ETV Bharat / bharat

ಕಾಶ್ಮೀರ ಹುತಾತ್ಮರ ದಿನ: ಗೃಹ ಬಂಧನದಲ್ಲಿ ಮೆಹಬೂಬಾ ಮುಫ್ತಿ?

author img

By

Published : Jul 13, 2023, 4:00 PM IST

ಇಂದು ಹುತಾತ್ಮರ ಸ್ಮಶಾನಕ್ಕೆ ತೆರಳಲು ಬಯಸಿದ್ದರಿಂದ ನಾನು ಗೃಹಬಂಧನದಲ್ಲಿದ್ದೇನೆ ಎಂದು ಮೆಹಬೂಬಾ ಮುಫ್ತಿ ಹೇಳಿಕೊಂಡಿದ್ದಾರೆ.

ಮೆಹಬೂಬಾ ಮುಫ್ತಿ
ಮೆಹಬೂಬಾ ಮುಫ್ತಿ
ಮೆಹಬೂಬಾ ಮುಫ್ತಿ

ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಕಾಶ್ಮೀರ ರಾಜ್ಯದ ಏಕೈಕ ಮಹಿಳಾ ಮುಖ್ಯಮಂತ್ರಿಯಾಗಿದ್ದ ಮೆಹಬೂಬಾ ಮುಫ್ತಿ ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಅಧ್ಯಕ್ಷೆ, ಶ್ರೀನಗರದ ಖಿಂಬರ್ ಪ್ರದೇಶದಲ್ಲಿ ತಮ್ಮ ಮನೆಯಲ್ಲಿ "ಗೃಹಬಂಧನದಲ್ಲಿ"ಇರುವುದಾಗಿ ಹೇಳಿಕೊಂಡಿದ್ದಾರೆ. ಅವರು ಹುತಾತ್ಮರ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ನ್ಯಾಷನಲ್ ಕಾನ್ಫರೆನ್ಸ್‌ನ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಜತೆಗೂಡಿ ಪಕ್ಷದ ಕಚೇರಿಗೆ ತೆರಳಬೇಕಾಗಿತ್ತು.

" ಹುತಾತ್ಮರ ಸ್ಮರಣೆಗಾಗಿ ಸ್ಮಶಾನಕ್ಕೆ ಭೇಟಿ ನೀಡಲು ಬಯಸಿದ್ದಕ್ಕಾಗಿ ನಾನು ಗೃಹಬಂಧನದಲ್ಲಿದ್ದೇನೆ. ಕಾಶ್ಮೀರದಲ್ಲಿ ಪರಿಸ್ಥಿತಿ ಸಾಮಾನ್ಯಕ್ಕಿಂತ ವಿಭಿನ್ನವಾಗಿರುವ ಕಾರಣ ನನ್ನನ್ನು ಇಂದು ಗೃಹಬಂಧನದಲ್ಲಿ ಇರಿಸಲಾಗಿದೆ. ಇದು ಸಾಮಾನ್ಯ ಸ್ಥಿತಿಯ ಅವರ ನಕಲಿ ಹಕ್ಕುಗಳನ್ನು ಬಹಿರಂಗಪಡಿಸುತ್ತಿದೆ ಎಂದು ಮೆಹಬೂಬಾ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಜಮ್ಮು ಮತ್ತು ಕಾಶ್ಮೀರ: ಗಡಿ ನಿಯಂತ್ರಣ ರೇಖೆ ದಾಟುತ್ತಿದ್ದ ಶಂಕಿತ ಮಹಿಳೆಯನ್ನು ಗುಂಡಿಕ್ಕಿ ಕೊಂದ ಭದ್ರತಾ ಪಡೆ

ಬಿಜೆಪಿಯ ಹೀರೋಗಳಾದ ಸಾರ್ವರ್ಕರ್, ಶ್ಯಾಮ ಪ್ರಸಾದ್ ಮುಖರ್ಜಿ, ಮಾಧವ್ ಸದಾಶಿವರಾವ್ ಗೋಳ್ವಾಲ್ಕರ್ ಮತ್ತು ನಾಥೂರಾಮ್ ಗೋಡ್ಸೆ ಸಿದ್ದಾಂತಗಳ ಮೂಲಕ, ಬಲವಂತವಾಗಿ ನಮ್ಮ ಮೇಲೆ ದ್ವೇಷ ಮತ್ತು ಒಡಕು ಹರಡುವುದನ್ನು ಬಲವಂತವಾಗಿ ಹೇರಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಜಮ್ಮು ಕಾಶ್ಮೀರದಲ್ಲಿ ಪ್ರಜಾಪ್ರಭುತ್ವವನ್ನು ಸ್ಥಾಪಿಸಲು, ಅದಕ್ಕಾಗಿ ಪ್ರಾಣ ತ್ಯಾಗ ಮಾಡಿದವರನ್ನು ಈ ಸಂದರ್ಭದಲ್ಲಿ ನಾನು ಸದಾ ನೆನಪಿಸಿಕೊಳ್ಳುತ್ತೇನೆ. ರಾಜ್ಯದ ಏಳಿಗೆಗಾಗಿ ಹೋರಾಡಿ ಹುತಾತ್ಮರಾದವರು ಯಾವಾಗಲೂ ಜನರ ಮನಸಿನಲ್ಲಿರುತ್ತಾರೆ ಎಂದು ಮೆಹಬೂಬಾ ಮುಪ್ತಿ ಸ್ಮರಿಸಿಕೊಂಡಿದ್ದಾರೆ.

ಇದನ್ನೂ ಓದಿ: ಏಕರೂಪ ನಾಗರಿಕ ಸಂಹಿತೆ ಕೂಗಿನ ಮಧ್ಯೆಯೇ ರಾಹುಲ್, ಖರ್ಗೆಗೆ ಉತ್ತರಾಖಂಡದ 5 ಲೋಕಸಭಾ ಸ್ಥಾನಗಳನ್ನು ಗೆಲ್ಲುವ ಗುರಿ..

ವೀರಾವೇಶದಿಂದ ಹೋರಾಡಿದ ಅವರ ಧೈರ್ಯವನ್ನು ಮೆಚ್ಚುತ್ತೇನೆ: ಹುತಾತ್ಮರ ದಿನದ ಸಂದರ್ಭದಲ್ಲಿ ಹುತಾತ್ಮರಿಗೆ ನಮನ ಸಲ್ಲಿಸಿದ ಅವರು, ನಮ್ಮ ಇತಿಹಾಸವನ್ನು ತಿರುಚಲು ನಾವು ನಿಮಗೆ ಅವಕಾಶ ನೀಡುವುದಿಲ್ಲ. ಹುತಾತ್ಮರ ದಿನದ ಸಂದರ್ಭದಲ್ಲಿ, ನಿರಂಕುಶಾಧಿಕಾರಿಗಳ ವಿರುದ್ಧ ಕೊನೆಯವರೆಗೂ ವೀರಾವೇಶದಿಂದ ಹೋರಾಡಿದ ಅವರ ಧೈರ್ಯಕ್ಕೆ ನಾನು ವಂದಿಸುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ: 370ನೇ ವಿಧಿ ರದ್ದಾದ ಬಳಿಕ ಕಾಶ್ಮೀರ ಶಾಂತ, ಶೂನ್ಯಕ್ಕಿಳಿದ ಕಲ್ಲು ತೂರಾಟ, ಉಗ್ರವಾದ: ಕೇಂದ್ರ ಸರ್ಕಾರ

ತನ್ನ ಟ್ವೀಟ್‌ನ ಜೊತೆಗೆ, ಮೆಹಬೂಬಾ ಕೆಲವು ಫೋಟೋಗಳು ಮತ್ತು ವಿಡಿಯೋಗಳನ್ನು ಸಹ ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಅವರು ಮತ್ತು ಅವರ ಮಗಳು ನಿವಾಸದ ಗೇಟ್ ತೆರೆಯಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಸರಪಳಿಗಳು ಮತ್ತು ಕನ್ಸರ್ಟಿನಾ ವೈರ್‌ನಿಂದ ಗೇಟ್ ಅನ್ನು ನಿರ್ಬಂಧಿಸಲಾಗಿದೆಯೇ ಎಂದು ಮೆಹಬೂಬಾ ಸಿಬ್ಬಂದಿಯನ್ನು ಕೇಳುತ್ತಿರುವುದು ವಿಡಿಯೋದಲ್ಲಿ ನಾವು ಕಾಣಬಹುದು. ಅಧಿಕಾರಿಗಳ ಪ್ರಕಾರ, ಮೆಹಬೂಬಾ ಅವರು, ಅಪಾಯಕಾರಿ ಪರಿಸ್ಥಿತಿ ಎದುರಿಸುತ್ತಿರುವ ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಗೆ ಭೇಟಿ ನೀಡುವ ಬಯಕೆ ಹೊಂದಿದ್ದರು. ಭದ್ರತಾ ಕಾರಣಗಳಿಂದ ಅಲ್ಲಿನ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ನಿಷೇಧಿತ ಸಂಘಟನೆಗಳಿಗೆ ಮರುಜೀವ, ಭಯೋತ್ಪಾದನೆಗೆ ಸಂಚು ಆರೋಪ: 10 ಮಂದಿ ಅರೆಸ್ಟ್​, ವಿವಿಧೆಡೆ ಎನ್​ಐಎ ದಾಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.