಂದ ಕಣಿವೆ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳ ಸಹ ಪ್ರತಿಭಟನೆಗೆ ಇಳಿದಿದ್ದಾರೆ. ಹೀಗಾಗಿ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಯ ಹದಗೆಡುವ ಆತಂಕದ ಅಧಿಕಾರಿಗಳು ತರಗತಿಗಳು ಮತ್ತು ಪರೀಕ್ಷೆಗಳನ್ನೂ ಸ್ಥಗಿತಗೊಳಿಸಿದ್ದಾರೆ.

ಮತ್ತೊಂದೆಡೆ, ಈ ಬಗ್ಗೆ ಎನ್​ಐಟಿ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದಾರೆ. ಇದರ ಆಧಾರದ ಮೇಲೆ ನ.28ರಂದು ನಿಗೀನ್​ ಪೊಲೀಸ್​ ಠಾಣೆಯಲ್ಲಿ ವಿವಿಧ ಸೆಕ್ಷನ್​ಗಳಡಲಿ ಎಫ್​ಐಆರ್​ ದಾಖಲಾಗಿದೆ. ಅಲ್ಲದೇ, ವದಂತಿಗಳು, ಸುಳ್ಳು ಮಾಹಿತಿಗಳನ್ನು ಹರಡುವುದರಿಂದ ದೂರವಿರುವಂತೆ ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ. ಜನತೆ ಸಮಾಜ ವಿರೋಧಿಗಳ ಸುಳ್ಳು ಪ್ರಚಾರಕ್ಕೆ ಬಲಿಯಾಗಬಾರದು. ಪ್ರಚೋದನಕಾರಿ ಕೃತ್ಯ, ಪ್ರಚೋದನೆಯಲ್ಲಿ ತೊಡಗಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರತಿಭಟನೆಗಳ ಬಗ್ಗೆ ಡಿಜಿಪಿ ಎಚ್ಚರಿಕೆ: ಈ ನಡುವೆ ಗುರುವಾರ ಜಮ್ಮುವಿನಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಜಮ್ಮು ಮತ್ತು ಕಾಶ್ಮೀರ ಡಿಜಿಪಿ, ''ಜಮ್ಮು ಮತ್ತು ಕಾಶ್ಮೀರ ಪೊಲೀಸರು ಪ್ರವಾದಿಗಳನ್ನು ಹೆಚ್ಚು ಗೌರವಿಸುತ್ತಾರೆ. ಜನರ ಭಾವನೆಗೆ ಧಕ್ಕೆ ತರಲು ನಾವು ಬಿಡುವುದಿಲ್ಲ. ಇದು ನಮ್ಮ ಕಾನೂನಾತ್ಮಕ ಕರ್ತವ್ಯವಾಗಿದೆ ಮತ್ತು ಈ ಬಗ್ಗೆ ಯಾರಿಗೂ ಯಾವುದೇ ಅನುಮಾನ ಬೇಡ'' ಎಂದು ಹೇಳಿದರು.

  • Police has taken cognizance of the incident of uploading of sensitive content against religious sentiments of a particular community by one student of NIT Srinagar.
    Upon receipt of communication from NIT authorities, case FIR No.156/23 u/s 295A,153A,153 IPC registered (1/2)

    — Srinagar Police (@SrinagarPolice) November 29, 2023 " class="align-text-top noRightClick twitterSection" data=" ">

ಮುಂದುವರೆದು ಅವರು, ''ಧಾರ್ಮಿಕ ಭಾವನೆಗಳನ್ನು ನೋವಿಸಲು ಯಾವುದೇ ದುಷ್ಕರ್ಮಿಗಳಿಗೂ ಕೂಡ ಅವಕಾಶ ನೀಡಲ್ಲ. ಜಮ್ಮು ಮತ್ತು ಕಾಶ್ಮೀರ ಪೊಲೀಸರು ಕಾನೂನಿನ ರಕ್ಷಕರಾಗಿರುವುದರಿಂದ ಕಾನೂನಿಗೆ ಬದ್ಧರಾಗಿರುತ್ತಾರೆ. ಕೋಮು ಸೌಹಾರ್ದತೆಯು ಕಾಶ್ಮೀರದ ಪ್ರಾಚೀನ ಸಂಪ್ರದಾಯ. ದುಷ್ಕರ್ಮಿಗಳ ಕೆಟ್ಟ ತಂತ್ರಗಳಿಗೆ ಬಲಿಯಾಗಬೇಡಿ ಮತ್ತು ಕೈಗೊಂಬೆಗಳಾಗಬೇಡಿ ಎಂದು ನಾವು ಜನರಿಗೆ ಮನವಿ ಮಾಡುತ್ತೇವೆ. ಪೊಲೀಸರು ಈ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುತ್ತಾರೆ'' ಎಂದು ಸ್ಪಷ್ಟಪಡಿಸಿದರು.

  • in PS Nigeen on 28.11.23.
    Common public is appealed to desist from spreading rumours/false information.They shouldn't fall prey to false propaganda of anti-social elements. Legal action shall be taken against those who are found to be involved in provocative act/instigation.(2/2)

ಅದೇ ಸಮಯದಲ್ಲಿ ಘಟನೆಯ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸದಂತೆ ಎಚ್ಚರಿಕೆ ನೀಡಿದ ಡಿಜಿಪಿ, ''ಈ ಪ್ರತಿಭಟನೆಗಳನ್ನು ತಮ್ಮ ಸ್ವಂತ ಲಾಭಕ್ಕಾಗಿ ಬಳಸಿಕೊಳ್ಳಲು ಪಟ್ಟಭದ್ರ ಹಿತಾಸಕ್ತಿಗಳಿಗೆ ಅವಕಾಶ ನೀಡಬೇಡಿ. ಇಂತಹ ಅಂಶಗಳ ಬಗ್ಗೆ ಜನರು ಜಾಗೃತರಾಗಬೇಕು. ಬೀದಿಗಿಳಿದು ಗಲಭೆ ಮಾಡಿ ಕೋಮು ಸೌಹಾರ್ದ ಕದಡುವ ಕೆಲಸ ಮಾಡಲು ಬಿಡುವುದಿಲ್ಲ'' ಎಂದು ತಿಳಿಸಿದರು.

ಇದನ್ನೂ ಓದಿ: ತಾಜ್​ ಮಹಲ್​ ಸೌಂದರ್ಯ ಕುಂದಿಸುತ್ತಿರುವ ಕೀಟಗಳು; ಕ್ರಮಕ್ಕೆ ಮುಂದಾದ ಎಎಸ್​ಐ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.